ಢಾಕಾ: ಅವಿವೇಕಿ ಬಾಂಗ್ಲಾದ ಅಂತ್ಯಕಾಲ ಸಮೀಪಿಸಿದಂತಿದೆ. ಅಲ್ಲಿನ ಹಿಂಸಾಚಾರ (Bangladesh violence)ಗಳು ಇದನ್ನು ಜಗಜ್ಜಾಹೀರ ಮಾಡುತ್ತಿವೆ. ಅಲ್ಪಸಂಖ್ಯಾತರ ಮೇಲಿನ ಅಲ್ಲಿನ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಹೀಗಾಗಿ ತನ್ನನ್ನೇ ತಾನು ಬಲಿಕೊಟ್ಟುಕೊಳ್ಳಬಹುದೇ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗಷ್ಟೇ ಹಿಂದು ಯುವಕ ದೀಪು ಚಂದ್ರದಾಸ್ ಎನ್ನುವ ವ್ಯಕ್ತಿಯನ್ನು ದುರುಳರು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದರು. ಈಗ ಮತ್ತೋರ್ವ ಹಿಂದು ಧರ್ಮೀಯ ವ್ಯಕ್ತಿಯನ್ನು ಹತ್ಯೆ ಮಾಡಿದ್ದಾರೆ. ರಾಜಬರಿ ಜಿಲ್ಲೆಯ ಹೊಸಾಯಿದಂಗ ಓಲ್ಡ್ ಮಾರ್ಕೆಟ್ ಹತ್ತಿರ ಜನರ ಗುಂಪೊಂದು ಅಮೃತ್ ಮಂಡಲ್ ಅಲಿಯಾಸ್ ಸಾಮ್ರಾಟ್ನ ಮೇಲೆ ಹಲ್ಲೆ ನಡೆಸಿದೆ. 29 ವರ್ಷದ ಅಮೃತ್ ಮಂಡಲ್ ಎಂಬ ವ್ಯಕ್ತಿ ಕೊಲೆಯಾಗಿದ್ದಾನೆ.
ಹಿಂದೆ ದೀಪು ಚಂದ್ರದಾಸ್ ಸತ್ತ ನಂತರ ಆತನ ಮೇಲೆ ಆಪಾದನೆ ಮಾಡಿದಂತೆ ಈ ಯುವಕನ ಮೇಲೆಯೂ ಆಪಾದನೆ ಮಾಡುತ್ತಿದ್ದಾರೆ. ಆತ ಓರ್ವ ಸುಲಿಗೆಕೋರನೆಂದು ಸ್ಥಳೀಯ ಪೊಲೀಸರು ಆರೋಪಿಸಿದ್ದಾರೆ. ಸಾಮ್ರಾಟ್ ಮೇಲೂ ಕೂಡ ಸುಲಿಗೆಯ ಆರೋಪ ಹೊರಿಸಿ, ಕೊಲೆಯನ್ನು ಸಮರ್ಥನೆ ಮಾಡಿಕೊಳ್ಳಲು ಯತ್ನಿಸುತ್ತಿರಬಹುದು ಎನ್ನಲಾಗುತ್ತಿದೆ.
2024ರ ಬಾಂಗ್ಲಾ ದಂಗೆ ಮುಖ್ಯಸ್ಥ ಹಾಗೂ ಭಾರತ ವಿರೋಧಿ ಧೋರಣೆ ಹೊಂದಿದ್ದ ಉಸ್ಮಾನ್ ಹದಿ ಮೇಲೆ ಡಿಸೆಂಬರ್ ನಲ್ಲಿ ಗುಂಡಿನ ದಾಳಿ ನಡೆದಿತ್ತು. ಆನಂತರ ಬಾಂಗ್ಲಾದಲ್ಲಿ ಹಿಂಸಾಚಾರಗಳು ಹೆಚ್ಚುತ್ತಿವೆ.

