Site icon BosstvKannada

Air India Plane Crash : ಅಹಮದಾಬಾದ್‌ ಟು ಲಂಡನ್‌ ಪ್ಲೇನ್‌ ಕ್ರ್ಯಾಶ್‌ : 241 ಜನರ ದಾರುಣ ಅಂತ್ಯ..!

ಅಹ್ಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ AI – 171 ಏರ್ ಇಂಡಿಯಾ ವಿಮಾನ ಪತನವಾಗಿದೆ. ಅಹ್ಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನ ಕೆಲವೇ ನಿಮಿಷಗಳಲ್ಲಿ ವಿಮಾನ ನಿಲ್ದಾಣಕ್ಕೆ ಹತ್ತಿರವಿರುವ ಮೇಘಾನಿ ಪ್ರದೇಶದಲ್ಲಿ ಪತನವಾಗಿದೆ. ಆಕಾಶದಲ್ಲಿ ಸಾಗುತ್ತಿರುವಾಗಲೇ ಹಂತಹಂತವಾಗಿ ಕೆಳಕ್ಕೆ ಬಂದ ವಿಮಾನ ನೋಡನೋಡುತ್ತಲೇ ಮೇಘಾನಿ ನಗರ್‌ನಲ್ಲಿದ್ದ ಕಟ್ಟಡಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ ಒಟ್ಟು 241 ಪ್ರಯಾಣಿಕರ ದಾರುಣ ಅಂತ್ಯವಾಗಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ 242 ಜನರು ಪ್ರಯಾಣಿಸುತ್ತಿದ್ರು. ಅವರ ಪೈಕಿ ಓರ್ವ ಪ್ರಯಾಣಿಕ ಪವಾಡ ಸದೃಶ್ಯದಂತೆ ಈ ದುರಂತದಲ್ಲಿ ಬದುಕುಳಿದಿದ್ದಾನೆ. 40 ವರ್ಷದ ರಮೇಶ್‌ ವಿಶ್ವಾಸ್‌, ಸೀಟ್‌ 11A ಎಕನಾಮಿಯಲ್ಲಿ ಪ್ರಯಾಣಿಸುತ್ತಿದ್ದರು. ಅವಘಡ ಸಂದರ್ಭದಲ್ಲಿ ವಿಮಾನದ ಎಮರ್ಜೆನ್ಸಿ ಡೋರ್‌ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಏರ್‌ಇಂಡಿಯಾ ವಿಮಾನದಲ್ಲಿ 242 ಜನರಲ್ಲಿ 230 ಪ್ರಯಾಣಿಕರು, 10 ಮಂದಿ ಕ್ಯಾಬಿನ್‌ ಸಿಬ್ಬಂದಿ, ಇಬ್ಬರು ಪೈಲಟ್‌ಗಳು ಇದ್ದರು. ಇವರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬ ಕೆನಡಾದ ಪ್ರಯಾಣಿಕ ಇದ್ದರು. ಪೈಲಟ್ ಮತ್ತು ಫಸ್ಟ್ ಆಫೀಸರ್ (Co-Pilot) ಹೊರತುಪಡಿಸಿ, ವಿಮಾನದಲ್ಲಿ 10 ಸಿಬ್ಬಂದಿ ಇದ್ದರು.

Exit mobile version