ಬೆಂಗಳೂರು ಮಹಾನಗರ ಪಾಲಿಕೆ ಇನ್ಮುಂದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ಅಧಿಕೃತವಾಗಿ ಜಾರಿ ಆಗಿದೆ. ಬಿಬಿಎಂಪಿ ಆಡಳಿತ ಇದೀಗ ಅಧಿಕೃತವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಎಂಬುದು ಜಾರಿಗೆ ಬಂದಿದೆ. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಪೋರೇಷನ್ ಸರ್ಕಲ್‌ನಲ್ಲಿರುವ ಜಿಬಿಎ ಕೇಂದ್ರ ಕಚೇರಿಯಲ್ಲಿ ನೂತನ ಫಲಕವನ್ನು ಅನಾವರಣಗೊಳಿಸಿದರು.

69 ವರ್ಷಗಳಿಂದ ಮೇಯರ್ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ BBMP ಫಲಕವನ್ನು ತೆರವುಗೊಳಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಫಲಕವನ್ನು ಅಳವಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಎಸ್.ಟಿ. ಸೋಮಶೇಖರ್ ಅವರು ಡಿಕೆ ಶಿವಕುಮಾರ್ ಅವರಿಗೆ ಸಾಥ್ ನೀಡಿದರು.
ಜಿಬಿಎ ಫಲಕ ಅನಾವರಣದ ಬಳಿಕ ಜಿಬಿಎ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, “ಸೆಪ್ಟೆಂಬರ್ 3, 2025 ಒಂದು ಐತಿಹಾಸಿಕ ದಿನ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇಂದಿನಿಂದ ಜಾರಿಗೆ ಬಂದಿದೆ. ಕೂಡಲೇ ಜಿಬಿಎನ ಮೊದಲ ಸಭೆಯನ್ನು ನಡೆಸಿ ಕೆಲಸ ಆರಂಭಿಸುತ್ತೇವೆ,” ಎಂದು ಹೇಳಿದರು. ಬಳಿಕ, “ಎಲ್ಲಾ ನಗರ ಪಾಲಿಕೆಯ ಅಧಿಕಾರಿಗಳು ಇಂದಿನಿಂದ ತಮ್ಮ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದಾರೆ. ಈಗಾಗಲೇ ಗಡಿಗಳನ್ನು ನಿಗದಿಪಡಿಸಿ, ವಲಯ ವಿಂಗಡಣೆಯನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸ್ವಚ್ಛತೆ, ರಸ್ತೆ ಸುಧಾರಣೆ, ಮತ್ತು ಆಡಳಿತದ ದೃಷ್ಟಿಯಿಂದ 500 ಹೊಸ ಇಂಜಿನಿಯರ್‌ಗಳ ನೇಮಕಾತಿಯನ್ನು ಕೈಗೊಳ್ಳಲಾಗುವುದು,” ಎಂದು ತಿಳಿಸಿದರು.