ಭಾರತದ ನೆರೆ ರಾಷ್ಟ್ರಗಳಲ್ಲಿ ಒಂದಾದ ಮೇಲೊಂದರಂತೆ ಅರಾಜಕತೆಗೆ ಸಾಕ್ಷಿಯಾಗುತ್ತಿದೆ. ಬದ್ಧವೈರಿ ಪಾಕಿಸ್ತಾನ, ಅಫ್ಘಾನಿಸ್ತಾನ, ಶ್ರೀಲಂಕಾದಲ್ಲಿ ಈಗಾಗ್ಲೇ ಅರಾಜಕತೆ ಜಗತ್ತಿನಾದ್ಯಂತ ಸಖತ್ ಸದ್ದು ಮಾಡಿದೆ. ಇದ್ರ ಬೆನ್ನಲ್ಲೇ ಭಾರತದ ಮತ್ತೊಂದು ನೆರೆ ರಾಷ್ಟ್ರ ನೇಪಾಳದಲ್ಲೂ ಅರಾಜಕತೆ ಸೃಷ್ಟಿಯಾದಂತೆ ಕಾಣುತ್ತಿದೆ. ಯಾಕಂದ್ರೆ, ಸದಾ ಶಾಂತಿಯಿಂದ ಇದ್ದ ನೇಪಾಳ ಇದೀಗ ಕೊತ ಕೊತ ಉರಿಯುತ್ತಿದೆ.. ಬೀದಿಗಿಳಿದು ತಮ್ಮ ಪರಾಕ್ರಮ ತೋರಿಸಿದ Gen Z ಆರ್ಭಟಕ್ಕೆ ಸರ್ಕಾರವೇ ತಲೆಬಾಗಿದೆ.
ಅಷ್ಟಕ್ಕೂ ನೇಪಾಳ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿತ್ತು ಅಂತ ಹೇಳಲಾಗಿದೆ.. ಜೊತೆಗೆ ಫೇಸ್‌ಬುಕ್, ಇನ್ಸ್ಟಾಗ್ರಾಂ, ಎಕ್ಸ್ ಸೇರಿದಂತೆ 26 ಸಾಮಾಜಿಕ ಜಾಲತಾಣಗಳ ಮೇಲೆ ನೇಪಾಳ ಸರ್ಕಾರ ವಿಧಿಸಿದ್ದ ನಿರ್ಬಂಧವನ್ನು ವಿರೋಧಿಸಿ ಅಲ್ಲಿನ ಯುವಜನತೆ ತೀವ್ರ ಆಕ್ರೋಶ ಹೊರಹಾಕಿತ್ತು.. ಕಠ್ಮಂಡು ಸೇರಿದಂತೆ ನೇಪಾಳದ ಹಲವು ನಗರಗಳಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿತ್ತು.. ಹೀಗಾಗಿ ಪ್ರತಿಭಟನೆಗೆ ಹೆದರಿ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲೆ ಹೇರಿದ್ದ ನಿರ್ಬಂಧವನ್ನು ವಾಪಸ್ ಪಡೆದಿತ್ತು..
ಗೃಹ ಸಚಿವರು ಸೇರಿದಂತೆ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ.. ಇಷ್ಟಾದ್ರೂ ಪರಿಸ್ಥಿತಿ ಮಾತ್ರ ಶಾಂತವಾಗಿಲ್ಲ.. ಪ್ರತಿಭಟನೆಯ ಕಾವು ಮತ್ತಷ್ಟು ಜೋರಾಗಿದೆ.. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ನೇಪಾಳದ ಪ್ರಧಾನಿಯೇ ಪಲಾಯನ ಮಾಡಲು ಸಜ್ಜಾಗಿದ್ದಾರೆ ಅಂತ ಹೇಳಲಾಗ್ತಿದೆ.. ಕೆ.ಪಿ.ಶರ್ಮಾ ಓಲಿ ಪ್ರತಿಭಟನೆಗೆ ಹೆದರಿ ದುಬೈಗೆ ಹಾರಲಿದ್ದಾರೆ ಅಂತ ಹೇಳಲಾಗ್ತಿದೆ.. ಅಂದಹಾಗೆ ಈ ಹಿಂಸಾಚಾರದಲ್ಲಿ 19 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ನೇಪಾಳ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.
Read Also : ನೇಪಾಳದಲ್ಲಿ ಭುಗಿಲೆದ್ದ Gen Z ಆಕ್ರೋಶ : 16 ಸಾವು, 100 ಜನರಿಗೆ ಗಾಯ.. ಕರ್ಫ್ಯೂ ಜಾರಿ!

