ರಾಯಚೂರು: ಇಂದು ಗುರುವಾರ ಹಾಗೂ ಕ್ರಿಸ್ ಮಸ್ ಇರುವ ಹಿನ್ನೆಲೆಯಲ್ಲಿ ರಜೆ ಇದೆ. ಹೀಗಾಗಿ ಮಂತ್ರಾಲಯಕ್ಕೆ ಭಕ್ತರು ಹರಿದು ಬಂದಿದ್ದಾರೆ.
ಹೀಗಾಗಿ ಭಕ್ತರಿಂದ ಮಂತ್ರಾಲಯ (Mantralaya) ರಾಘವೇಂದ್ರ ಸ್ವಾಮಿ ಮಠ ತುಂಬಿ ತುಳುಕುತ್ತಿದೆ. ಸಾಮಾನ್ಯವಾಗಿ ರಜಾ ದಿನಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುತ್ತಾರೆ. ಆದರೆ, ಭಕ್ತರ ಸಂಖ್ಯೆ ಇಂದು ದುಪ್ಪಟ್ಟಾಗಿದೆ. ಒಂದೇ ದಿನ ಲಕ್ಷಾಂತರ ಭಕ್ತರು ಮಠಕ್ಕೆ ಭೇಟಿ ನೀಡಿದ್ದರಿಂದ ಭಕ್ತರಿಗೆ ಸೌಲಭ್ಯ ಒದಗಿಸಲು ತೊಂದರೆ ಪಡುವಂತಾಗಿದೆ. ಬೃಂದಾವನ ದರ್ಶನಕ್ಕೆ ಅವಕಾಶವಿರುವ ಎಲ್ಲ ಬಾಗಿಲುಗಳನ್ನೂ ತೆರೆದು ಮಠದ ಆಡಳಿತ ಮಂಡಳಿ ದರ್ಶನಕ್ಕೆ ಅವಕಾಶ ನೀಡಿದೆ.
ಹೀಗಾಗಿ ಗಂಟೆಗಟ್ಟಲೇ ಕ್ಯೂ ನಿಲ್ಲುವಂತಾಗಿತ್ತು. ಶ್ರೀಮಠದ ರೂಂಗಳು ಭರ್ತಿಯಾಗಿದ್ದು, ಡಿ.23ರಿಂದ 2026ರ ಜ.15ರವರೆಗೆ ಯಾವುದೇ ರೂಮ್‌ಗಳು ಲಭ್ಯವಿರುವುದಿಲ್ಲವೆಂದು ಮಠದ ಆಡಳಿತ ಮಂಡಳಿ ಹೇಳಿದೆ.

