Ajit Dhoval: ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಉಗ್ರರ ನೆಲೆಗಳೇ ಧ್ವಂಸಗೊಂಡ್ವು. ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಕ್ಕೆ ಉಗ್ರರಿಗೆ ನೆರವು ನೀಡಿದ್ದಕ್ಕೆ ಈಗ ಪಾಕಿಸ್ತಾನ ಬೆಲೆ ತೆರುತ್ತಿದೆ.. ಪಾಕಿಸ್ತಾನದ ದೊಡ್ಡ ದೊಡ್ಡ ನಗರಗಳಿಗೆ ನುಗ್ಗಿ ಭಾರತೀಯ ಸೇನೆ ಹೊಡೆಯುತ್ತಿದೆ. ಇನ್ನೊಮ್ಮೆ ಉಗ್ರರಿಗೆ ನೆರವು ನೀಡಬಾರದು ಅನ್ನೋ ರೇಂಜಿಗೆ ಇಂಡಿಯನ್ ಆರ್ಮಿ ಪಾಠ ಕಲಿಸುತ್ತಿದೆ. ಹೀಗೆ, ವೈರಿ ದೇಶದೊಳಕ್ಕೆ ನುಗ್ಗಿ ಹೊಡೆಯುವ ಪ್ಲ್ಯಾನ್ ಹಿಂದೆ ಅದೊಂದು ದೈತ್ಯ ಶಕ್ತಿ ಇದೆ. ಪಾಕಿಸ್ತಾನದಲ್ಲೇ ಗೂಢಚಾರಿಕೆ ಮಾಡಿದ್ದ ಅದೊಬ್ಬ ಅಧಿಕಾರಿಯ ಬೆಂಬಲ ಇದೆ. ಅವರು ಹಾಕಿಕೊಟ್ಟ ಮಾರ್ಗದಲ್ಲೇ ಇಂದು ಪಾಕ್ಗೆ ನುಗ್ಗಿ ದಾಳಿ ಮಾಡಲು ಸಾಧ್ಯವಾಗಿದೆ..
ಅಷ್ಟಕ್ಕೂ ಪಾಕಿಸ್ತಾನಕ್ಕೆ ನುಗ್ಗಿ ದಾಳಿ ಮಾಡಲು ಸ್ಕೆಚ್ ರೂಪಿಸಿದ್ದು ಬೇರೆ ಯಾರೂ ಅಲ್ಲ. ಅಜಿತ್ ಧೋವಲ್ ಎಂಬ ಮಾಂತ್ರಿಕ. ಸದ್ಯ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿರುವ ಧೋವಲ್ ಪರಾಕ್ರಮ ಅಂತಿಂಥಾದ್ದಲ್ಲ. ಒಂದು ಕಾಲದಲ್ಲಿ ಪಾಕಿಸ್ತಾನದ ಮೂಲೆ ಮೂಲೆಗೆ ಸಂಚರಿಸಿದ್ದ ಧೋವಲ್, ಈಗ ಭಾರತದಲ್ಲಿದ್ದೇ ಪಾಕ್ನ ಉಡೀಸ್ ಮಾಡಿದ್ದಾರೆ. ಅದು ಹೇಗೆ ಅನ್ನೋದೇ ಒಂದು ರೋಚಕ ಕತೆ..
ಪಹಲ್ಗಾಮ್ ದಾಳಿ ನಡೆದ ಬೆನ್ನಲ್ಲೇ ಪ್ರಧಾನಿ ಮೋದಿ, ಎನ್ಎಸ್ಎ ಅಜಿತ್ ದೋವಲ್ಗೆ ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವಂತಹ ಪ್ಲಾನ್ ಕೊಡಿ ಅಂತಾ ಹೇಳಿದ್ರು. ಅದಾದ ಬಳಿಕ ಧೋವಲ್ ತಮ್ಮದೇ ಆದ ಒಂದು ವಿಶೇಷ ಟೀಮ್ ಅನ್ನು ರೆಡಿ ಮಾಡ್ತಾರೆ. ಅದು ದಾಳಿಗೂ ಮುನ್ನ ಹಲವು ಮಾಹಿತಿಯನ್ನು ಸಂಗ್ರಹಿಸಿದ್ದರು. ಯಾವ್ಯಾವ ಟಾರ್ಗೆಟ್ ಮೇಲೆ ದಾಳಿ ನಡೆಸಬೇಕು? ದಾಳಿ ಹೇಗಿರಬೇಕು? ಆಪರೇಷನ್ನಲ್ಲಿ ಯಾರ್ಯಾರು ಇರಬೇಕು? ಯಾವ್ಯಾವ ವೇಪನ್ ಬಳಸಬೇಕು? ಏನು ಮಾಡಿದ್ರೆ ಏನೆಲ್ಲಾ ಆಗುತ್ತೆ? ಎಂಬ ಸಂಪೂರ್ಣ ರಣತಂತ್ರವನ್ನು ಅಜಿತ್ ದೋವಲ್ ಹೆಣೆದಿದ್ದರು. ಪಾಕ್ಗೆ ತಿರುಗೇಟು ನೀಡಲು 15 ದಿನಗಳ ಬಳಿಕ ಫೂಲ್ ಫ್ರೂಪ್ ಪ್ಲಾನ್ ಅನ್ನು ರೂಪಿಸಿ ಮೋದಿಗೆ ಧೋವಲ್ ನೀಡಿದ್ರು. ಅದಕ್ಕೆ ಮೋದಿ ಗ್ರೀನ್ ಸಿಗ್ನಲ್ ನೀಡಿದ್ದರು.
ಆಪರೇಷನ್ಗೆ ಸಿಂಧೂರ ಎನ್ನುವ ಹೆಸರನ್ನು ಮೋದಿಯೇ ಸೂಚಿಸಿದ್ದರು. ಅಲ್ಲಿಂದ ಶುರುವಾಯ್ತು ನೋಡಿ ಪಾಕ್ ಹಾಗೂ ಪಿಒಕೆಯಲ್ಲಿ ಭಾರತೀಯ ಸೇನೆಯ ರಣಾರ್ಭಟ. ಆಪರೇಷನ್ ಸಿಂಧೂರದಲ್ಲಿ ಭಾರತೀಯ ವಾಯುಪಡೆ ಪ್ರಮುಖ ಪಾತ್ರ ವಹಿಸಿತ್ತು. ಮಾರಕ SCALP ಮಿಸೈಲ್ ಮತ್ತು HAMMER ಬಾಂಬ್ಗಳನ್ನು ಉಡಾಯಿಸಿದ್ದ ಭಾರತ ರಫೇಲ್ ಜೆಟ್ಗಳನ್ನು ಈ ಆಪರೇಷನ್ಗೆ ಬಳಸಿತ್ತು. ಈ ಆಪರೇಷನ್ನ್ನು ಅಜಿತ್ ದೋವಲ್, ಐದು ವಿಭಿನ್ನ ಹಂತಗಳಲ್ಲಿ ಪ್ಲಾನ್ ಮಾಡಿದ್ದರು.. ಆ ಪ್ಲ್ಯಾನ್ನಂತೆಯೇ ಭಾರತೀಯ ಸೇನೆ ಆಪರೇಷನ್ ಸಿಂದೂರ ಮಾಡಿ ಮುಗಿಸಿದ್ದು, ಈ ಮೂಲಕ ಉಗ್ರಪೋಷಿತ ಪಾಕ್ಗೆ ಗುನ್ನಾ ಕೊಟ್ಟಿದೆ.
Also Read: Operation Sindoor : ವಿದೇಶಾಂಗ ಸಚಿವರಿಗೆ ಸರಿಸಾಟಿ ಯಾರಿಲ್ಲ..!
ಇಷ್ಟೆಲ್ಲಾ ಪ್ಲ್ಯಾನ್ ಮಾಡಿದ್ದ ಧೋವಲ್ ಮೂಲತಃ ಉತ್ತರಾಖಂಡ್ ಮೂಲದವರು. 1968 ರಲ್ಲಿ ಕೇರಳದ ಕೇಡರ್ನ ಐಪಿಎಸ್ ಅಧಿಕಾರಿಯಾಗಿ ಸೇರಿ, ಗುಪ್ತಚರ ಇಲಾಖೆಯಲ್ಲಿ ಸೇವೆ ಆರಂಭಿಸಿದ್ದರು. ಅವರಿಗೆ ಕೊಟ್ಟಿದ್ದ ಮೊದಲ ಟಾಸ್ಕ್ ಅಂದರೆ ಪಾಕಿಸ್ತಾನದಲ್ಲಿ ಗೂಢಾಚಾರಿಯಾಗಿ ಸೇವೆ ಸಲ್ಲಿಸುವುದು. ಅದನ್ನು ಸವಾಲಾಗಿ ಸ್ವೀಕರಿಸಿದ್ದ ಅಜಿತ್, 7 ವರ್ಷ ಕಿಸ್ತಾನದಲ್ಲಿ ಗೂಢಾಚಾರಿಯಾಗಿ ಸೇವೆ ಸಲ್ಲಿಸಿದ್ದರು. ಇಡೀ 7 ವರ್ಷ ಪಾಕಿಸ್ತಾನದ ಮೂಲೆ ಮೂಲೆಯನ್ನೂ ಅರಿತುಕೊಂಡಿದ್ರು. ಪಾಕಿಸ್ತಾನದ ಸೇನಾ ಸಾಮರ್ಥ್ಯವನ್ನು ತೀರಾ ಹತ್ತಿರದಿಂದ ನೋಡಿ ಸೀಕ್ರೆಟ್ ತಿಳಿದುಕೊಂಡಿದ್ರು.. ಪಾಕಿಸ್ತಾನದ ಕುತಂತ್ರವನ್ನೆಲ್ಲಾ ಅರೆದುಕುಡಿದಿದ್ದಾರೆ.
ಈಗ ಇಲ್ಲಿ ಕುಳಿತೇ ನೂರಾರು ಮೈಲು ದೂರವಿರುವ ಪಾಕಿಸ್ತಾನದಲ್ಲಿ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದ್ದು ಅಷ್ಟು ಸುಲಭದ ಮಾತಲ್ಲ. ಪಾಕಿಸ್ತಾನದಲ್ಲಿ ಏಳು ವರ್ಷ ಗೂಢಾಚಾರಿಯಾಗಿದ್ದ ದೋವಲ್, ಇವತ್ತು ಅದೇ ಪಾಕಿಸ್ತಾನವನ್ನು ನೆಲದ ಕ್ರಿಮಿಗಳನ್ನ ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದ್ದು, ಈಗ ಧೋವಲ್ ಕಾರ್ಯದ ಕುರಿತು ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
