BosstvKannada

ಕರ್ನಾಟಕದಲ್ಲಿ ಮುಂದುವರೆದ ಸರಣಿ ಹೃದಯಾಘಾತ, ಹಾರ್ಟ್‌ ಅಟ್ಯಾಕ್‌ ರಾಜಧಾನಿ ಆಗ್ತಿದ್ಯಾ ಕರ್ನಾಟಕ?

ಕರ್ನಾಟಕದಲ್ಲಿ ಹಾರ್ಟ್‌ ಅಟ್ಯಾಕ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಿವೆ. ಅದ್ರಲ್ಲೂ ಹಾಸನದಿಂದ ಹೃದಯ ಸಂಬಂಧಿ ಕಾಯಿಲೆಗಳಿಂದಾಗಿ ಜಯದೇವ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಕ್ರಮೇಣ ಏರಿಕೆಯಾಗ್ತಿದೆ. ಆರೋಗ್ಯವಂತ ವ್ಯಕ್ತಿಯನ್ನೂ ಕೂಡ ಹಾರ್ಟ್‌ ಅಟ್ಯಾಕ್‌ ಎಂಬ ಭೂತ ಬಲಿ ತೆಗೆದುಕೊಳ್ತಿದೆ. ಹಾಗಿದ್ರೆ ಹಾರ್ಟ್‌ ಅಟ್ಯಾಕ್‌ಗೆ ಕಾರಣಗಳೇನು? ಲಕ್ಷಣಗಳೇನು? ಹಾರ್ಟ್‌ ಅಟ್ಯಾಕ್‌ ಆದ ತಕ್ಷಣ ಏನ್‌ ಮಾಡ್ಬೇಕು ಇವೆಲ್ಲದ್ರ ಬಗ್ಗೆ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಹೃದಯಾಘಾತಕ್ಕೆ ಕಾರಣಗಳೇನು..?
ಮೊಟ್ಟ ಮೊದಲನೇದಾಗಿ ಅನುವಂಶೀಯತೆ. ನಿಮ್ಮ ಫ್ಯಾಮಿಲಿ ಹಿಸ್ಟರಿಯಲ್ಲಿ ಯಾರಿಗಾದ್ರೂ ಹೃದಯ ಸಂಬಂಧಿ ಕಾಯಿಲೆಗಳಿದ್ರೆ ಅವು ಮುಂದುವರಿಯುವ ಸಾಧ್ಯತೆ ಹೆಚ್ಚಾಗಿರುತ್ತೆ. ಅದ್ರಲ್ಲೂ ಅಮೆರಿಕನ್ನರಿಗೆ ಕಂಪೇರ್‌ ಮಾಡಿದ್ರೆ ಏಷ್ಯಾ ಖಂಡದವರು ಪ್ರೋನ್‌ ಟು ಹಾರ್ಟ್ ಅಟ್ಯಾಕ್.‌. ಅಂದ್ರೆ ಏಷ್ಯನ್‌ ಜೀನ್ಸ್‌ ಇರುವವರಿಗೆ ಹೃದಯದ ಸಮಸ್ಯೆಗಳು ಕಾಣಿಸಿಕೊಳ್ಳೋ ಚಾನ್ಸಸ್‌ ಜಾಸ್ತಿ ಇರುತ್ತೆ.

ಇನ್ನು, ಮಧುಮೇಹ-ಕೊಲೆಸ್ಟ್ರಾಲ್ ಹಾಗೂ ಬಿಪಿ ಇರೋರಲ್ಲಿ ಹಾರ್ಟ್‌ ಅಟ್ಯಾಕ್‌ ಸಂಭವ ಜಾಸ್ತಿ. ಡ್ರಿಂಕಿಂಗ್‌, ಸ್ಮೋಕಿಂಗ್‌ ಹಾಗೂ ತಂಬಾಕು ಸೇವನೆಯಂತಹ ದುಶ್ಚಟಗಳನ್ನ ಹೊಂದಿದವರಿಗೂ ಈ ಹೃದಯಾಘಾತದ ಸಂಭವ ಹೆಚ್ಚಾಗಿರುತ್ತೆ.. ಕಳಪೆ ಜೀವನಶೈಲಿ ಹಾಗೂ ಹೈ ಫ್ಯಾಟ್‌ ಡಯೆಟ್‌ ಫಾಲೋ ಮಾಡುವವರು, ಓವರ್‌ ವೇಟ್‌ ಆಗಿರೋರು, ಒತ್ತಡದ ಜೀವನಶೈಲಿ ಹಾಗೂ ಅತಿಯಾದ ಮಾನಸಿಕ ಒತ್ತಡ ಹೊಂದಿರುವವರು ತುಂಬಾನೆ ಜಾಗೃತರಾಗಿರ್ಬೇಕು ಹೃದಯದ ವಿಷ್ಯದಲ್ಲಿ.

ಹಾರ್ಟ್ ಅಟ್ಯಾಕ್‌ ಲಕ್ಷಣಗಳು ಏನೇನು?
ಇನ್ನು ಹಾರ್ಟ್‌ ಅಟ್ಯಾಕ್‌ನ ಪ್ರಮುಖ ಲಕ್ಷಣಗಳೇನು ಅಂತಾ ನೋಡೋದಾದ್ರೆ, ಇದ್ದಕ್ಕಿದ್ದಂತೆ ಎದೆ ನೋವು, ಎದೆಯಲ್ಲಿ ಒತ್ತಡ ಕಾಣಿಸಿಕೊಳ್ಳೋದು, ಕಣ್ಣಿನಲ್ಲಿ ಉರಿ, ಶೋಲ್ಡರ್‌ ಹಾಗೂ ಕೈ, ತೋಳುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ, ತುಂಬಾ ಸುಸ್ತು ಹಾಗೂ ಆಯಾಸವಾಗಿ ವಿಪರೀತ ಬೆವರ್ತಾ ಇದ್ರೆ, ಹೃದಯ ಬಡಿತದಲ್ಲಿ ಏರುಪೇರಾದ್ರೆ ಹಾರ್ಟ್‌ ಅಟ್ಯಾಕ್‌ ಆಗೋ ಸಾಧ್ಯತೆ ಹೆಚ್ಚಿರುತ್ತದೆ.

ಇನ್ನು, ಪ್ರಿವೆನ್ಷನ್‌ ಇಸ್‌ ಬೆಟರ್‌ ದ್ಯಾನ್‌ ಕ್ಯೂರ್‌ ಅನ್ನೋ ಹಾಗೆ, ಹೃದಯ ಸಮಸ್ಯೆ ಬರೋಕು ಮೊದಲೇ ಜಾಗರೂಕರಾಗಿದ್ರೆ ನಿಮಗೂ, ನಿಮ್ಮ ಹೃದಯಕ್ಕೂ ತುಂಬಾ ಒಳ್ಳೇದು.

ಮುಂಜಾಗ್ರತಾ ಕ್ರಮಗಳೇನು..?
ಮೊದಲ್ನೇದಾಗಿ ಪ್ರತಿನಿತ್ಯ ಕನಿಷ್ಠ ಅರ್ಧ ಗಂಟೆ ನಡಿಯೋದನ್ನ ಅಭ್ಯಾಸ ಮಾಡ್ಕೊಳಿ.‌ ಪ್ರತಿನಿತ್ಯ ವ್ಯಾಯಾಮ ಮಾಡೋದು ಬೆಸ್ಟ್.‌ ಅದಾಗದಿದ್ರೂ ನಡೆಯೋದನ್ನ ಆದ್ರೂ ರೂಢಿಸ್ಕೊಳ್ಳಿ. ಅತಿಯಾದ ದೇಹದ ತೂಕ ನೂರಾರು ಕಾಯಿಲೆಗಳಿಗೆ ಕಾರಣವಾಗುತ್ತೆ. ಹೀಗಾಗಿ ವೇಟ್‌ ಮ್ಯಾನೇಜ್‌ಮೆಂಟ್‌ ಕೂಡ ತುಂಬಾ ಇಂಪಾರ್ಟೆಂಟ್.‌ ಇನ್ನು ಪ್ರೊಸೆಸ್ಡ್‌, ಜಂಕ್‌ ಹಾಗೂ ಫಾಸ್ಟ್‌ ಫುಡ್‌ ಸೇವನೆಯನ್ನ ಆದಷ್ಟು ಅವಾಯ್ಡ್‌ ಮಾಡಿ. ಇದು ಹೃದಯ ಮಾತ್ರವಲ್ಲ ನಿಮ್ಮ ಓವರ್‌ಆಲ್‌ ಆರೋಗ್ಯವನ್ನ ಕಾಪಾಡಿಕೊಳ್ಳುವಲ್ಲೂ ಸಹಾಯ ಮಾಡುತ್ತೆ.

ಡ್ರಿಂಕಿಂಗ್‌ ಸ್ಮೋಕಿಂಗ್‌ ಯಾವ ಕಾಯಿಲೆಗೂ ಒಳ್ಳೇದಲ್ಲ. ಹೀಗಿದ್ಮೇಲೆ ಹೃದಯನ್ನ ಜೋಪಾನ ಮಾಡ್ಬೇಕು ಅಂದ್ರೆ ಇವುಗಳನ್ನು ಬಿಡ್ಲೇಬೇಕು. ನಾವು ಹೇಳಿದ ಎಲ್ಲಾ ಮುಂಜಾಗ್ರತೆ ಕೈಗೊಂಡ ಮೇಲೂ ಹೃದಯಾಘಾತ ಆಗಲ್ಲ ಅಂತೇನಿಲ್ಲ.. ಆದ್ರೆ, ಹೃದಯಾಘಾತ ಬಾರದಿರಲಿ ಅಂತಾ ಈ ಮುಂಜಾಗ್ರತೆ ಕೈಗೊಳ್ತೇವೆ. ಸಡನ್‌ ಆಗಿ ಹಾರ್ಟ್‌ ಅಟ್ಯಾಕ್‌ ಆದಾಗಲೂ ಯಾರೇ ಆಗಲಿ ಅವರನ್ನು ಬದುಕಿಸುವ ಚಾನ್ಸಸ್‌ ತುಂಬಾ ಇರುತ್ತೆ.. ಹಾಗಾದ್ರೆ, ಹೃದಯಾಘಾತ ಆದಾಗ ತಕ್ಷಣ ಏನೇನ್‌ ಮಾಡಬೇಕು? ಅನ್ನೋದನ್ನು ಹೇಳ್ತೀವಿ ನೋಡಿ..

ಹಾರ್ಟ್‌ ಆದಾಗ ನೀವೇನು ಮಾಡ್ಬೇಕು..?
ಮೊದಲನೇಯದಾಗಿ ವೃತ್ತಿಪರ ವೈದ್ಯಕೀಯ ಸಹಾಯಕ್ಕಾಗಿ ತಕ್ಷಣ ತುರ್ತು ಸಂಖ್ಯೆ ಅಂದರೆ ಸಹಾಯವಾಣಿ ನಂಬರ್‌ಗೆ ಡಯಲ್ ಮಾಡಿ.. ಎರಡನೇಯದಾಗಿ ಲಭ್ಯವಿದ್ದರೆ, ಪೀಡಿತ ವ್ಯಕ್ತಿಗೆ ಅಗಿಯಲು ಪೂರ್ಣ-ಸಾಮರ್ಥ್ಯದ ಅಂದರೆ 325 ಮಿಲಿ ಗ್ರಾಂ ಆಸ್ಪಿರಿನ್ ನ್ನು ನೀಡಿ.. ಯಾಕಂದ್ರೆ, ಇದು ಅಪಧಮನಿಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುವ ಮೂಲಕ ಸಹಾಯ ಮಾಡುತ್ತದೆ.

ಮೂರನೇಯದಾಗಿ ವ್ಯಕ್ತಿಯು ಪ್ರತಿಕ್ರಿಯಿಸದಿದ್ದರೆ ಮತ್ತು ಉಸಿರಾಡದಿದ್ದರೆ, ವೃತ್ತಿಪರ ಸಹಾಯ ಬರುವವರೆಗೆ ಸಿಪಿಆರ್ ಮಾಡಿ. ಅಂದರೆ ಆರ್ಟಿಫೀಷಿಯಲ್‌ ಆಗಿ ಹೃದಯವನ್ನ ಪಂಪ್‌ ಮಾಡೋದನ್ನ ಸಿಪಿಆರ್‌ ಅಂತಾರೆ. ಎದೆ ಭಾಗದ ಮೇಲೆ ಕೈಯಿಟ್ಟು ಜೋರಾಗಿ ಅದುಮಬೇಕು. ಇನ್ನೂ ಈಸಿ ಸೊಲ್ಯೂಷನ್‌ ಅಂದ್ರೆ, ಡಿಸ್ಪ್‌ರಿನ್‌, ಕ್ಲೊಪಿಡೊಗ್ರೆಲ್‌, ಅಟೊರ್ವಾಸ್ಟ್ಯಾಟಿನ್‌ ಈ ಮೂರು ಮಾತ್ರೆಗಳನ್ನ ಯಾವಗ್ಲೂ ನಿಮ್‌ ಮನೇಲಿ ಹಾಗೂ ಪರ್ಸ್‌ನಲ್ಲಿ ಇಟ್ಕೊಳಿ.

ಈ ಟ್ಯಾಬ್ಲೆಟ್‌ಗಳನ್ನ ಜೊತೆಗಿಟ್ಟುಕೊಳ್ಳಿ

ಹಾರ್ಟ್‌ ಅಟ್ಯಾಕ್‌ ಆದ ಸಂದರ್ಭದಲ್ಲಿ ಡಿಸ್ಪ್‌ರಿನ್‌ 1 ಟ್ಯಾಬ್ಲೆಟ್‌, ಕ್ಲೊಪಿಡೊಗ್ರೆಲ್‌ನ 2 ಟ್ಯಾಬ್ಲೆಟ್‌ ಹಾಗೂ ಅಟೊರ್ವಾಸ್ಟ್ಯಾಟಿನ್‌ 1 ಮಾತ್ರೆಯನ್ನ ಜಗಿದು ತಿನ್ಬೇಕು. ನೆನಪಿರಲಿ, ನೀವು ಜಗಿದು ತಿಂದ್ರೆ ಅದು ಶೀಘ್ರವಾಗಿ ಪರಿಣಾಮ ಬೀರುತ್ತೆ. ಅದೇ ನುಂಗಿದ್ರೆ, ಮಾತ್ರೆಗಳು ನಿಧಾನವಾಗಿ ಕೆಲಸ ಮಾಡುತ್ವೆ. ಒಂದ್ವೇಳೆ ನುಂಗೋದು ಕಷ್ಟ ಅಂತಾದಲ್ಲಿ ಪುಡಿ ಮಾಡಿ ನೀರಿನಲ್ಲಿ ಮಿಕ್ಸ್‌ ಮಾಡಿ ಕುಡಿಯಬಹುದು.

ಗೋಲ್ಡನ್‌ ಅವರ್‌ನಲ್ಲಿ ವ್ಯಕ್ತಿ ಬದುಕಿಸಲು ಇರುತ್ತೆ ಚಾನ್ಸ್!‌
ಹೃದಯಾಘಾತದ ಆದ ಮೊದಲ 60 ನಿಮಿಷಗಳ ನಿರ್ಣಾಯಕ ಅವಧಿ ಗೋಲ್ಡನ್‌ ಅವರ್‌ ಅಂತಲೇ ಕರೆಯುತ್ತಾರೆ. ಈ ಅವಧಿಯಲ್ಲಿ, ಆಂಜಿಯೋಪ್ಲ್ಯಾಸ್ಟಿಯಂತಹ ವಿಧಾನಗಳ ಮೂಲಕ ರಕ್ತದ ಹರಿವನ್ನು ಮರುಸ್ಥಾಪಿಸುವುದು ಅಥವಾ ಹೆಪ್ಪುಗಟ್ಟುವಿಕೆ-ಬಸ್ಟಿಂಗ್ ಔಷಧಿಗಳನ್ನು ನಿರ್ವಹಿಸುವಂತಹ ತಕ್ಷಣದ ವೈದ್ಯಕೀಯ ಕ್ರಮಗಳು ಬದುಕುಳಿಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ. ಹೃದಯ ಸ್ನಾಯುವಿನ ಹಾನಿ ಕಡಿಮೆ ಮಾಡುತ್ತದೆ.

ಹೃದಯ ಜೋಪಾನ, ಹೃದಯ ಜೋಪಾನ ಅಂತಾ ಯಾರು ಎಷ್ಟೇ ಹೇಳಿದ್ರೂ ನೀವು ಶ್ರಮ ವಹಿಸೋವರೆಗೂ ಅದು ಜೋಪಾನವಾಗಿರಲು ಸಾಧ್ಯವಿಲ್ಲ. ಮೂರು ಹೊತ್ತಿನ ಊಟಕ್ಕಾಗಿ ಶ್ರಮವಹಿಸೋ ನೀವು, ೨೪ ಗಂಟೆ ಬಡಿದುಕೊಳ್ಳೋ ಈ ಪುಟ್ಟ ಹೃದಯದ ಬಗ್ಗೆ ಒಮ್ಮೆ ಥಿಂಕ್‌ ಮಾಡಿ.

Exit mobile version