Site icon BosstvKannada

ಮತ್ತೆ ಹಿಂಸಾಚಾರಕ್ಕೆ ತೆರೆದುಕೊಂಡ ಬಾಂಗ್ಲಾ

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಜುಲೈ ದಂಗೆಯ ಸಂಘಟಕ ಷರೀಫ್ ಉಸ್ಮಾನ್ ಹಾದಿ(Sharif Osman Hadi) ಸಿಂಗಾಪುರದಲ್ಲಿ ನಿಧನರಾದ ಆನಂತರ ಢಾಕಾ ಮತ್ತು ಚಟ್ಟೋಗ್ರಾಮ್ ಸೇರಿದಂತೆ ಬಾಂಗ್ಲಾದೇಶದ ಹಲವೆಡೆ ಪ್ರತಿಭಟನೆಗಳು (Bangladesh Protests) ನಡೆಯುತ್ತಿವೆ. ಹೀಗಾಗಿ ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಉಸ್ಮಾನ್ ಹಾದಿ ಮೇಲೆ ಫೈರಿಂಗ್ ನಡೆದಿತ್ತು. ಹೀಗಾಗಿ ಅವರು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿತಿಕ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ರಾಜ್‌ಶಾಹಿಯಲ್ಲಿರುವ ಅವಾಮಿ ಲೀಗ್‌ನ ಕಚೇರಿಗೆ ಬೆಂಕಿ ಹಚ್ಚಲಾಗಿದೆ ಎಂದು ಕೂಡ ವರದಿಯಾಗಿದೆ.

ಬಂಗಾಳಿ ಭಾಷೆಯ ಪತ್ರಿಕೆಗಳಲ್ಲಿ ಒಂದಾದ ಪ್ರೋಥೋಮ್ ಅಲೋ ಕಚೇರಿಯ ಮೇಲೂ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದು ದೊಡ್ಡ ಹಿಂಸಾಚಾರಕ್ಕೆ ಕಾರಣವಾಗಿತ್ತು. ಹೀಗಾಗಿ ಹಸೀನಾ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು.

Exit mobile version