Site icon BosstvKannada

ದೃಶ್ಯಂ ಸಿನಿಮಾ ಸ್ಟೈಲ್‌ನಲ್ಲೇ ಭೀಕರ ಮರ್ಡರ್!‌

ಸಿನಿಮಾದಿಂದ ಜನ ಇನ್‌ಸ್ಪೈರ್‌ ಆಗ್ತಾರೆ ಅನ್ನೋದಿಕ್ಕೆ ಇಲ್ಲೊಂದು ಫ್ರೆಶ್‌ ಉದಾಹರಣೆ ಇದೆ. ಥೇಟ್‌ ದೃಶ್ಯ ಸಿನಿಮಾ ಮಾದರಿಯಲ್ಲೇ ಒಂದು ಮರ್ಡರ್‌ ನಡೆದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮಹಿಳೆ ತನ್ನ ಬಾಯ್‌ಫ್ರೆಂಡ್‌ ಜೊತೆ ಸೇರಿ ಗಂಡನನ್ನ ಕೊಲೆ ಮಾಡಿದ್ದಾಳೆ. ಬಳಿಕ ಆತನ ಮೃತ ದೇಹವನ್ನು ಮನೆಯೊಳಗೆ ಅಡಗಿಸಿಟ್ಟಿದ್ದಳು ಅಂತಾ ವರದಿಯಾಗಿದೆ. ಆರೋಪಿ ಮಹಿಳೆ ಪತಿ ವಿಜಯ್ ಚವಾಣ್ ಕಳೆದ 15 ದಿನಗಳಿಂದ ನಾಪತ್ತೆಯಾಗಿದ್ದರು.

ವಿಜಯ್‌ಗಾಗಿ ಹುಡುಕಾಟ ನಡೆಸುತ್ತಿದ್ದ ಅವರ ಸಹೋದರರು ಸೋಮವಾರ ಬೆಳಗ್ಗೆ ವಿಜಯ್ ಮನೆಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರಿಗೆ ನೆಲದ ಕೆಲ ಟೈಲ್ಸ್‌ ಉಳಿದ ಟೈಲ್ಸ್‌ಗಳ ಬಣ್ಣದೊಂದಿಗೆ ಹೋಲಿಕೆಯಾಗದಿರುವುದು ಕಂಡು ಬಂದಿದೆ. ಇದರಿಂದ ಅನುಮಾನಗೊಂಡು, ಬೇರೆ ಬಣ್ಣದ ಟೈಲ್ಸ್‌ ತೆಗೆದಾಗ, ಕೆಳಗೆ ಹೂತುಹೋಗಿದ್ದ ಚೀಲ ಕಂಡು ಬಂದಿದ್ದು, ಕೊಳೆತ ಶವದ ವಾಸನೆ ಬರತೊಡಗಿತು. ಅವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ನಂತರ ಪೊಲೀಸರು ಬಂದು ವಿಜಯ್ ಶವ ಪತ್ತೆ ಮಾಡಿದ್ದಾರೆ. ವಿಜಯ್‌ ಪತ್ನಿ ಕೋಮಲ್‌ ಹಾಗೂ ಆಕೆಯ ಲವರ್‌ ಮೋನು ಇಬ್ಬರೂ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Exit mobile version