Site icon BosstvKannada

ಅಶ್ವಿನಿ, ಗಿಲ್ಲಿ ಕಿತ್ತಾಟ! : ವೋಟಿಂಗ್ ಇಲ್ಲದೆ ಇಬ್ಬರು ಔಟ್‌! ಅಸಲಿ ಕಥೆ ಇಲ್ಲಿದೆ!

ಬಿಗ್‌ಬಾಸ್‌.. ಕರುನಾಡಿನ ಅತಿ ದೊಡ್ಡ ರಿಯಾಲಿಟ್‌ ಶೋ, ಇನ್ನೇನು ಕ್ಲೈಮ್ಯಾಕ್ಸ್‌ ಹತ್ತಿರ ಬರುತ್ತಿರುವ ಗೇಮ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್‌ ಸ್ಪರ್ಧಿಗಳು, ಅಭಿಮಾನಿಗಳು ಫುಲ್‌ ಶಾಕ್‌ ಆಗಿದ್ದಾರೆ. ಮೊದಲೇ ಹೇಳಿದಂತೆ ಬಿಗ್‌ಬಾಸ್‌ ಥೀಮ್ ಎಕ್ಸ್‌ಪೆಕ್ಟ್‌ ದಿ ಅನ್‌ಎಕ್ಸ್‌ಪೆಕ್ಟೆಡ್.. ಅದಕ್ಕೆ ತಕ್ಕಂತೆ ಇದೀಗ ಬಿಗ್‌ ಬ್ರೇಕಿಂಗ್‌ ನ್ಯೂಸ್‌ ಹೊರಬಂದಿದ್ದು, ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಿಂದ ಔಟ್‌ ಆಗಿದ್ದಾರೆ. ಅಸಲಿ ವಿಷ್ಯ ಏನಪ್ಪಾ ಅಂದ್ರೆ, ಇವರಿಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳಲ್ಲ. ಅತಿಥಿಗಳಷ್ಟೇ! ಏನ್‌ ಬಿಗ್‌ ಟ್ವಿಸ್ಟ್‌ನಿಂದ ಎಲ್ಲರೂ ಫುಲ್‌ ಸೈಕ್‌ ಆಗಿದ್ದಾರೆ.

ಬಿಗ್‌ಬಾಸ್‌ ಅಡ್ಡದಲ್ಲಿ ಕಳೆದ ವಾರ ಎಲಿಮಿನೇಷನ್ ನಡೆದಿಲ್ಲ. ಎಲಿಮಿನೇಷನ್ ಹೆಸರಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಹೊರಗೆ ಕಳಿಸಿದ್ದ ಬಿಗ್​​ಬಾಸ್ ಅವರಿಬ್ಬರನ್ನೂ ಸೀಕ್ರೆಟ್ ರೂಂನಲ್ಲಿ ಇರಿಸಿ, ಅವರನ್ನೂ ಸಹ ಟಾಸ್ಕ್‌ನ ಒಂದು ಭಾಗವಾಗಿಸಿದ್ದರು. ವೀಕ್‌ ಎಂಡ್‌ನಲ್ಲಿ ಎಪಿಸೋಡ್‌ನಲ್ಲಿ ರಕ್ಷಿತಾ ಮತ್ತು ಧ್ರುವಂತ್ ಅವರನ್ನು ಮತ್ತೆ ಮರಳಿ ಮನೆಗೆ ಕರೆಸಿಕೊಂಡ ಬಿಗ್‌ಬಾಸ್‌ ಇದೀಗ ಈ ವಾರವೂ ಯಾವುದೇ ಎಲಿಮಿನೇಷನ್ ಮಾಡಿಲ್ಲ. ಬದಲಿಗೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬಂದಿದ್ದವರನ್ನು ಮನೆಯಿಂದ ಹೊರಗೆ ಕಳಿಸಿದ್ದಾರೆ. ಇನ್ನು ಕೆಲ ವಾರಗಳ ಹಿಂದೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಂ, ಮೋಕ್ಷಿತಾ ಅವರುಗಳು ಅತಿಥಿಗಳಾಗಿ ಬಂದಿದ್ದರು. ಒಂದು ವಾರದ ನಂತರ ಉಗ್ರಂ ಮಂಜು, ತ್ರಿವಿಕ್ರಂ, ಮೋಕ್ಷಿತಾ ಮನೆಯಿಂದ ಹೊರಗೆ ಹೋದರು. ಆದರೆ ರಜತ್ ಹಾಗೂ ಚೈತ್ರಾ ಅವರನ್ನು ವೈಲ್ಡ್ ಕಾರ್ಡ್ ಎಂಟ್ರಿಗಳು ಎಂದು ಹೇಳಿ, ಇನ್ನು ಮುಂದೆ ಅವರೂ ಸಹ ನಿಮ್ಮೊಂದಿಗೆ ಸ್ಪರ್ಧೆಯಲ್ಲಿರುತ್ತಾರೆ ಎಂದು ಇತರೆ ಸ್ಪರ್ಧಿಗಳಿಗೆ ಹೇಳಿ ಮನೆಯಲ್ಲಿ ಉಳಿಸಲಾಗಿತ್ತು. ರಜತ್ ಮತ್ತು ಚೈತ್ರಾ ಅವರುಗಳು ಸುಮಾರು 4 ವಾರಗಳ ಕಾಲ ಬಿಗ್​​ಬಾಸ್ ಮನೆಯಲ್ಲಿದ್ದರು. ಚೆನ್ನಾಗಿ ಆಟ ಆಡಿದ್ದಾರೆ. ಕೆಲವರ ವಿರೋಧ ಕಟ್ಟಿಕೊಂಡರು. ರಜತ್ ಅಂತೂ ಕಳೆದ ವಾರ, ನಾನು, ಗಿಲ್ಲಿ ಹಾಗೂ ಇನ್ನಿತರರನ್ನು ಮನೆಯಿಂದ ಹೊರಗೆ ಹಾಕಿಯೇ ಈ ಮನೆ ಬಿಟ್ಟು ಹೋಗೋದು ಎಂದು ಅಬ್ಬರಿಸಿದ್ದರು. ಆದರೆ ಈ ವಾರ ಅವರೇ ಮನೆಯಿಂದ ಹೊರಗೆ ಹೋಗಿದ್ದಾರೆ.

ಚೈತ್ರಾ ಕುಂದಾಪುರ ಹಾಗೂ ರಜತ್‌ ಬುಜ್ಜಿ ಹೊರಗೆ ಹೋದ ಬೆನ್ನಲ್ಲೇ ಸ್ಪರ್ಧಿಗಳ ಮಧ್ಯೆ ಬಿಗ್‌ ಫೈಟ್‌ ನಡೆದಿದೆ. ಅದರಲ್ಲೂ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಟಾಸ್ಕ್‌ ವಿಚಾರದಲ್ಲಿ ಕಿತ್ತಾಟವೇ ನಡೆದು ಹೋಗಿದೆ. ಬೇಕು ಅಂತಾನೇ ನಿನ್ನ ಸೋಲಿಸಿದ್ದು ಅಂತಾ ಗಿಲ್ಲಿಗೆ ಅಶ್ವಿನಿಗೌಡ ಸಿಟ್ಟಲ್ಲೇ ಹೇಳಿದ್ದು, ಗಿಲ್ಲಿ ಕೂಡ ಸಖತ್‌ ಕೌಂಟರ್‌ ಕೊಟ್ಟಿದ್ದಾರೆ. ಇದ್ರಿಂದಾಗಿ ದೊಡ್ಮನೆಯಲ್ಲಿ ಸ್ಪರ್ಧಿಗಳ ಫೈಟ್‌ ರೋಚಕ ತಿರುವು ಪಡೆದಿದೆ. ಸದ್ಯ ಬಿಗ್‌ಬಾಸ್‌ ಗೇಮ್‌ ಮುಗಿಯಲು ಕೆಲವು ವಾರಗಳ ಅಷ್ಟೇ ಬಾಕಿ ಉಳದಿದ್ದು, ಇದನ್ನೆಲ್ಲಾ ನೋಡ್ತಿದ್ರೆ, ಬಿಗ್‌ಬಾಸ್‌ ಬಿಗ್‌ ಪ್ಲಾನ್‌ ರೆಡಿಯಾಗಿದೆ ಎನ್ನಲಾಗಿದೆ. ಮುಂದಿನ ವಾರದಲ್ಲಿ ಮಾಸ್‌ ಎಲಿಮಿನೇಷನ್‌ ನಡೆಯುತ್ತಾ ಎಂಬ ನಯಾ ಸುದ್ದಿ ಬಿಗ್‌ಬಾಸ್‌ ಅಡ್ಡದಿಂದ ಕೇಳಿಬರುತ್ತಿದ್ದು, ಏನ್‌ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Exit mobile version