ಇಸ್ಲಾಮಾಬಾದ್‌: ಪಾಕಿಸ್ತಾನ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲಿನಲ್ಲಿದ್ದಾರೆ. ಆದರೆ, ಇಮ್ರಾನ್ ಖಾನ್ ಮತ್ತು ಪಾಕ್ ಸೇನಾಧ್ಯಕ್ಷ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮಧ್ಯದ ಜಗಳ ಜೋರಾಗಿದ್ದು, ಇಬ್ಬರೂ ಪರಸ್ಪರ ಮಾನಸಿಕ ಅಸ್ವಸ್ಥರೆಂದು ಕರೆದುಕೊಳ್ಳುತ್ತಿದ್ದಾರೆ.

ಇಬ್ಬರೂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಇಮ್ರಾನ್ ಖಾನ್ ಅವರು ಮುನೀರ್ ರನ್ನು ಮಾನಸಿಕವಾಗಿ ಅಸ್ಥಿರವಾಗಿರುವ ಜನರಲ್ ಎಂದು ಕರೆದಿದ್ದಾರೆ. ಇದರಿಂದಾಗಿ ಕೋಪಗೊಂಡಿರುವ ಪಾಕಿಸ್ತಾನ್ ಸೇನೆ, ಮಾನಸಿಕ ಅಸ್ವಸ್ಥ ಮತ್ತು ನಾರ್ಸಿಸಿಸ್ಟ್ ಎಂದು ಇಮ್ರಾನ್ ಖಾನ್ ರನ್ನು ಕರೆದಿದೆ.

ಅಲ್ಲದೇ, ಪಾಕ್ ಸೇನಾ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಷರೀಫ್ ಚೌಧರಿ, ಇಮ್ರಾನ್ ಖಾನ್ ಹಾಗೂ ಬೆಂಬಲಿಗರು, ಕುಟುಂಬಸ್ಥರ ವಿರುದ್ಧ ಕಿಡಿಕಾರಿದ್ದಾರೆ. ದೇಶದಲ್ಲಿ ಅಶಾಂತಿ ಉಂಟು ಮಾಡಲು ಇವರೆಲ್ಲ ಯತ್ನಿಸುತ್ತಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೇ, ತಮ್ಮನ್ನು ಭೇಟಿಯಾಗಲು ಬರುವ ಬೆಂಬಲಿಗರಿಗೆ ಅಶಾಂತಿ ಉಂಟು ಮಾಡಲು ಪ್ರೇರೇಪಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

Share.
Leave A Reply