Site icon BosstvKannada

ಮರಾಠಿ ಮಾತನಾಡದಿದ್ದಕ್ಕೆ ಮಗಳನ್ನೇ ಕೊಂದ ಪಾಪಿ

ಮುಂಬೈ: ಪಾಪಿ ತಾಯಿಯೋರ್ವಳು ಮರಾಠಿ (Marathi) ಭಾಷೆ ಮಾತನಾಡಿಲ್ಲ ಎಂಬ ಕಾರಣಕ್ಕೆ ತನ್ನ ಹೆತ್ತ ಕುಡಿಯನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಈ ಘಟನೆ ನವಿ ಮುಂಬೈನ ಕಲಾಂಬೋಲಿಯಲ್ಲಿ ನಡೆದಿದೆ. 6 ವರ್ಷದ ಮಗಳನ್ನೇ ತಾಯಿ(woman) ಕತ್ತು ಹಿಸುಕಿ ಕೊಂದಿದ್ದಾಳೆ. ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ 30 ವರ್ಷದ ಮಹಿಳೆ ಮಗಳ ಸಾವನ್ನು ಹೃದಯಾಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಳು. ಸಂಶಯಗೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮನವಿ ಮಾಡಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರಾಟಕ್ಕೆ ಅಡಚಣೆ ಉಂಟಾಗಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಆನಂತರ ಮಹಿಳೆಯ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.

ಮಗುವಿನ ಅಜ್ಜಿ ಕೊಲೆ ನಡೆದ ದಿನನ ಮನೆಗೆ ಭೇಟಿ ನೀಡಿದ್ದರು. ಆದರೆ ಮೊಮ್ಮಗಳನ್ನು ಭೇಟಿಯಾಗಲು ಸಾಧ್ಯವಾಗದೇ ಮರಳಿ ಹೋಗಿದ್ದರು. ಅಂದು ಸಂಜೆ ಪತಿ ಮನೆಗೆ ಬಂದಾಗ ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡು ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಮಗುವಿಗೆ ಹೃದಯಾಘಾತವಾಗಿದೆ ಎಂದೇ ಮಹಿಳೆ ಎಲ್ಲರಿಗೂ ಹೇಳುತ್ತಿದ್ದಳು. ಇದನ್ನು ಗಮನಿಸಿದ ಪೊಲೀಸರಿಗೆ ಸಂಶಯ ಉಂಟಾಗಿ, ವಿಚಾರಣೆ ನಡೆಸಿದಾಗ ಮಹಿಳೆ ಹೇಳಲು ಆರಂಭಿಸಿದ್ದಳು. ಹೀಗಾಗಿ ಅನುಮಾನ ಉಂಟಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯಿ ಬಿಟ್ಟಿದ್ದಾಳೆ.

ಆರೋಪಿ ವಿಜ್ಞಾನ ಪದವೀಧರೆ. ಅವರ ಪತಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಮಗು ಚಿಕ್ಕವಯಸ್ಸಿನಿಂದ ಮಾತನಾಡಲು ಕಷ್ಟ ಪಡುತ್ತಿತ್ತು. ಆ ಮಗು ಹೆಚ್ಚಾಗಿ ಮರಾಠಿ ಬದಲಿಗೆ ಹಿಂದಿ ಮಾತನಾಡುತ್ತಿದ್ದಳು. ಇದರಿಂದ ಅವಳ ತಾಯಿ ಆಗಾಗ ಸಿಟ್ಟಾಗುತ್ತಿದ್ದಳು. ನನಗೆ ಇಂತಹ ಮಗು ಬೇಡ. ಅವಳು ಸರಿಯಾಗಿ ಮಾತನಾಡುವುದಿಲ್ಲ ಎಂದು ಆಗಾಗ ಪತಿಯ ಜೊತೆ ವಾದಿಸುತ್ತಿದ್ದಳು. ಹೀಗಾಗಿ ಖಿನ್ನತೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version