ಬೆಂಗಳೂರು : ಈ ದೇಶದಲ್ಲಿ ಬೆಕ್ಕುಗಳು ಬೀದಿಲಿ ಅಲೆದಾಡುವಂತಿಲ್ಲ. ಯಾವುದಾದರೂ ಬೆಕ್ಕು ಮನೆ ಹೊರಗಡೆ ಕಾಣಿಸಿಕೊಂಡ್ರೆ ಕಂಡಲ್ಲೇ ಗುಂಡಿಕ್ಕಿ ಕೊಲ್ಲಲಾಗ್ತಿದೆ. ಅಲ್ಲದೇ 2050ರ ವೇಳೆಗೆ ಒಂದೇ ಒಂದು ಬೆಕ್ಕು ಬೀದಿಯಲ್ಲಿಲ್ಲದಂತೆ ಮಾಡೋದು ಈ ದೇಶದ ಸರ್ಕಾರದ ಉದ್ದೇಶವಾಗಿದೆ. ಯಾಕಪ್ಪಾ ಬೆಕ್ಕುಗಳ ಮೇಲೆ ಇಷ್ಟೊಂದು ದ್ವೇಷ ಅಂತಾ ನಿಮಗೆ ಅನ್ನಿಸುತ್ತಿರಬಹುದು. ವಿಷಯ ಏನೆಂದರೆ, ಬೀದಿಬೆಕ್ಕುಗಳು ಆ ದೇಶದ ಬಯೋಡೈವರ್ಸಿಟಿಯನ್ನ ಹಾಳು ಮಾಡುತ್ತಿವೆಯಂತೆ. ಬೆಕ್ಕುಗಳ ಬುದ್ಧಿನೇ ಬೇಟೆಯಾಡೋದು, ಕಾದು ಹೊಂಚು ಹಾಕೋದು. ಇದರಿಂದ ಅಲ್ಲಿನ ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ಸಾಯುತ್ತಿವೆ. ಎಷ್ಟೋ ಪಕ್ಷಿಗಳ ಪ್ರಜಾತಿಗಳು ಅಳಿವಿನ ಹಂತದಲ್ಲಿವೆ. ಇದಕ್ಕೆ ಮುಖ್ಯ ಕಾರಣವೇ ಬೀದಿಬೆಕ್ಕುಗಳಾಗಿವೆ. ಹೀಗಾಗಿ ನ್ಯೂಜಿಲ್ಯಾಂಡ್ ಸರ್ಕಾರ ಬೀದಿಬೆಕ್ಕುಗಳ ಮಾಸ್ ಕಿಲ್ಲಿಂಗ್ ಮಾಡ್ತಾ ಇದೆ. ಒಟ್ಟು 25 ಲಕ್ಷ ಬೀದಿಬೆಕ್ಕುಗಳು ನ್ಯೂಜಿಲ್ಯಾಂಡ್‌ನಲ್ಲಿವೆ. 2050ರ ವೇಳೆಗೆ ಈ ಬೆಕ್ಕುಗಳ ಅಸ್ತಿತ್ವವನ್ನ ನಾಶ ಮಾಡೋದಕ್ಕೆ ಸರ್ಕಾರ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಬೆಕ್ಕುಗಳ ಮಾರಣಹೋಮ ಮಾಡ್ತಿದೆ.
2016ರಲ್ಲಿ ನ್ಯೂಜಿಲ್ಯಾಂಡ್ ಸರ್ಕಾರ ಪ್ರಿಡೇಟರ್ ಫ್ರೀ 2050 ಎಂಬ ಅಭಿಯಾನ ಆರಂಭಿಸಿತ್ತು. ಬಯೋಡೈವರ್ಸಿಟಿಗೆ ಹಾನಿಯುಂಟುಮಾಡುವ ಎಲ್ಲಾ ಪ್ರಾಣಿಗಳನ್ನ ಕೊಲ್ಲೋದು ಈ ಅಭಿಯಾನದ ಉದ್ದೇಶವಾಗಿದೆ. ಇನ್ನು, ಕಳೆದ 2024ರವರೆಗೂ ಸರ್ಕಾರದ ಲಿಸ್ಟ್‌ನಲ್ಲಿ ಬೀದಿಬೆಕ್ಕುಗಳ ಸೇರ್ಪಡೆ ಆಗಿರ್ಲಿಲ್ಲ. ಆದ್ರೆ, ಕಳೆದ ವರ್ಷ ಪಬ್ಲಿಕ್ ಒಪೀನಿಯನ್ ಸರ್ವೇ ಮಾಡಲಾಗಿತ್ತು. ಈ ಸರ್ವೇ ಪ್ರಕಾರ ಸರ್ಕಾರದ ನಿರ್ಧಾರಕ್ಕೆ ಅಲ್ಲಿನ ನಾಗರೀಕರೂ ಕೂಡ ಸಾಥ್ ನೀಡಿದ್ದಾರಂತೆ.
ಈ ದೇಶದಲ್ಲಿ ನಡೆಯಲಿದೆ ಬೆಕ್ಕುಗಳ ಮಾರಣಹೋಮ!

