ಪಂಜಾಬ್ : ದೇಶದಲ್ಲಿ ಸಾಲು ಸಾಲು ಸೋಲು ಕಾಣುತ್ತ ತೀವ್ರ ಮುಖಭಂಗಕ್ಕೆ ಒಳಗಾಗುತ್ತಿರುವ ಕಾಂಗ್ರೆಸ್ ಗೆ ಮತ್ತೊಂದು ಮುಖಭಂಗ ಎದುರಾಗಿದೆ. ಈಗ ಭ್ರಷ್ಟಾಚಾರದ ಹೇಳಿಕೆಯಿಂದ ಕಾಂಗ್ರೆಸ್ ತೀವ್ರ ಮುಖಭಂಗ ಎದುರಿಸುತ್ತಿದೆ.
ಪಕ್ಷದಲ್ಲಿ ಸಿಎಂ ಆಗಲು 500 ಕೋಟಿ ರೂ. ಸೂಟ್ ಕೇಸ್ ನೀಡಬೇಕೆಂದು ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿಕೆ ನೀಡಿದ್ದು, ಅದು ದೊಡ್ಡ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿದ್ದವರು ಸಿಎಂ ಆಗುತ್ತಾರೆ. ದುಡ್ಡ ಕೊಟ್ಟರೆ ಮಾತ್ರ ಸಿಎಂ ಕುರ್ಚಿಯಲ್ಲಿ ಕೂರಲು ಸಾಧ್ಯ ಎಂಬ ಹೇಳಿಕೆ ನೀಡಿದ ನವಜೋತ್ ಕೌರ್ ಸಿಧು ವಿರುದ್ಧ ಪಂಜಾಬ್ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದೆ. ವಿವಾದಿತ ಹೇಳಿಕ ನೀಡಿ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿ, ಪಕ್ಷಕ್ಕೆ ಹಿನ್ನಡೆ ಉಂಟು ಮಾಡಲು ಯತ್ನಿಸಿದ್ದಾರೆಂಬ ಕಾರಣಕ್ಕೆ ವಜಾಗೊಳಿಸಲಾಗಿದೆ. ನವಜೋತ್ ಸಿಂಗ್ ಸಿಧುವನ್ನು ತಕ್ಷಣದಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪಂಜಾಬ್‌ನಲ್ಲಿ ಸದ್ಯ ಆಪ್ ಸರ್ಕಾರವಿದೆ. ಇದಕ್ಕೂ ಮೊದಲು ಕಾಂಗ್ರಸ್ ಸರ್ಕಾರವಿತ್ತು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಸಿಎಂ ಆಕಾಂಕ್ಷಿಯಾಗಿದ್ದರು. ಆದರೆ, ನಂತರ ಪಕ್ಷದ ಆಂತರಿಕ ಕಚ್ಚಾಟದಿಂದಾಗಿ ರಾಜಕೀಯದಿಂದಲೇ ದೂರ ಉಳಿದಿದ್ದರು.
ಆದರೆ, ಈಗ ಪತ್ನಿ ವಿವಾದಿತ ಕೇಂದ್ರ ಬಿಂದುವಾಗಿದ್ದಾರೆ. ನಮ್ಮ ಬಳಿ 500 ಕೋಟಿ ರೂ. ಇಲ್ಲ. 500 ಕೋಟಿ ರೂ. ಕೊಟ್ಟವರು ಮಾತ್ರ ಸಿಎಂ ಆಗಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ನಮ್ಮ ಬಳಿ ಹಣ ಇಲ್ಲ. ಹೀಗಾಗಿ ಹಲವರು ಸಿಧು ಅವರನ್ನು ತುಳಿಯಲು ಯತ್ನಿಸುತ್ತಿದ್ದಾರೆ. ಅವರ ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದರೆ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕು ಎಂದಿದ್ದಾರೆ. ಇದು ತೀವ್ರ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ, ಆಪ್ ಇದನ್ನೇ ದಾಳವಾಗಿಸಿಕೊಂಡು ಕಾಂಗ್ರೆಸ್ ಹಣೆಯಲು ಯತ್ನಿಸುತ್ತಿವೆ. ಹೀಗಾಗಿ ಕಾಂಗ್ರೆಸ್ ನಿಂದಲೇ ನವಜೋತ್ ಸಿಂಗ್ ಸಿಧು ಅವರನ್ನು ಅಮಾನತು ಮಾಡಲಾಗಿದೆ.

