Site icon BosstvKannada

ಕೋರ್ಟ್‌ಗೆ ದರ್ಶನ್‌ ಹಾಜರ್‌ : ಪವಿತ್ರಾ ಗೌಡ ಚಕ್ಕರ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಇಂದು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾಗಿದ್ದು, ವಿಚಾರಣೆಯನ್ನ ಕೋರ್ಟ್ ಆಗಸ್ಟ್ 12ಕ್ಕೆ ಮುಂದೂಡಿಕೆ ಮಾಡಿದೆ.

ಇಂದು ಕೋರ್ಟ್ ಗೆ ನಟ ದರ್ಶನ್ ಹಾಜರಾಗಿದ್ದರು. ಆದರೆ ಎ1 ಆರೋಪಿ ಪವಿತ್ರಾ ಗೌಡ ಸೇರಿದಂತೆ ಕೆಲ ಆರೋಪಿಗಳು ವಿಚಾರಣೆಗೆ ಹಾಜರಾಗದೇ ಗೈರಾಗಿದ್ದರು. ಆರೋಪಿಗಳಾದ ಪವಿತ್ರಾ ಗೌಡ, ವಿನಯ್, ಧನರಾಜ್, ಕಾರ್ತಿಕ್ ಕೋರ್ಟ್ ಗೆ ಗೈರಾಗಿದ್ದರು.

ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು 57ನೇ ಸಿಸಿಎಚ್ ನ್ಯಾಯಾಲಯ ಆಗಸ್ಟ್ 12ಕ್ಕೆ ಮುಂದೂಡಿದ್ದು ಅಂದು ಕೋರ್ಟ್ ಗೆ ಎಲ್ಲಾ ಆರೋಪಿಗಳು ಹಾಜರಾಗಬೇಕು ಎಂದು ಸೂಚಿಸಿದೆ.

Exit mobile version