Site icon BosstvKannada

ಅನುಶ್ರೀ ಕಲ್ಯಾಣ ವೈಭೋಗ.. ಮದುವೆ ಸಂಭ್ರಮದಲ್ಲಿ ಅಪ್ಪುವನ್ನು ಮರೆತಿಲ್ಲ..!

ಅಂತೂ ಇಂತೂ ಹಸೆ ಮಣೆ ಏರಿದ ಮಾತಿನ ಮಲ್ಲಿ.. ಪಟಾಕಿ ಅನುಶ್ರೀ ಮದುವೆಯಾದ್ರೂ, ಮದುವೆ ಸಂಭ್ರಮದಲ್ಲಿ ಅಪ್ಪು ಅಭಿಮಾನವನ್ನ ಮರೆತಿಲ್ಲ. ನಟಿ ಮತ್ತು ಕನ್ನಡದ ಬಲು ಜನಪ್ರಿಯ ನಿರೂಪಕಿ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನುಶ್ರೀ ಅವರು ತಮ್ಮ ಗೆಳೆಯ ರೋಷನ್ ಅವರೊಟ್ಟಿಗೆ ಮದುವೆ ಆಗಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿ ವಿವಾಹ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಕೆಂಪು, ಕೇಸರಿ ಬಣ್ಣದ ರೇಷ್ಮೆ ಸೀರೆಯಲ್ಲಿ ಅನುಶ್ರೀ ಅವರು ಕಂಗೊಳಿಸಿದ್ರೆ, ರೇಷ್ಮೆ ಪಂಚೆ, ಶರ್ಟ್‌ ಹಾಕಿ ರೋಷನ್‌ ಮಿಂಚಿದ್ದಾರೆ. ಇದೆಲ್ಲದಕ್ಕಿಂತಲೂ ಅಚ್ಚರಿ ಅಂದ್ರೆ ಅನುಶ್ರೀ ತಮ್ಮ ಫೇವರಿಟ್‌ ನಟನನ್ನು ಮರೆಯದೇ ಇರೋದು.. ಹೌದು.. ಮದುವೆಯಲ್ಲಿ ನಗುವಿನ ಅರಸ ಅಪ್ಪು ಭಾವಚಿತ್ರ ಹಾಕಿ ಅಭಿಮಾನ ಮೆರೆದಿದ್ದು, ಮದುವೆಗೆ ಬಂದವರೆಲ್ಲಾ ಅನುಶ್ರೀ ಅಭಿಮಾನ ಕಂಡು ಫಿದಾ ಆಗಿದ್ದಾರೆ.

ನೆಚ್ಚಿನ ನಟನ ಮುಂದೆ ಅನುಶ್ರೀ ಮದ್ವೆ!
ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಂದ್ರೆ ಪಟಾಕಿ ಅನುಶ್ರೀಗೆ ಎಷ್ಟು ಇಷ್ಟ ಅನ್ನೋದು ಇಡೀ ಕರುನಾಡಿಗೆ ಗೊತ್ತು. ಅನುಶ್ರೀ ಅವರು ಏನೇ ಶುಭ ಕಾರ್ಯ ಮಾಡಿದರೂ ಅಪ್ಪು ಅವರನ್ನು ನೆನೆಯುತ್ತಾರೆ. ಇದೀಗ ಮದುವೆ ಸಮಾರಂಭದಲ್ಲೂ ಅಪ್ಪು ಅವರ ಫೋಟೋವನ್ನು ಮಂಟಪದಲ್ಲಿ ಹಾಕಿಸಿದ್ದಾರೆ. ಹೌದು.. ಅನುಶ್ರೀ ಹಾಗೂ ರೋಷನ್ ವಿವಾಹವಾದ ಮಂಟಪದಲ್ಲಿ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನಿಡಲಾಗಿತ್ತು. ಹೂವುಗಳಿಂದ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ಇದೇ ಫೋಟೋ ನೋಡಿದ ಅಪ್ಪು ಅಭಿಮಾನಿಗಳು ಭಾವುಕರಾಗಿದ್ದಾರೆ. ಅನುಶ್ರೀ ಹಾಗೂ ರೋಷನ್ ವಿವಾಹದ ಬಳಿಕ ಅಪ್ಪು ಅವರ ಚಿತ್ರದ ಮುಂದೆ ನಿಂತು ಕೈ ಮುಗಿದು ಆಶೀರ್ವಾದವನ್ನೂ ಸಹ ಪಡೆದಿದ್ದು, ನೆರೆದಿದ್ದವರು ಮೆಚ್ಚುಗೆ ವ್ಯಕ್ತವಾಗಿದ್ದಾರೆ.

ಇನ್ನೂ, ನಿರೂಪಕಿ ಅನುಶ್ರೀ ಹಾಗೂ ರೋಷನ್​ ಅದ್ಧೂರಿ ಮದುವೆಗೆ ಸ್ಯಾಂಡಲ್‌ವುಡ್‌ ನಟ-ನಟಿಯರ ದಂಡೇ ಬಂದಿದ್ದು, ಶಿವಣ್ಣ ದಂಪತಿ, ರಚಿತಾ ರಾಮ್‌, ರಾಜ್​ ಬಿ ಶೆಟ್ಟಿ, ನೆನಪಿರಲಿ ಪ್ರೇಮ್, ತರುಣ್‌, ಸೋನಲ್, ನಟ ನಾಗಭೂಷಣ್, ಚೈತ್ರಾ ಆಚಾರ್, ನಟ ಶರಣ್​ ಸೇರಿದಂತೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ. ಅವರ ಪ್ರೀತಿಗೆ ಅನುಶ್ರೀ ಹಾಗೂ ರೋಷನ್‌ ಧನ್ಯವಾದ ತಿಳಿಸಿದ್ದಾರೆ.

Read Also : ರೋಷನ್ ತಾಳಿ ಕಟ್ಟುತ್ತಿದ್ದಂತೆ‌ ಕಣ್ಣೀರಿಟ್ಟ ಅನುಶ್ರೀ.. ಮದುವೆಯ ಫೋಟೋಸ್‌ ಇಲ್ಲಿವೆ ನೋಡಿ..!

ಸದ್ಯ ಬ್ಯಾಚುಲರ್ ಲೈಫ್‌ಗೆ ಗುಡ್‌ ಹೇಳಿ, ಸುಂದರ ಜೀವನ ನಡೆಸಲು ಸಜ್ಜಾಗಿರುವ ಅನುಶ್ರೀ ತಮ್ಮ ಪಟಾಕಿ ಮಾತುಗಳಿಂದ ಕರುನಾಡ ತುಂಬಾ ಫೇಮಸ್‌ ಆಗಿದ್ರು, ಆದ್ರೆ ಈಗ ಪವರ್‌ ಸ್ಟಾರ್‌ ಅಭಿಮಾನಿಯಾಗಿ ಮದುವೆಯಲ್ಲೂ ಪ್ರೀತಿಯ ಅಪ್ಪುನ ಮರೆಯದ ಅನುಶ್ರೀ ಅಭಿಮಾನಕ್ಕೆ ಎಲ್ಲಾರು ಫಿದಾ ಆಗಿದ್ದಂತೂ ಸುಳ್ಳಲ್ಲ.

Exit mobile version