ಬೆಂಗಳೂರು: ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಕಿರಾತಕನೊಬ್ಬ ಭೀಕರವಾಗಿ ದಾಳಿ ಮಾಡಿರುವ ಘಟನೆ ನಡೆದಿದೆ.
ಮನೆ ಮುಂದೆ ಆಟವಾಡುತ್ತಿದ್ದ ಬಾಲಕನಿಗೆ ಕಿರಾತಕ ಹಿಂಬದಿಯಿಂದ ಜಾಡಿಸಿ ಒದ್ದಿದ್ದಾನೆ. ಈ ಘಟನೆ ಬೆಂಗಳೂರಿನ ತ್ಯಾಗರಾಜನಗರದಲ್ಲಿ ಡಿ.14ರಂದು ನಡೆದಿದೆ. ಅಜ್ಜಿ ಮನೆಗೆ ಬಂದಿದ್ದ ಬಾಲಕ ನೀವ್ ಜೈನ್ ತನ್ನ ಪಾಡಿಗೆ ತಾನು ರಸ್ತೆಯಲ್ಲಿ ನಿಂತು ಆಟವಾಡುತ್ತಿದ್ದ. ಈ ವೇಳೆ ರಂಜನ್ ಜಾಡಿಸಿ ಒದ್ದಿದ್ದರಿಂದ ಬಾಲಕ ಮುಗ್ಗರಿಸಿ ಬಿದ್ದಿದ್ದಾನೆ.
ಫುಟ್ಬಾಲ್ ರೀತಿ ರಂಜನ್ ಒದ್ದಿದ್ದ ಕಾರಣ ಬಾಲಕನಿಗೆ ತರಚಿದ ಗಾಯಗಳಾಗಿವೆ. ಬಾಲಕನನ್ನು ರಂಜನ್ ಒದೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿ ವಿರುದ್ಧ ಬಾಲಕನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಸ್ಟೇಷನ್ ಬೇಲ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ಸಾರ್ವಜನಿಕರು ತೀವ್ರವಾಗಿ ಖಂಡಿಸಿದ್ದಾರೆ.

