ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ನಾಯಕರಿಗೆ ಎಲೆಕ್ಷನ್ ಕಮಿಷನ್ ಮೇಲೆ ಅನುಮಾನ.. ಪ್ರತಿಬಾರಿಯೂ ಎಲೆಕ್ಷನ್ ನಡೆದಾಗಲೂ ಡೌಟ್ ಪಡೋದು ಕಾಮನ್ ಆಗಿಬಿಟ್ಟಿದೆ.. ಆದ್ರೆ, ಈ ಬಾರಿ ಎಲೆಕ್ಷನ್ ಕಮಿಷನ್ ಮೇಲೆ ಕಾಂಗ್ರೆಸ್ ನಾಯಕರು ಅತಿದೊಡ್ಡ ಬ್ರಹ್ಮಾಸ್ತ್ರ ಸಿಡಿಸಲು ಸಜ್ಜಾಗಿದ್ದಾರೆ.. ಚುನಾವಣಾ ಆಯೋಗದ ಅಕ್ರಮ ಆರೋಪಗಳ ಮೂಟೆ ಹೊತ್ತು ರಾಹುಲ್ ಗಾಂಧಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದು, ಭಾರಿ ಸಂಚಲನ ಸೃಷ್ಟಿಸಿದೆ…
ಎಲೆಕ್ಷನ್ ಕಮಿಷನ್ ವಿರುದ್ಧ ರಾಹುಲ್ ಬಾಂಬ್!
ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಮೇಲೆ ಅತಿದೊಡ್ಡ ಬಾಂಬ್ ಸಿಡಿಸಿದ್ರು.. ಚುನಾವಣೆ ವೇಳೆ ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಚುನಾವಣಾ ಆಯೋಗ ಅಕ್ರಮ ನಡೆಸಿದೆ.. ಅದರ ಸಂಪೂರ್ಣ ದಾಖಲೆಗಳಿವೆ ಅಂತಾ ಹೇಳಿದ್ರು.. ಇದರ ಮುಂದುವರಿದ ಭಾಗವಾಗಿಯೇ ರಾಹುಲ್ ಗಾಂಧಿ ರಾಜಧಾನಿಗೆ ಎಂಟ್ರಿ ಕೊಡುತ್ತಿದ್ದಾರೆ.. ಚುನಾವಣಾ ಆಯೋಗದ ವಿರುದ್ಧ ಗುಂಪು ಕಟ್ಟಿಕೊಂಡು ಹೋರಾಟಕ್ಕೆ ರಣಕಹಳೆ ಮೊಳಗಿಸಿದ್ದಾರೆ.
ರಾಹುಲ್ ಅಖಾಡ ರೆಡಿ!
ಬಿಜೆಪಿಗಾಗಿ ಚುನಾವಣಾ ಆಯೋಗವು ಮತಗಳ್ಳತನದಲ್ಲಿ ಭಾಗಿಯಾಗಿರುವುದಕ್ಕೆ ಶೇಕಡ 100ರಷ್ಟು ಪುರಾವೆಗಳಿವೆ ಅಂತಾ ರಾಹುಲ್‌ಗಾಂಧಿ ಆರೋಪಿಸಿದ್ದರು. ಇದಕ್ಕಾಗಿ 6 ತಿಂಗಳು ನಮ್ಮದೇ ತನಿಖೆಯನ್ನು ನಡೆಸಿ ‘ಅಣು ಬಾಂಬ್’ನಂತಹ ಪುರಾವೆಯನ್ನು ನಾವು ಹೊಂದಿದ್ದೇವೆ. ಇದು ಸ್ಫೋಟಗೊಂಡಾಗ ಚುನಾವಣಾ ಆಯೋಗಕ್ಕೆ ಮರೆಮಾಚಲು ಸಾಧ್ಯವಾಗುವುದಿಲ್ಲ ಅಂತಾ ಗಟ್ಟಿಯಾಗಿ ಹೇಳಿದ್ದರು.. ಇದೇ ಗಟ್ಟಿ ಆರೋಪವನ್ನು ಹೊತ್ತು ಈಗ ರಾಹುಲ್ ಬೆಂಗಳೂರಿಗೆ ಬರ್ತಿದ್ದು, ಆಗಸ್ಟ್ 8ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ.
ರಾಹುಲ್ ರಣಕಹಳೆ ಸಜ್ಜಾಗಿದೆ ಫ್ರೀಡಂ ಪಾರ್ಕ್..!
ಚುನಾವಣಾ ಆಯೋಗದ ವಿರುದ್ಧ ಆಗಸ್ಟ್ 4ರಂದೇ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿತ್ತು.. ಆದ್ರೆ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ನಿಧನರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಮಾವೇಶವನ್ನು ಆಗಸ್ಟ್ 8ಕ್ಕೆ ಮುಂದೂಡಿತ್ತು.. ನಾಡಿದ್ದು 10.30ಕ್ಕೆ ರಾಜ್ಯಕ್ಕೆ ರಾಹುಲ್ ಎಂಟ್ರಿ ಕೊಡಲಿದ್ದು, ಎಲೆಕ್ಷನ್ ಕಮಿಷನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ಕಾಂಗ್ರೆಸ್‌ನ ಎಲ್ಲಾ ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದು, ಹೋರಾಟದ ವೇಳೆ ಕೆಲ ದಾಖಲೆಗಳನ್ನ ಸಾರ್ವಜನಿಕವಾಗಿ ಬಿಡುಗಡೆಗೊಳಿಸುವ ಸಾಧ್ಯತೆ ಇದೆ.. ಹೀಗಾಗಿ, ಇಡೀ ದೇಶದ ಚಿತ್ತ ಈಗ ರಾಹುಲ್ ಗಾಂಧಿ ಯಾವ ದಾಖಲೆ ಬಿಡುಗಡೆ ಮಾಡ್ತಾರೆ ಅನ್ನೋದರತ್ತ ನೆಟ್ಟಿದೆ.
ರಾಹುಲ್ ಗಾಂಧಿ ಆರೋಪಕ್ಕೆ ಎಲೆಕ್ಷನ್ ಕಮಿಷನ್ ತಿರುಗೇಟು!
ಇನ್ನು ರಾಹುಲ್ ಗಾಂಧಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಅವರ ಆರೋಪ ನಿರಾಧಾರವಾಗಿದೆ. ಬೇಜವಾಬ್ದಾರಿ ಹೇಳಿಕೆ ನಿರ್ಲಕ್ಷಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಅಲ್ಲದೇ ದಾಖಲೆಗಳನ್ನು ಬಿಡುಗಡೆ ಮಾಡುವಂತೆಯೂ ಹೇಳಿದೆ.. ಮತ್ತೊಂದ್ಕಡೆ, ಚುನಾವಣಾ ಆಯೋಗಕ್ಕೆ ಬೆಂಬಲ ನೀಡಿರುವ ಬಿಜೆಪಿ, ಕೈ ಪ್ರತಿಭಟನೆ ಕೌಂಟರ್ ಕೊಡಲು ಸಜ್ಜಾಗಿದೆ.
ಅದೇನೆ ಆಗ್ಲಿ ನಾಡಿದ್ದು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ದೊಡ್ಡ ಮಟ್ಟದ ಹೋರಾಟ ಮಾಡೋದಂತೂ ನಿಜ. ಆದ್ರೆ ದಾಖಲೆ ಬಿಡುಗಡೆ ಮಾಡಿದ್ರೆ ಚುನಾವಣಾ ಆಯೋಗದ ಮೇಲೆ ಅದೆಷ್ಟು ಪರಿಣಾಮ ಬೀರುತ್ತೆ ಅಂತಾ ಕಾದು ನೋಡ್ಬೇಕಿದೆ.

