BosstvKannada

Virat Kohli And Anushka Sharma : ಅನುಷ್ಕಾ ಶರ್ಮಾ ಬಿಗಿದಪ್ಪಿ ಭಾವುಕರಾದ ಕಿಂಗ್‌ ಕೊಹ್ಲಿ!

ಐಪಿಎಲ್ 18ನೇ ಆವೃತ್ತಿಗೆ ವಿದ್ಯುಕ್ತ ತೆರೆ ಬಿದ್ದಿದೆ. ಬರೋಬ್ಬರಿ 18 ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟ್ರೋಫಿಯನ್ನು ಎತ್ತಿ ಹಿಡಿದಿರುವ ಅಭಿಮಾನಿಗಳ ಹೆಮ್ಮೆಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB), ತಾಳ್ಮೆ, ನಿಯತ್ತು ಮತ್ತು ಅದಮ್ಯ ಪ್ರೀತಿಗೆ ಹೊಸ ಭಾಷ್ಯ ಬರೆದಿದೆ. ಆರ್‌ಸಿಬಿ ಅಭಿಮಾನಿಗಳು ಅಕ್ಷರಶಃ ಕ್ಲೌಡ್‌9 ರಲ್ಲಿ ತೇಲಾಡುತ್ತಿದ್ದು, ಈ ಐತಿಹಾಸಿಕ ಗೆಲುವಿನ ಗುಂಗಿನಿಂದ ಹೊರಬರಲು ಇನಷ್ಟು ದಿನಗಳೇ ಬೇಕು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ರೋಚಕ ಪಂದ್ಯದಲ್ಲಿ, ಆರ್‌ಸಿಬಿ ಜಯಭೇರಿ ಬಾರಿಸಿತು. ಇದರೊಂದಿಗೆ, ಆರ್‌ಸಿಬಿಯ 18 ವರ್ಷಗಳ ಕನಸು ಅಂತಿಮವಾಗಿ ನನಸಾಗಿದೆ. ಈ ಗೆಲುವಿನ ನಂತರ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಭಾವುಕರಾದರು.

ಕೊನೆಯ ಓವರ್‌ನಲ್ಲಿ ಗೆಲುವು ಖಚಿತವಾಗುತ್ತಿದ್ದಂತೆ ಬೌಂಡರಿ ಲೈನ್‌ನಲ್ಲಿ ಫೀಲಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಚಿಕ್ಕ ಮಗುವಿನಂತೆ ಅಳುತ್ತಿದ್ದರು. ಕೊನೆಯ ಚೆಂಡು ಮುಗಿದ ತಕ್ಷಣ, ಮೊಣಕಾಲುಗಳ ಮೇಲೆ ಕುಳಿತು ಕೊಹ್ಲಿ ಭಾವುಕರಾದರು. ಮೈದಾನದಲ್ಲೇ ಕಣ್ಣೀರು ಸುರಿಸಿದರು.

ಮತ್ತೊಂದೆಡೆ, ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸ್ಟ್ಯಾಂಡ್‌ನಲ್ಲಿ ಸಂಭ್ರಮಾಚರಣೆ ಮಾಡಿದರು. ಆರ್‌ಸಿಬಿ ಗೆಲುವು ಸಾಧಿಸುತ್ತಿದ್ದಂತೆ ತನ್ನ ಭಾವನೆಗಳನ್ನು ತಡೆದುಕೊಳ್ಳಲು ಸಾಧ್ಯವಾಗದೇ ಸಂತೋಷದಿಂದ ಜಿಗಿದು ಸಂಭ್ರಮಿಸಿದರು.

ಆರ್‌ಸಿಬಿ ಗೆಲುವಿನ ನಂತರ ಮೈದಾನದಲ್ಲಿ ಸಂಭ್ರಮಿಸುತ್ತಿದ್ದ ವಿರಾಟ್ ಕೊಹ್ಲಿ, ನಂತರ ತಮ್ಮ ಪತ್ನಿ ಅನುಷ್ಕಾ ಶರ್ಮಾ ಬಳಿಗೆ (Virat Kohli And Anushka Sharma) ಓಡಿ ಬಂದರು. ಬಳಿಕ ಅನುಷ್ಕಾ ಅವರನ್ನು ಗಟ್ಟಿಯಾಗಿ ಬಿಗಿದಪ್ಪಿಕೊಂಡು ವಿರಾಟ್ ಕೊಹ್ಲಿ ಕಣ್ಣೀರು ಹಾಕಿದರು. ಅನುಷ್ಕಾ ಶರ್ಮಾ ಕೂಡ ವಿರಾಟ್ ಅವರನ್ನು ಅಪ್ಪಿಕೊಂಡು ಭಾವುಕರಾದರು. ವಿರಾಟ್ ತಲೆಯಾಡಿಸಿ ಭುಜ ತಟ್ಟಿ ಅಭಿನಂದಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಷೊಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ..

Exit mobile version