Site icon BosstvKannada

Air India Flight Crash : ವಿಜಯ್ ರೂಪಾನಿ ಜೀವಕ್ಕೆ ಮುಳ್ಳಾಯ್ತಾ ಲಕ್ಕಿ ನಂಬರ್‌?

ಅಹಮದಾಬಾದ್ ವಿಮಾನ ಪತನ (Air India Flight Crash) ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಸುಮಾರು 265 ಜನರ ಪ್ರಾಣಕ್ಕೆ ಏರ್ ಇಂಡಿಯಾ AI-171 ವಿಮಾನ ಯಮ ಪಾಶವಾಗಿದೆ. ಕೇವಲ ವಿಮಾನ ಪ್ರಯಾಣಿಕರು ಮಾತ್ರವಲ್ಲದೆ, ಓದುತ್ತಿದ್ದ ಕಾಲೇಜು ಹುಡುಗರನ್ನು ಸಹ ಬಾರದ ಲೋಕಕ್ಕೆ ಕರೆದೊಯ್ದಿದೆ. ಈ ದುರ್ಘಟನೆಯಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹ ಮೃತಪಟ್ಟಿದ್ದಾರೆ.

ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ದುರಂತ ಅಂತ್ಯ ಕಂಡಿದೆ. ಈ ವಿಮಾನದಲ್ಲಿ ಸಾಮಾನ್ಯ ಜನರ ಜೊತೆ ಪ್ರಯಾಣಿಸುತ್ತಿದ್ದ ಭಾರತೀಯ ಜನತಾ ಪಕ್ಷದ ನಾಯಕ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸಹ ಸಾವನ್ನಪ್ಪಿದ್ದಾರೆ. 2016 ರಿಂದ 2021 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ರೂಪಾನಿ ನಿನ್ನೆ ಪತ್ನಿ ಅಂಜಲಿ ಮತ್ತು ಮಗಳನ್ನು ಭೇಟಿಯಾಗಲು ಲಂಡನ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗ ಅವರ ಸಾವಿನ ಬಗ್ಗೆ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ವಿಜಯ್ ರೂಪಾನಿ ತಮ್ಮ ಜೀವದಲ್ಲಿ ಲಕ್‌ಅನ್ನ ತುಂಬಾ ನಂಬುವ ವ್ಯಕ್ತಿಯಾಗಿದ್ದರು. ಜೀವನದುದ್ದಕ್ಕೂ ಅದೃಷ್ಟ ಎಂದೇ ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಈಗ ಅವರ ಸಾವಿನ ದಿನಾಂಕವಾಗಿ ಬದಲಾಗಿದೆ. ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅವರು ಖರೀದಿ ಮಾಡಿದ್ದ ಎಲ್ಲಾ ವಾಹನಗಳ ಸಂಖ್ಯೆಯು 1206 ರಿಂದಲೇ ಪ್ರಾರಂಭವಾಗುತಿತ್ತು. ಆದರೆ ಈಗ ಅವರ ಮರಣದ ದಿನಾಂಕವು 12-6-25 ಆಗಿದ್ದು ಅವರ ಲಕ್ಕಿ ನಂಬರ್‌ ಅನ್‌ ಲಕ್ಕಿಯಾಗಿ ಬದಲಾಯ್ತಾ ಅನ್ನೋ ಅನುಮಾನ ಶುರುವಾಗಿದೆ.

Exit mobile version