Site icon BosstvKannada

ತಿರುಪತಿ ಗೋಪುರ ಏರಿ ಕುಡುಕನ ಅವಾಂತರ

ತಿರುಪತಿ: ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ದೊಡ್ಡ ಭದ್ರತಾ ಲೋಪ ಬೆಳಕಿಗೆ ಬಂದಿದ್ದು, ಕುಡುಕನೋರ್ವ ಗೋಪುರ ಎರಿ ಅವಾಂತರ ಸೃಷ್ಟಿಸಿದ್ದಾನೆ.


ತಿರುಪತಿ ಗೋವಿಂದನ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕುಡುಕ ಮದ್ಯದ ನಶೆಯಲ್ಲಿ ಕಂಪೌಂಡ್ ಹಾರಿ ಒಳಗೆ ಹೋಗಿದ್ದಲ್ಲದೆ ಗೋಪುರ ಏರಿ ಕುಳಿತಿದ್ದಾನೆ. ದೇವಸ್ಥಾನದಲ್ಲಿ ಏಕಾಂತ ಸೇವೆ ಮುಗಿದ ನಂತರ ಈ ಘಟನೆ ನಡೆದಿದೆ.

ಕಂಪೌಂಡ್ ಹಾರಿ ಒಳಗೆ ಹೋಗಿ ಆತ ಈ ಕೃತ್ಯ ಎಸಗಿದ್ದಾನೆ. ಏಕಾಏಕಿ ಕುಡುಕನ ಅವಾಂತರ ಕಣ್ಣಿಗೆ ಬೀಳುತ್ತಿದ್ದಂತೆ ಅಲ್ಲಿದ್ದವರು ಕ್ಷಣಕಾಲ ಭಯಭೀತರಾಗಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಮೂರ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕುಡುಕನನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎನ್ನಲಾಗಿದೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದ್ದು, ಆತ ಗೋಪುರ ಹತ್ತಿರುವುದು ನಶೆಯ ಏಟಿನಲ್ಲೋ ಅಥವಾ ಬೇರೆ ಕಾರಣಕ್ಕೋ ಎನ್ನುವುದು ತಿಳಿಯಲಿದೆ.

Exit mobile version