Site icon BosstvKannada

Bangalore Stampede : ಆರ್‌ಸಿಬಿ ಅಭಿಮಾನಿಗಳ ಮಾರಣಹೋಮ : ಮೃತಪಟ್ಟವರ ವಿವರ ಇಲ್ಲಿದೆ

18 ವರ್ಷಗಳ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಐಪಿಎಲ್ (IPL) ಟ್ರೋಪಿ ಎತ್ತಿಹಿಡಿದ ಸಂಭ್ರಮವನ್ನು ಬೆಂಗಳೂರಿನಲ್ಲಿ ಸರ್ಕಾರ ಮತ್ತು ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಆಚರಿಸ ಲಾಯಿತು.

ಐಪಿಎಲ್ ಟ್ರೋಫಿ ಗೆದ್ದು ಬಂದ ಕಲಿಗಳನ್ನು ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಿಲ್ಲಿಸಿ ಸರ್ಕಾರದ ಪ್ರತಿನಿಧಿಗಳು ಹೂವಿನ ಹಾರಹಾಕುತ್ತಿದ್ದರೆ, ಅಲ್ಲಿಂದ ಕೂಗಳತೆ ದೂರದಲ್ಲೇ ಇರುವ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಡೆ ಕಾಲ್ತುಳಿತದಿಂದಾಗಿ (Bangalore Stampede) ಆರ್​ಸಿಬಿ ಅಭಿಮಾನಿಗಳ ಮಾರಣಹೋಮ ವೇ ನಡೆದುಹೋಯಿತು.

ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯನವರೇ ಹೇಳಿದ್ದಾರೆ.

ಕಾಲ್ತುಳಿತದಲ್ಲಿ ಮೃತಪಟ್ಟವರ ವಿವರ

ಭೂಮಿಕ್, 20 ವರ್ಷ (ನೆಲಮಂಗಲ)

ಸಹನ 19 ವರ್ಷ (ಕೋಲಾರ)

ಪೂರ್ಣಚಂದ, 32 ವರ್ಷ (ಮಂಡ್ಯ)

ಚಿನ್ಮಯಿ, 19 ವರ್ಷ

ದಿವ್ಯಾಂಶಿ, 13 ವರ್ಷ

ಶ್ರವಣ್, 20 ವರ್ಷ (ಚಿಕ್ಕಬಳ್ಳಾಪುರ)

ದೇವಿ, 29 ವರ್ಷ

ಶಿವಲಿಂಗ್, 17 ವರ್ಷ

ಮನೋಜ್, 33 ವರ್ಷ (ತುಮಕೂರು)

ಅಕ್ಷತಾ, (ಮಂಗಳೂರು)

ಮತ್ತೊಬ್ಬರ ಹೆಸರು ಪತ್ತೆಯಾಗಿಲ್ಲ, 20 ವರ್ಷ ವೈದೇಹಿ ಆಸ್ಪತ್ರೆ

ಮೃತರ ಪೈಕಿ ಶ್ರವಣ್, ಭೂಮಿಕ್, ಮನೋಜ್, ಚಿನ್ಮಯಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯರಾತ್ರಿಯೇ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಇನ್ನುಳಿದ ಮೃತದೇಹಗಳ ಮರಣೋತ್ತರ ಪರೀಕ್ಷೆ ಇಂದು ನಡೆದಿದೆ..

Exit mobile version