ಕೊಡಗು ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು(Kodagu Rain Alert), ಮುಂಗಾರು ಪೂರ್ವ ಮಳೆ ಜೋರಾಗೇ ಅಬ್ಬರಿಸುತ್ತಿದೆ. ಕೊಡಗಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಅದರಲ್ಲೂ ಕಾವೇರಿ ಉಗಮಸ್ಥಾನ ತಲಕಾವೇರಿ ಭಾಗಮಂಡಲದಲ್ಲೂ ಭಾರಿ ಮಳೆಯಾಗಿದ್ದು, ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ.

ಇನ್ನು ಹಾರಂಗ ಜಲಾನಯನ ಪ್ರದೇಶದಲ್ಲೂ ಭಾರಿ ಮಳೆಯಾಗುತ್ತಿದ್ದು, ಹಾರಂಗಿ ಜಲಾಶಯಕ್ಕೆ ಹರಿದು ಬರುವ ಒಳಹರಿವಿನ ಪ್ರಮಾಣವು ಕೂಡ ಹೆಚ್ಚಾಗಿದೆ. ಭಾರಿ ಮಳೆಯ ಹಿನ್ನಲೆ ತಲಕಾವೇರಿ ದೇವಾಲಯದ ಆವರಣದಲ್ಲಿ ನೀರು ತುಂಬಿ ದೇವಾಲಯದ ಮುಂಭಾಗ ಮೆಟ್ಟಿಲ ಮೇಲೆ ಮಳೆಯ ನೀರು ಜಲಪಾತದಂತೆ ಹರಿದ ದೃಶ್ಯ ಕಂಡುಬಂದಿದ್ದು, ನೋಡುಗರನ್ನ ಆಕರ್ಷಿಸಿದೆ.

ಇನ್ನು ಭಾರಿ ಗಾಳಿ ಮಳೆಗೆ ಮರಗಳು ಧರೆಗುರುಳಿದ್ದು, ಕಡಗದಾಳು ಬಳಿ ರಸ್ತೆ ಅಡ್ಡಲಾಗಿ ಬೃಹತ್‌ ಗಾತ್ರದ ಮರ ಬಿದ್ದಿದೆ. ಇದರ ಪರಿಣಾಮ ಕೆಲಕಾಲ ಮಡಿಕೇರಿ-ಸಿದ್ದಾಪುರ ರಸ್ತೆ ಬಂದ್ ಆಗಿ ರಸ್ತೆ ಸಂಚಾರದಲ್ಲಿ ತೋಡಕುಂಟಾಗಿತ್ತು. ಇನ್ನೂ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇನ್ನು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಜೂ.1ರವರೆಗೆ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Also Read: ಬೆಥೆಲ್‌, ಎನ್‌ಗಿಡಿ ಔಟ್.. RCBಗೆ ಘಟಾನುಘಟಿಗಳ ಎಂಟ್ರಿ!

ಬಾರೀ ಮಳೆಯಿಂದಾಗಿ ಕೊಡುಗು ಜಿಲ್ಲೆಯಲ್ಲಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ನದಿತೀರದ ನಿವಾಸಿಗಳಿಗೆ ಪ್ರವಾಹದ ಆತಂಕ ಎದುರಾಗಿದೆ. ಹೀಗಾಗಿ, ಎರಡು ದಿನಗಳ ಕಾಲ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕೊಡಗು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಎಲ್ಲ ಕಾಲೇಜುಗಳಿಗೆ ಮೇ 26 ಮತ್ತು 27 ಎರಡು ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ. ಹಾಗೇ, ಅಂಗನವಾಡಿಗಳಿಗೂ ಕೂಡ ಜಿಲ್ಲಾಡಳಿತ ರಜೆ ಘೋಷಿಸಿದೆ.

Share.
Leave A Reply