ಕೂಲಿ….ಕೂಲಿ.. ಕೂಲಿ.. ಸದ್ಯ ತಮಿಳುನಾಡು ಸೇರಿ ಸಿನಿ ದುನಿಯಾದಲ್ಲಿ ಸಖತ್ ಸೌಂಡ್ ಮಾಡ್ತಿರೋ ತಲೈವಾ ರಜನಿಯ ಬಹು ನಿರೀಕ್ಷಿತ ಸಿನಿಮಾ.. ನಟ ರಜನಿಕಾಂತ್ ಸಿನಿಮಾ ಅಂದ್ರೆ ಕೇಳಬೇಕಾ ಯಾವಾಗಲೂ ಸಖತ್ ಕ್ರೇಜ್ ಸೃಷ್ಟಿಸುತ್ತವೆ. ಈ ಬಾರಿ ಅದು ದುಪ್ಪಟ್ಟಾಗಿದೆ. ಏಕೆಂದರೆ ಈ ಕೂಲಿ ಸಿನಿಮಾದಲ್ಲಿ ರಜನಿಕಾಂತ್ ವಿರುದ್ಧ ನೆಗಟಿವ್ ಶೇಡ್‌ನಲ್ಲಿ ತೆಲುಗಿನ ಸ್ಟಾರ್ ನಟ ನಾಗಾರ್ಜುನ್ ಅಕ್ಕಿನೇನಿ ಅಬ್ಬರಿಸಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ, ಬಾಲಿವುಡ್‌ನ ಆಮೀರ್ ಖಾನ್ ಸೇರಿದಂತೆ ಬಹುತಾರಾಗಣವೇ ಇದರಲ್ಲಿದೆ. ಲೋಕೇಶ್ ಕನಗರಾಜ್ ಅವರ ನಿರ್ದೇಶನವಿದ್ದು ಇದು ಸಹ ಸಿನಿಮಾದ ಕ್ರೇಜ್ ಹೆಚ್ಚಾಗುವಂತೆ ಮಾಡಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೋ ಅಂತಾ ಕಾಯುತ್ತಿದ್ದ ರಜನಿ ಅಭಿಮಾನಿಗಳಿಗೆ ಟಿಕೆಟ್ ದರ ಆಘಾತ ನೀಡಿದೆ.

ಸರ್ಕಾರದ ಮಾತಿಗೆ ಬೆಲೆನೇ ಇಲ್ವಾ?
ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿಗೆ ಮಿತಿ ನಿಗದಿ ಮಾಡಿದ ಸರ್ಕಾರ ಕರಡು ನಿಯಮ ಪ್ರಕಟಿಸಿದೆ. ಈ ಮಧ್ಯೆ ರಿಲೀಸ್ ಆಗಲಿರುವ ‘ಕೂಲಿ’ ಸಿನಿಮಾ ಟಿಕೆಟ್ 2000 ರೂಪಾಯಿ ಮಾರಾಟವಾಗಿದೆ. ಬೆಂಗಳೂರಿನಲ್ಲಿ ಇಷ್ಟೊಂದು ದುಬಾರಿ ಬೆಲೆಗೆ ಟಿಕೆಟ್ ಮಾರಾಟವಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಆಗಸ್ಟ್ 14ರ ಬೆಳಗ್ಗೆ 6 ಗಂಟೆಯಿಂದಲೇ ಚಿತ್ರ ಪ್ರದರ್ಶನಗಳು ಶುರುವಾಗಲಿವೆ. ನೂರಾರು ಥಿಯೇಟರ್‌ನಲ್ಲಿ ಧೂಳೆಬ್ಬಿಸಲು ಕೂಲಿ ರೆಡಿಯಾಗಿದೆ. ಆದರೆ 200 ರೂ.ಟಿಕೆಟ್ ನಿಗದಿ ಮಾಡುವಂತೆ ಒತ್ತಾಯಿಸಿದ್ದ ಫಿಲ್ಮ್ ಚೇಂಬರ್ ಅಧ್ಯಕ್ಷರ ಒಡೆತನದ ವೈಭವಿ ಹಾಗೂ ವೈಷ್ಣವಿ ಥಿಯೇಟರ್‌ನಲ್ಲೆ ಟಿಕೆಟ್ ದರ 800 ರೂಪಾಯಿ ಹೆಚ್ಚಾಗಿದೆ.



‘ಕೂಲಿ’ ಹಗಲು ದರೋಡೆ
ಬೆಂಗಳೂರಿನ ಎಂ.ಜಿ ರಸ್ತೆಯ ಸ್ವಾಗತ್ ಶಂಕರ್‌ನಾಗ್ ಚಿತ್ರಮಂದಿರದಲ್ಲಿ 2000 ರೂಪಾಯಿ ಹಾಗೂ 1500 ರೂಪಾಯಿ ಬೆಲೆಯ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ. ಇದೇ ರೀತಿ ಬೇರೆ ಬೇರೆ ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಹೆಚ್ಚಾಗಿದೆ. ಇನ್ನು, ಮಾಲ್‌ಗಳಲ್ಲಿ ಕೇಳೋದೇ ಬೇಡ ಎಂಬಂತಹ ಸ್ಥಿತಿ ಇದೆ. ಕನ್ನಡ ನೆಲದಲ್ಲಿ ಪರಭಾಷಿಗರ ಸಿನಿಮಾಗಳು ಹೆಚ್ಚು ಥಿಯೇಟರ್ ಪಡೆಯುವುದು ಮಾತ್ರವಲ್ಲದೇ ಹಗಲು ದರೋಡೆ ಮಾಡಲು ನಮ್ಮವರೇ ಬೆಂಬಲ ಕೊಡ್ತಿರೋದು ಎಷ್ಟು ಸರಿ ಅನ್ನೋದು ಕನ್ನಡ ಅಭಿಮಾನಿಗಳೇ ಹೇಳಬೇಕು.
ಫಿಲ್ಮ್ ಚೇಂಬರ್ ಅಧ್ಯಕ್ಷರೇ ಯಾಕಿಷ್ಟು ಅನ್ಯಾಯ?
ಇನ್ನು ತಮಿಳುನಾಡಿನಲ್ಲಿ ಇದೇ ರೇಟ್ ಇದ್ಯಾ ಅಂತ ನೋಡಿದ್ರೆ, ನಮ್ಮ ಕನ್ನಡಿಗರು ಶಾಕ್ ಆಗೋದು ಗ್ಯಾರಂಟಿ, ಕನ್ನಡಿಗರು ವಿಶಾಲ ಹೃದಯದವರು 2 ಸಾವಿರ ಏನು 3 ಸಾವಿರ ಬೇಕಾದ್ರೂ ಕೊಟ್ಟು ಸಿನಿಮಾ ನೋಡ್ತಿವಿ. ಆದ್ರೆ ಪಕ್ಕದ ತಮಿಳುನಾಡಿನಲ್ಲಿ ಮಾತ್ರ ಸಾಮನ್ಯ ಥಿಯೇಟರ್‌ನಲ್ಲೇ 60 ರಿಂದ 150 ಹಾಗೂ 200 ರೂಪಾಯಿ ಇದೆ. ಇನ್ನು ಮಲ್ಟಿಪ್ಲೆಕ್ಸ್‌ನಲ್ಲಿ 200 ರಿಂದ ಗರಿಷ್ಠ ಅಂದ್ರೆ VIP ಟಿಕೆಟ್‌ಗೆ 450 ರಿಂದ 500 ರೂಪಾಯಿ ಇದೆ. ಸಿನಿಮಾ ಟಿಕೆಟ್ ಅಲ್ಲಿ ಪಾಲೋ ಮಾಡ್ತಿದ್ದಾರೆ, ಆದ್ರ ನಮ್ಮಲ್ಲಿ ಮಾತ್ರ ಯಾಕೆ ಪಾಲೋ ಮಾಡ್ತಿಲ್ಲ. ರಾಜ್ಯ ಸರ್ಕಾರದ ಮಾತಿಗೆ ಬೆಲೆನೇ ಇಲ್ವಾ? ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿವೆ. ಕನ್ನಡಿಗರೂ ಕೂಡ ಈ ಬಗ್ಗೆ ಕನ್ನಡ ಫೀಲಂ ಚೇಂಬರ್ ಅಧ್ಯಕ್ಷರಿಗೆ ಆಗ್ರಹಿಸುತ್ತಿದ್ದಾರೆ.
ಆದೇನೆ ಆಗಲಿ… ಕನ್ನಡ ಚಿತ್ರರಂಗ ಉಳಿಬೇಕು. ಕನ್ನಡ ಸಿನಿಮಾ ಬೆಳೀಬೇಕು ಅಂತ ಹೇಳಿ ಮನೆಹಾಳ ಕೆಲಸ ಮಾಡೋ ಇವರಿಗೆ ನೀವು ಏನ್ ಹೇಳ್ತೀರಾ ಅಂತ ಕಾಮೆಂಟ್ ಮಾಡಿ ಹೇಳಿ….
