ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರಸ್ಪರ ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜಿಸಿ, ಡ್ಯಾಮೇಜ್ ಕಂಟ್ರೋಲ್ ಮಾಡಲು ಯತ್ನಿಸಿದರೂ ಒಳ ಬೇಗುದಿ ಮಾತ್ರ ಉರಿಯುತ್ತಿದೆ.
ಸಿಎಂ ಹಾಗೂ ಡಿಸಿಎಂ ಬ್ರೇಕ್ ಫಾಸ್ಟ್ ಸಭೆಯ ನಂತರ ಪರಿಸ್ಥಿತಿ ಸರಿಯಾಗಬಹುದು. ಸಿಎಂ ಕುರ್ಚಿಯ ಫೈಟ್ ಇಲ್ಲಿಗೆ ಅಂತ್ಯವಾಗಬಹುದು ಎಂದೇ ಎಲ್ಲರೂ ವ್ಯಾಖ್ಯಾನಿಸಿದ್ದರು. ಆದರೆ, ಬಣಗಳ ಬಡಿದಾಟ ಮಾತ್ರ ಸೇಡು ತೀರಿಸಿಕೊಳ್ಳಲು ಯತ್ನಿಸುತ್ತಲೇ ಇವೆ ಎಂಬುವುದು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿವೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗಾಂಧಿ – ಗುರು ಸಂವಾದಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಮಾವೇಶದ ಮೂಲಗ ಈ ಬಣಗಳ ಬಡಿದಾಟ ಬಹಿರಂಗವಾಗಿದೆ. ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಸಿಎಂ ಆಪ್ತ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಸಿಎಂ ಸತೀಶ್ ಜಾರಕಿಹೊಳಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಆವರ ಆಪ್ತ ವಲಯ ಸಾಥ್ ನೀಡಿತ್ತು. ಆದರೆ, ಈ ಕಾರ್ಯಕ್ರಮಕ್ಕೆ ಡಿಸಿಎಂ ಮಾತ್ರ ಹಾಜರಾಗಿರಲಿಲ್ಲ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಬ್ಯಾನರ್ ಗಳು ರಾರಾಜಿಸಿದ್ದವು. ಆದರೆ, ಡಿ.ಕೆ. ಕಾರ್ಯಕ್ರಮಕ್ಕೆ ಹೋಗುವುದಿರಲಿ. ಬ್ಯಾನರ್ ಗಳಲ್ಲೂ ಡಿಕೆಶಿ ಫೋಟೋ ಇರಲಿಲ್ಲ. ಹೀಗಾಗಿ ಇದು ದೊಡ್ಡ ಸಂಶಯಕ್ಕೆ ನಾಂದಿ ಹಾಡಿದೆ. ಇದು ಡಿ.ಕೆ. ಶಿವಕುಮಾರ್ ಬಣದ ಅಸಮಾಧಾನಕ್ಕೆ ಕಾರಣವಾಗಿದೆ. ಈ ಒಗ್ಗಟ್ಟು ಡಿಕೆಗೆ ಆತಂಕ ಹಾಗೂ ಹಿನ್ನಡೆ ನೀಡುತ್ತಿದ್ದರೆ, ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿಯ ಫೈಟ್ ಮತ್ತಷ್ಟು ಇಂಬು ಪಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
