ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಸರಣಿ ಸೋತ ನಂತರ ಏಕದಿನ ಸರಣಿ ಗೆದ್ದು ಬೀಗಿದೆ. ಈಗ ತಂಡದ ಮುಂದೆ ಮತ್ತೊಂದು ಸವಾಲು ಇದ್ದು, ಟಿ20 ಗೆಲ್ಲುವ ಉತ್ಸಾಹದಲ್ಲಿದೆ.

ಈಗಾಗಲೇ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದಿದೆ. ಈಗ ಎರಡೂ ತಂಡಗಳ ಮಧ್ಯೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಟೂರ್ನಿ ಡಿ. 9ರಿಂದ ಆರಂಭವಾಗಲಿದೆ. ಪ್ರತಿಯೊಂದು ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿವೆ.

ಟಿ20 ವಿಶ್ವಕಪ್ 2026 ರ ಹೊಸ್ತಿಲಿನಲ್ಲಿ ಈ ಸರಣಿಯು ಹೆಚ್ಚಿನ ಮಹತ್ವ ಪಡೆದಿದೆ. ಹೀಗಾಗಿ ಈ ಟೂರ್ನಿ ಆಟಗಾರರಿಗೆ ಹೆಚ್ಚಿನ ಮಹತ್ವ ಪಡೆದಿದೆ. ಆಟಗಾರರು ಉತ್ತಮ ಪ್ರದರ್ಶನ ತೋರಿ ಆಯ್ಕೆದಾರರ ಮನ ಗೆಲ್ಲಲು ಮುಂದಾಗಿದ್ದಾರೆ.

ಏಕದಿನ ಸರಣಿಯಲ್ಲಿ ತವರಿನಲ್ಲಿ ಪ್ರಾಬಲ್ಯ ಕಾಯ್ದುಕೊಂಡಿದ್ದ ಭಾರತ ತಂಡ ಈಗ ಟಿ20 ಮಾದರಿಯಲ್ಲಿ ತನ್ನ ಬಲ ಪ್ರದರ್ಶಿಸಲು ಮುಂದಾಗಿದೆ. ಸೂರ್ಯಕುಮಾರ್ ಯಾದವ್ ಈ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಶುಭ್ಮನ್ ಗಿಲ್ ಉಪನಾಯಕನಾಗಿ ಮರಳಲಿದ್ದು, ಬ್ಯಾಟಿಂಗ್ ಕ್ರಮಾಂಕದಲ್ಲಿ ಮತ್ತಷ್ಟು ಶಕ್ತಿ ಬರಲಿದೆ.

ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಹರ್ಷಿತ್ ರಾಣಾ ಅವರಂತಹ ಯುವ ಆಟಗಾರರನ್ನು ಒಳಗೊಂಡಿದ್ದರೆ, ದಕ್ಷಿಣ ಆಫ್ರಿಕಾವು ಐಡೆನ್ ಮಾರ್ಕ್ರಮ್, ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ಮಿಲ್ಲರ್‌ರಂತಹ ಅನುಭವಿ ಆಟಗಾರರನ್ನು ಹೊಂದಿದೆ. ಮೊದಲ ಪಂದ್ಯವು ಡಿ. 9(ಕಟಕ್‌) ನಡೆಯಲಿದೆ. ಎರಡನೇ ಪಂದ್ಯ ಡಿ. 11 – ನ್ಯೂ ಚಂಡೀಗಢ, ಮೂರನೇ ಪಂದ್ಯ ಡಿ. 14 – ಧರ್ಮಶಾಲಾ, ನಾಲ್ಕನೇ ಪಂದ್ಯ ಡಿ. 17 – ಲಕ್ನೋ, 5ನೇ ಪಂದ್ಯ ಡಿ. 19 ಅಹಮದಾಬಾದ್‌ ನಲ್ಲಿ ನಡೆಯಲಿದೆ.

Share.
Leave A Reply