ಕಾನೂನನ್ನು ರಕ್ಷಣೆ ಮಾಡಬೇಕಾದ ಪೊಲೀಸಪ್ಪನ ಪೋಲಿ ಆಟವೇ ಈಗ ಸುದ್ದಿಯಲ್ಲಿದೆ. ಇಲ್ಲೊಬ್ಬ ಪೊಲೀಸಪ್ಪ ತನ್ನ ಅಕ್ರಮ ಸಂಬಂಧ(policeman extramarital affair)ವನ್ನು ಒಪ್ಪದ ಹೆಂಡತಿಗೆ ಗೇಟ್ ಪಾಸ ಕೊಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದ್ದು, ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಪೇದೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬರೋಬ್ಬರಿ ಮೂರು ವರ್ಷ ಪ್ರೀತಿಸಿ, ಒಂದು ವರ್ಷದ ಹಿಂದೆ ಮದುವೆಯಾಗಿ ಸಂಸಾರ ಮಾಡುತ್ತಿದ್ದ ಈ ಪೊಲೀಸಪ್ಪ ಈಗ ಹೆಂಡತಿ ಬೇಡ ಎಂದು ಕಿರುಕುಳ ಕೊಡುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಕೋಲಾರ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್ ಆಗಿರುವ ಕೆಂಡಗಣ್ಣಸ್ವಾಮಿ ಜೊತೆ ಅದೇ ಗ್ರಾಮದ ಸಿದ್ದೇಗೌಡ, ಜಯಮ್ಮ ಅವರ ಮಗಳು ಪವಿತ್ರರನ್ನು ಮದುವೆ ಮಾಡಿಕೊಡಲಾಗಿತ್ತು. ಒಂದೇ ಬೀದಿ, ಎದುರು ಬದುರು ಮನೆಯಲ್ಲಿ ವಾಸವಿದ್ದವರು. ಮೂರು ವರ್ಷಗಳ ಹಿಂದೆ ಎಂಗೇಜ್ಮೆಂಟ್ ಆಗಿದ್ದು, ಒಂದು ವರ್ಷದ ಹಿಂದೆ ಮದುವೆ ಆಗಿತ್ತು. ಬಿಳಿಕೆರೆಯ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡಿಕೊಡಲಾಗಿತ್ತು.
ಬೆಂಗಳೂರಿನಲ್ಲಿ ಐಜಿ ಕಚೇರಿಯ ಕಂಟ್ರೋಲ್ ರೂಂ ನಲ್ಲಿ ಓಓಡಿ ಕೆಲಸ ಮಾಡ್ತಿದ್ದ ಕೆಂಡಗಣ್ಣಸ್ವಾಮಿ. ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ವಿಷಯ ಮುಚ್ಚಿಟ್ಟು, ಕೆಂಡಗಣ್ಣಸ್ವಾಮಿ ಮದುವೆ ಆಗಿದ್ದ. ಉಡುಪಿ ಮೂಲದ ಹುಡುಗಿ ಜೊತೆಗೆ ಅಫೇರ್ ಹೊಂದಿದ್ದ ಎನ್ನಲಾಗಿದೆ.ಮದುವೆಯಾದ 6 ತಿಂಗಳಲ್ಲಿ ವಿಷಯ ಬಹಿರಂಗವಾಗಿದೆ. ಈಗ ಗಂಡ ಮತ್ತು ಆಕೆ ಇಬ್ಬರೂ ಪವಿತ್ರಾಗೆ ಡಿವೋರ್ಸ್ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಪವಿತ್ರ 5 ತಿಂಗಳ ಗರ್ಭಿಣಿಯಾಗಿದ್ದು, ಮಗು ತೆಗೆಸಿಬಿಡು, ಪರಿಹಾರ ತಗೋ. ನನಗೆ ನೀನು ಬೇಡ ಎನ್ನುತ್ತಿದ್ದಾನೆ ಅಸಾಮಿ ಕೆಂಡಗಣ್ಣಸ್ವಾಮಿ.
Also Read: ಈ ಸಿಂಪಲ್ ಮೆಥಡ್ಸ್‌ನ ಫಾಲೋ ಮಾಡಿ, ಕ್ವೀಕ್ ಆಗಿ ಮನೆಯಲ್ಲೇ ತಯಾರಿಸಿ Mascara!
ಇಲ್ಲ ಅಂದ್ರೆ ಇರುವುದಾದರೆ ಮೂರೂ ಜನ ಒಟ್ಟಿಗೆ ಇರೋಣ ಎನ್ನುವುದು ಆತನ ವಾದ. ಪತಿಯ ಅಕ್ರಮ ಸಂಬಂಧಕ್ಕೆ ಒಪ್ಪಿಗೆ ಕೊಡದ ಹೆಂಡತಿಗೆ ಗೇಟ್‌ಪಾಸ್ ಕೊಡೋಕೆ ಮುಂದಾಗಿದ್ದಾನೆ. ಅನ್ಯಾಯದ ವಿರುದ್ಧ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.ಈ ಸಂಬಂಧ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ವಿರುದ್ಧ ಎಫ್‌ಐಆರ ದಾಖಲಾಗಿದ್ದು, ಪೋಲಿಸಪ್ಪನ ಪೋಲಿ ಆಟಕ್ಕೆ ಪೋಲಿಸರೇ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ.

