Site icon BosstvKannada

ಧ್ರುವ ಸರ್ಜಾ ವಂಚನೆ ಆರೋಪ ಪ್ರಕರಣಕ್ಕೆ ಹೊಸ ಟ್ವಿಸ್ಟ್‌?‌ ವಂಚನೆ ಅಸಲಿ ಕಹಾನಿಯಾದ್ರೂ ಏನು?

ಧ್ರುವ ಸರ್ಜಾ ವಂಚನೆ ಆರೋಪ ಪ್ರಕರಣಕ್ಕೆ ಸಿಕ್ತು ಹೊಸ ಟ್ವಿಸ್ಟ್‌!, ಏನ್ರಿ ಧ್ರುವ ನಿಮ್ಮಿಂದ ನನಗೆ 8 ವರ್ಷ ವೇಸ್ಟ್‌, ಧ್ರುವ ಫ್ಯಾನ್ಸ್‌ ನಾನು ಕನ್ನಡ ವಿರೋಧಿಯಲ್ಲ‌, ಆಕ್ಷನ್‌ ಫ್ರಿನ್ಸ್‌ ವಿರುದ್ಧ ಜಗ್ಗುದಾದಾ ಪ್ರೊಡ್ಯೂಸರ್‌ ಬಾಂಬ್!, ಅಷ್ಟಕ್ಕೂ ರಾಘವೇಂದ್ರ ಹೆಗಡೆ ಹೇಳಿದ ಭಯಾನಕ ಸತ್ಯವೇನು? ಅನ್ನೋದನ್ನ ಹೇಳ್ತೀವಿ ಅದಕ್ಕೂ ಮೊದಲು ಬಾಸ್‌ ಟಿವಿ ಕನ್ನಡ ಚಾನೆಲ್‌ನ್ನು ಸಬ್‌ಸ್ಕ್ರೈಬ್‌ ಮಾಡಿ..

ಸ್ಯಾಂಡಲ್​ವುಡ್‌ನಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ 3 ಕೋಟಿ ವಂಚನೆ ಆರೋಪ ಸಖತ್‌ ಸದ್ದು ಮಾಡುತ್ತಿದೆ. ಈಗಾಗಲೇ ಈ ಬಗ್ಗೆ ಧ್ರುವ ಸರ್ಜಾ ಟೀಂ ಸ್ಪಷ್ಟನೆ ಕೊಟ್ಟಿತ್ತು. ಆದರೆ ಈ ಕುರಿತು ನಟನ ವಿರುದ್ಧ ರಾಘವೇಂದ್ರ ಹೆಗಡೆ ಅವರು ಈಗ ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ಪ್ರತಿಯೊಂದು ಆರೋಪಗಳಿಗೂ ಸ್ಪಷ್ಟನೆ ಕೊಟ್ಟಿದ್ದಾರೆ. ಕನ್ನಡ‌ ವಿರೋಧಿ ಆರೋಪಕ್ಕೆ ಆ್ಯಕ್ಷನ್ ಫ್ರಿನ್ಸ್‌ ವಿರುದ್ಧ ಹೊಸ ಬಾಂಬ್‌ ಸಿಡಿಸಿದ್ದಾರೆ. ಡಿಬಾಸ್‌ ಜೊತೆ ಜಗ್ಗುದಾದಾ ಸಿನಿಮಾ ಮಾಡಿ ಗೆದ್ದಿದ್ದ ರಾಘವೇಂದ್ರ ಹೆಗಡೆ, ನಂತರ ಧ್ರುವ ಸರ್ಜಾಗೆ ಒಂದು ಸಿನಿಮಾ ಮಾಡಬೇಕಿತ್ತು. ಸದ್ಯ ಈ ವಿಷಯವಾಗಿ ವಿವಾದ ಹುಟ್ಟಿಕೊಂಡಿದ್ದು, ನಿರ್ದೇಶಕನ ಮಾತಿನಿಂದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಈ ಬಗ್ಗೆ ಮಾತನಾಡಿರುವ ರಾಘವೇಂದ್ರ ಹೆಗಡೆ, ನಾನು ಜಗ್ಗುದಾದಾ ಸಿನಿಮಾ‌ ಮಾಡಿದ್ದೆ.. ಶನಿ ಸೀರಿಯಲ್.. ಮಹಾಕಾಳಿ ಮಾಡಿದ್ದೆ. ಧ್ರುವ ಸರ್ಜಾ ಅವರಿಗೆ ಎರಡನೇ‌ ಸಿನಿಮಾ ಮಾಡಬೇಕಿತ್ತು. ಕೆಡಿ ಮುಗಿಸಬೇಕು ಅಂತ ಕೇಳಿಕೊಂಡಿದ್ರು. ಆಯ್ತು ಅಂತ ನಾನು 8 ವರ್ಷ ಕಾದೆ. ಅದಾದ ನಂತರ ತಮಿಳಿನ ಅಮರನ್ ಸಿನಿಮಾ‌ ರಿಲೀಸ್ ಆಗುತ್ತೆ. ಅದ್ರಲ್ಲಿ ಕಥೆ ಬದಲಾಯಿಸಿ ಅಂದ್ರು. ಕನ್ನಡ ಸಿನಿಮಾ ಮಾಡ್ತೀನಿ ಅಂತ ಹೇಳಿದ್ದೆ. ಆಗ ಧ್ರುವ ಅವರು ಪ್ಯಾನ್ ಇಂಡಿಯಾ ಮಾಡ್ತಿದ್ದೀವಿ, ಕೆಲವು ದಿನ ಕಳೆದ ನಂತರ ಮಾಡಿ ಅಂದ್ರು. ಇದರ ಜೊತೆಗೆ ನನ್ನ ಸಿನಿಮಾ‌ ಮುಗಿಯೋವರೆಗೂ ನೀವು ಮಾಡೋ ಹಾಗಿಲ್ಲ ಅಂತ ಪೀಪಲ್ಸ್ ಮೀಡಿಯಾದಿಂದ ನನಗೆ ನೋಟಿಸ್ ಬಂದಿದೆ. ಅಲ್ಲಿಗೆ ಇವರ ಸಿನಿಮಾ ಮುಗಿಯಲು 12 ವರ್ಷ ಆಗುತ್ತೆ. ನನಗೆ ಟೈಮ್‌ ವೇಸ್ಟ್ ಆಗುತ್ತೆ. ಹಾಗಾಗಿ, ಕಾನೂನು ಪ್ರಕಾರ ನನ್ನ ಹಣ ವಾಪಸ್ ಕೊಡಿ ಅಂತ ಕೇಳಿದ್ರೆ, ಕನ್ನಡ ವಿರೋಧಿ ಅಂತ ಹೇಳಿದ್ದಾರೆ ಅಂತಾ ಧ್ರುವ ಸರ್ಜಾ ವಿರುದ್ಧವೇ ಬಾಣ ತಿರುಗಿಸಿದ್ದಾರೆ.

ಇನ್ನು ಧ್ರುವ ಸರ್ಜಾ ಸೋಲ್ಜರ್ ಕನ್ನಡ ಸಿನಿಮಾ ಮಾಡೋದು ಅಂತ ಅಗ್ರಿಮೆಂಟ್ ಇದೆ. ತಮಿಳು, ತೆಲುಗು ಸಿನಿಮಾ ಮಾಡೋದಿದ್ರೆ ನಾನು ಯಾಕೆ ಧ್ರುವ ಸರ್ಜಾ ಜೊತೆ ಮಾಡಬೇಕು? ತಮಿಳು, ತೆಲುಗು ನಟರ ಜೊತೆ ಸಿನಿಮಾ ಮಾಡ್ತಿದ್ದೆ ಅಂತಾ ರಾಘವೇಂದ್ರ ಹೆಗಡೆ ಧ್ರುವಗೆ ಖಡಕ್‌ ಪ್ರಶ್ನೆ ಮಾಡಿದ್ದಾರೆ.

ಆದೇನೆ ಆಗಲಿ… ಗಾಂಧಿನಗರ ನಿರ್ಮಾಪಕರು ಸ್ಟಾರ್‌ ಹೀರೋಗಳ ಸಿನಿಮಾ ಸರಿಯಾಗಿ ಮಾಡ್ತಿಲ್ಲ ಅನ್ನೋ ಮಾತುಗಳು ಆಗಾಗ ಕೇಳಿ ಬರುತ್ತವೆ. ಆದ್ರೀಗ ನಿರ್ಮಾಪಕರು ಸಿನಿಮಾ ಮಾಡ್ತೀನಿ ಅಂದ್ರೂ ಆಕ್ಷನ್‌ ಪ್ರಿನ್ಸ್‌ ಸಿನಿಮಾ ಮಾಡೋಕೆ ಬರ್ತಿಲ್ಲ ಅಂತಾ ರಾಘವೇಂದ್ರ ಹೆಗಡೆ ಆರೋಪಿಸಿದ್ದಾರೆ. ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೋ ಕಾದು ನೋಡ್ಬೇಕು.

Exit mobile version