ಆರ್‌ಸಿಬಿ ಆರ್‌ಸಿಬಿ ಆರ್‌ಸಿಬಿ… ದೇಶದ ಯಾವ ಮೂಲೆಗೆ ಹೋದ್ರೂ RCBಯದ್ದೇ ಸುದ್ದಿ, 18 ವರ್ಷಗಳ ಬಳಿಕ ಐಪಿಎಲ್ ಸಖತ್ ಆಗಿ ಮಿಂಚಿದ ಆರ್‌ಸಿಬಿ ಕೊನೆಗೂ ಟ್ರೋಫಿಗೆ ಮುತ್ತಿಟ್ಟಿದೆ.
ಆದರೆ ಫೈನಲ್ ಪಂದ್ಯ ಮುಗಿದ ಮರುದಿನ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ದುರಂತ, ಆರ್ಸಿಬಿಗೆ ಕಪ್ಪು ಚುಕ್ಕೆಯಾಗಿ ಉಳಿದಿದೆ. ಸದಾ ಆರ್‌ಸಿಬಿ ತಂಡ, 2026ರ ಋತುವಿನಿಂದ ನಿಷೇಧದ ಭೀತಿಯನ್ನು ಎದುರಿಸುತ್ತಿದೆಯೇ? ಅನ್ನೋ ಪ್ರಶ್ನೆ ಭಾರತೀಯ ಕ್ರಿಕೆಟ್ ವಲಯಗಳಲ್ಲಿ ಮತ್ತು ಆರ್‌ಸಿಬಿ ಅಭಿಮಾನಿಗಳ ನಡುವೆ ತೀವ್ರ ಚರ್ಚೆಯ ವಿಷಯವಾಗಿದೆ.
ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತ ಹಿನ್ನೆಲೆಯಲ್ಲಿ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ತಂಡದ ಮೇಲೆ ನಿಷೇಧ ಹೇರುವ ಚಿಂತನೆಯೂ ಇದೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳಿಗೆ ಬರಸಿಡಿಲೇ ಬಡಿದಂತಾಗಿದೆ..
ಆರ್‌ಸಿಬಿಯ ವಿಜಯೋತ್ಸವದಲ್ಲಿ ನಡೆದ ದುರಂತಕ್ಕೆ ಕಾರಣ ಯಾರು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ. ತನಿಖೆಯಲ್ಲಿ ಆರ್‌ಸಿಬಿ ತಪ್ಪಿತಸ್ಥ ಅಂತಾದರೆ ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಪ್ರಶ್ನೆಯಿದೆ. ಐಪಿಎಲ್‌ನಲ್ಲಿರುವ ಎಲ್ಲಾ ಫ್ರಾಂಚೈಸಿಗಳು ವಾಣಿಜ್ಯ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತವೆ.
ಆದರೆ ಅವುಗಳ ಭಾಗವಹಿಸುವಿಕೆಯನ್ನು ಬಿಸಿಸಿಐ ತನ್ನ ಒಪ್ಪಂದಗಳಿಂದ ನಿಯಂತ್ರಿಸುತ್ತದೆ. ಆ ಒಪ್ಪಂದ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಹಲವು ನಿಯಮಗಳನ್ನೂ ಒಳಗೊಂಡಿದೆ. ತನಿಖಾಧಿಕಾರಿಗಳು ಈ ಗಂಭೀರ ನಿರ್ಲಕ್ಷ್ಯಕ್ಕೆ ಆರ್‌ಸಿಬಿಯನ್ನು ಹೊಣೆ ಮಾಡಿದರೆ, ನ್ಯಾಯ ಒದಗಿಸಲು ಮತ್ತು ಲೀಗ್‌ನ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳಬಹುದು ಎನ್ನಲಾಗಿದೆ.
Read Also : ರಾಜ್ಯದಲ್ಲಿ ‘Corona’ಗೆ 9 ಮಂದಿ ಬಲಿ, ಹೆಚ್ಚಿದ ಆತಂಕ..!
ಇನ್ನು, 18 ವರ್ಷಗಳ ಬಳಿಕ ಸಿಕ್ಕಿದ ಸಂತೋಷಕ್ಕೆ ಈಗ ಸೂತಕದ ಛಾಯೆ ಆವರಿಸಿದ್ದು, ಆರ್‌ಸಿಬಿ ಬ್ಯಾನ್ ಆಗುತ್ತಾ ಇಲ್ವಾ? ಕಾದು ನೋಡಬೇಕಿದೆ..

