ಬಿಜೆಪಿಯ ರೆಬೆಲ್ ನಾಯಕ ಬಸನಗೌಡ Yatnal ಬಳಿಕ ಇದೀಗ ಮತ್ತಿಬ್ಬರು ಶಾಸಕರನ್ನು ಉಚ್ಚಾಟನೆ ಮಾಡಲಾಗಿದೆ. ಬಿಜೆಪಿಯ ರೆಬೆಲ್ ಶಾಸಕರಾದ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್‌ರನ್ನು ಉಚ್ಚಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿದೆ. ಬರೋಬ್ಬರಿ ಆರು ವರ್ಷಗಳ ಕಾಲ ಈ ಇಬ್ಬರನ್ನ ಬಿಜೆಪಿ ಶಿಸ್ತು ಸಮಿತಿ ಉಚ್ಚಾಟನೆ ಮಾಡಿದೆ.
ಈಗಾಗ್ಲೇ ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ರು. ಬಿಜೆಪಿಯಲ್ಲೇ ಇದ್ರೂ ಕಾಂಗ್ರೆಸ್ ನಾಯಕರ ಜೊತೆಗೆ ಮೀಟಿಂಗ್, ರೌಂಡ್ಸ್‌ನಲ್ಲಿ ಭಾಗಿಯಾಗುತ್ತಿದ್ರು. ಇತ್ತೀಚೆಗಷ್ಟೇ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೀಟಿಂಗ್‌ನ ಸಿಟಿ ರೌಂಡ್ಸ್‌ನಲ್ಲಿ ಭಾಗಿಯಾಗಿ ಶಾಕ್ ಕೊಟ್ಟಿದ್ದರು.
Also Read: Paru ಸೀರಿಯಲ್ ಖ್ಯಾತಿಯ ನಟ ಶ್ರೀಧರ್ ನಿಧನ!
ಮತ್ತೊಂದೆಡೆ, ಶಿವರಾಮ್ ಹೆಬ್ಬಾರ್ ಕೂಡ ಇದೇ ರೀತಿ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದರು. ಇದಾದ ಬೆನ್ನಲ್ಲೇ ಇಬ್ಬರೂ ಶಾಸಕರನ್ನು ಉಚ್ಚಾಟನೆ ಮಾಡುವಂತೆ ಹಲವು ಒತ್ತಾಯಗಳು ಕೇಳಿ ಬಂದಿದ್ವು. ಪಕ್ಷ ವಿರೋಧಿ ಚಟುವಟಿಕೆ ಕಾರಣ ನೋಟಿಸ್ ಕೂಡ ನೀಡಲಾಗಿತ್ತು. ಆದ್ರೆ ಉತ್ತರಕ್ಕೆ ತೃಪ್ತಿ ಆಗದ ಕೇಂದ್ರ ಶಿಸ್ತು ಸಮಿತಿ ಅಧಿಕೃತವಾಗಿ ಇಬ್ಬರು ಶಾಸಕರನ್ನು ಉಚ್ಚಾಟನೆ ಮಾಡಿ ಆದೇಶಿಸಿದೆ.
ಇತ್ತೀಚೆಗಷ್ಟೇ ಬಸನಗೌಡ ಯತ್ನಾಳ್‌ರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. ಮಾಜಿ ಸಿಎಂ ಬಿ.ಎಸ್.ವೈ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಕುಟುಂಬ ರಾಜಕೀಯ, ಭ್ರಷ್ಟಾಚಾರದ ಪಿತಾಮಹ ಅಂತೆಲ್ಲಾ ಆರೋಪಿಸಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಯತ್ನಾಳ್ ವರ್ತನೆ ಬದಲಾಗಿರಲಿಲ್ಲ.. ಹೀಗಾಗಿ, ಕೇಂದ್ರ ಶಿಸ್ತು ಸಮಿತಿ ಯತ್ನಾಳ್‌ರನ್ನು ಉಚ್ಚಾಟಿಸಿತ್ತು..