ಬ್ಯಾಂಕ್‌ನಲ್ಲಿ ಕೆಲಸ ಹುಡುಕುತ್ತೀದ್ದೀರಾ.. ಹಾಗಾದ್ರೆ ಇಲ್ಲಿದೆ ನಿಮಗೆ Goodnews. ಐಡಿಬಿಐ ಬ್ಯಾಂಕ್‌ನಲ್ಲಿ ಜೂನಿಯರ್ ಅಸಿಸ್ಟಂಟ್ ಹುದ್ದೆ ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಮೂಲಕ ಮೇ ಇಪ್ಪತ್ತನೇ ತಾರೀಖಿನ ಒಳಗೆ ಅರ್ಜಿಯನ್ನ ಸಲ್ಲಿಸಲು ಅವಕಾಶವಿದೆ. ಒಟ್ಟು 676 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಇನ್ನು ಈ ಹುದ್ದೆಗೆ ಅಪ್ಲೈ ಮಾಡಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಇದಲ್ಲದೇ ವಯೋಮಿತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ ಕನಿಷ್ಠ ವಯಸ್ಸನ್ನು 20 ವರ್ಷಗಳು ಮತ್ತು ಗರಿಷ್ಠ 25 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತೆ.
Also Read: ENG vs IND : ಇಂಗ್ಲೆಂಡ್ ಪ್ರವಾಸಕ್ಕೆ ಅಚ್ಚರಿಯ ತಂಡ ಪ್ರಕಟ..!
ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ವರ್ಗಕ್ಕೆ 1050 ರೂಪಾಯಿ ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ವರ್ಗಕ್ಕೆ 250 ರೂಪಾಯಿ ಅರ್ಜಿ ಶುಲ್ಕ ಇರಲಿದೆ. ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ದಿನಾಂಕವನ್ನು ಐಡಿಬಿಐ ಜೂನ್ 8 ಎಂದು ಘೋಷಿಸಿದೆ. ಪರೀಕ್ಷೆಗೆ ಕೆಲವು ದಿನಗಳ ಮೊದಲು ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತೆ.
ಆಸಕ್ತ ಅಭ್ಯರ್ಥಿಗಳು IDBI ಅಧಿಕೃತ ವೆಬ್‌ಸೈಟ್ www.idbibank.in ಗೆ ಭೇಟಿ ನೀಡುವ ಮೂಲಕ ಅಥವಾ ibpsonline.ibps.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

