Site icon BosstvKannada

ಚಿನ್ನಸ್ವಾಮಿಯಲ್ಲಿ ಮತ್ತೆ ಮ್ಯಾಚ್‌.. ಮಿಸ್‌ ಮಾಡ್ಕೋಬೇಡಿ ಈ ಚಾನ್ಸ್​?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ವಿಜಯೋತ್ಸವದ ದುರಂತದ ಬಳಿಕ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್​ ಪಂದ್ಯಗಳು ನಡೆಯುತ್ತವೋ, ಇಲ್ಲವೋ ಎನ್ನುವ ಅನುಮಾನ ಇದ್ದವು. ಜೂನ್ 4 ರಂದು ಆರ್​ಸಿಬಿ ವಿಜಯೋತ್ಸವದ ಸಮಾರಂಭದಲ್ಲಿ ಕಾಲ್ತುಳಿತ ಸಂಭವಿಸಿ 11 ಜನ ಉಸಿರು ಚೆಲ್ಲಿದ್ದರು. ಇದಾದ ಮೇಲೆ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ನಡೆಯಲ್ಲ ಎನ್ನಲಾಗಿತ್ತು. ಆದರೆ ಇದೀಗ ಕೆಎಸ್​ಸಿಎ ಟ್ರೋಫಿಯ ಪಂದ್ಯಗಳು ನಡೆಯಲಿವೆ ಎಂದು ಹೇಳಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕೆಎಸ್​ಸಿಎ ಕೆ ತಿಮ್ಮಪ್ಪಯ್ಯ ಮೆಮೊರಿಯಲ್ ಟ್ರೋಫಿಯನ್ನು ಆಯೋಜನೆ ಮಾಡಿದೆ. ಇದು ರೆಡ್​ ಬಾಲ್ ಪ್ರಿ-ಸೀಸನ್​ ಟೂರ್ನ್​ಮೆಂಟ್​ ಆಗಿದ್ದು ಒಟ್ಟು 16 ಟೀಮ್​ಗಳು ಇದರಲ್ಲಿ ಭಾಗವಹಿಸಲಿವೆ. ಪಂದ್ಯ ನಡೆಯುವ ವೇಳೆ ಸುರಕ್ಷತೆ ಕಾರಣದಿಂದ ಅಭಿಮಾನಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸೆಪ್ಟೆಂಬರ್​ 26 ರಿಂದ ಒಟ್ಟು 6 ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಇದರಲ್ಲಿ ಸೆಮಿ ಫೈನಲ್​ ಹಾಗೂ ಫೈನಲ್​ ಮ್ಯಾಚ್​ಗಳು ಕೂಡ ಸೇರಿವೆ. ಮುಂಬೈ, ವಿದರ್ಭ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ ಹಾಗೂ ಛತ್ತೀಸ್​ಘಡ ತಂಡಗಳು ಭಾಗಿಯಾಗಲಿವೆ.

ಮೊನ್ನೆ ಮೊನ್ನೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಣೆ ಮಾಡಿದ್ದರಿಂದ ಟಿ20 ಮಹಾರಾಜ ಟ್ರೋಫಿಯನ್ನು ಮೈಸೂರಿನಲ್ಲಿ ಆಯೋಜನೆ ಮಾಡಲಾಗಿತ್ತು. ದೊಡ್ಡ ದೊಡ್ಡ ಸಮಾರಂಭಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಸುರಕ್ಷತವಾಗಿಲ್ಲ ಎಂದು ಇತ್ತೀಚೆಗೆ ಕರ್ನಾಟಕ ಸರ್ಕಾರ ಹೊಸ ಕ್ರಿಕೆಟ್​ ಸ್ಟೇಡಿಯಂ ಅನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಇದು 75 ಎಕೆರೆಯಲ್ಲಿ ನಿರ್ಮಾಣವಾಗಲಿದ್ದು, 60 ಸಾವಿರ ಆಸನಗಳನ್ನು ಒಳಗೊಂಡಿರಲಿದೆ.

Read Also : ಕ್ರಿಕೆಟ್‌ಗೆ ಮತ್ತೊಬ್ಬ ಆಟಗಾರ ವಿದಾಯ.. ನಿವೃತ್ತಿ ಘೋಷಿಸಿದ ಅಮಿತ್‌ ಮಿಶ್ರಾ..!

Exit mobile version