ರಾಯಚೂರು: ವಿಷಪೂರಿತ ನೀರು ಕುಡಿದ ಪರಿಣಾಮ 60ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜಿಲ್ಲೆಯ ಅರಕೇರಾ ತಾಲೂಕಿನ ಹೆಗ್ಗಡದಿನ್ನಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕೃಷಿ ಹೊಂಡವೊಂದರಲ್ಲಿ ನೀರು ಕುಡಿದಿದ್ದ ಕುರಿಗಳು ಅಸ್ವಸ್ಥವಾಗಿದ್ದವು. ಹೊಂಡದ ನೀರೇ ಕುರಿಗಳ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ. ಕುರಿಗಾಯಿ ಭೀಮಪ್ಪ ಮಲ್ಲಿನಾಯಕನದೊಡ್ಡಿ ಎಂಬುವವರಿಗೆ ಸೇರಿದ್ದ ಸುಮಾರು 100 ಕುರಿಗಳ ಪೈಕಿ 60 ಕುರಿಗಳು ಸಾವನ್ನಪ್ಪಿವೆ.
ಈ ಘಟನೆಯಿಂದಾಗಿ ಸುಮಾರು 5 ಲಕ್ಷ ರೂ.ಗೂ ಅಧಿಕ ನಷ್ಟವಾಗಿದೆ. ಸ್ಥಳಕ್ಕೆ ಗಬ್ಬೂರು ಪೊಲೀಸರು, ಪಶು ವೈದ್ಯಾಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಲು ಕುರಿಗಾಯಿ ಭೀಮಪ್ಪ ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

