BosstvKannada

47 ವರ್ಷದ ಟ್ರೋಫಿ ಬರ : ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ಭಾರತ ಮಹಿಳಾ ತಂಡ

ಸದ್ಯ ಮಹಿಳಾ ವಿಶ್ವಕಪ್‌ನ ಕ್ರೇಜ್‌ ಇಂದಿನಿಂದ ಶುರುವಾಗಿದೆ.. ಅದ್ರಲ್ಲೂ ವಿಶೇಷ ಅಂದ್ರೆ ನಮ್ಮ ಭಾರತ, ಶ್ರೀಲಂಕಾ ಜೊತೆ ಸೇರಿ ಐಸಿಸಿ ಏಕದಿನ ವಿಶ್ವಕಪ್‌ನ ಜಂಟಿ ಆತಿಥ್ಯ ವಹಿಸಿದೆ.. 13ನೇ ಆವೃತ್ತಿಯ ವಿಶ್ವಕಪ್‌ ಪಂದ್ಯಗಳು ಇಂದಿನಿಂದಲೇ ಆರಂಭವಾಗಲಿದ್ದು, ಮೊದಲ ದಿನವೇ ಭಾರತ ಹಾಗೂ ಶ್ರೀಲಂಕಾ ತಂಡಗಳು ಸೆಣೆಸಾಡುತ್ತಿವೆ… ಮಹಿಳಾ ವಿಶ್ವಕಪ್‌ ನವೆಂಬರ್‌ 2ರವರೆಗೆ ನಡೆಯಲಿದ್ದು, ಒಟ್ಟು 8 ಟೀಮ್‌ಗಳು ಭರ್ಜರಿ ಕಾಳಗ ನಡೆಸಲಿವೆ.. ಇನ್ನೂ ಎಲ್ಲಾ ತಂಡಗಳು ಒಂದೇ ಗುಂಪಿನಲ್ಲಿ ಮುಖಾಮುಖಿಯಾಗಲಿದ್ದು ಪ್ರಸ್ತುತ ಟೂರ್ನಿ ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯಲಿದೆ..

ಲೀಗ್‌ನ 28 ಪಂದ್ಯಗಳ ಪೈಕಿ 11 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.. ಇನ್ನೊಂದು ವಿಶೇಷ ಅಂದ್ರೆ ಚಾಂಪಿಯನ್‌ ಆದ ತಂಡಕ್ಕೆ ಬರೋಬ್ಬರಿ ₹39.55 ಕೋಟಿ ರು. ನಗದು ಬಹುಮಾನ ಸಿಗಲಿದೆ.. ಮುಖ್ಯವಾಗಿ 1978ರಿಂದ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಮಹಿಳಾ ತಂಡ 2005 ಹಾಗೂ 2017ರಲ್ಲಿ ರನ್ನರ್‌ ಅಪ್‌ ಆಗಿದ್ದು ಬಿಟ್ರೆ ಇದುವರೆಗೂ ಚಾಂಪಿಯನ್‌ ಆಗಿಲ್ಲ.. ಹೀಗಾಗಿ 47 ವರ್ಷಗಳಿಂದ ಟ್ರೋಫಿಯ ಕನಸು ಕಾಣುತ್ತಿರುವ ಭಾರತ ಈ ವರ್ಷ ತವರಿನಲ್ಲೇ ವಿಶ್ವಕಪ್‌ ನಡೆಯುತ್ತಿರುವ ಕಾರಣ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಆತ್ಮವಿಶ್ವಾಸದಲ್ಲಿದೆ.. ಹರ್ಮನ್‌ಪ್ರೀತ್ ನಾಯಕತ್ವದ ಭಾರತ ಮಹಿಳಾ ತಂಡ ಮೊದಲ ದಿನವೇ ಗೆದ್ದು ಶುಭಾರಂಭ ಮಾಡಿ ಟ್ರೋಫಿ ಗೆಲ್ಲುವ ಭರವಸೆ ಮೂಡಿಸಿದೆ..

ಬಹುನಿರೀಕ್ಷಿತ ಐಸಿಸಿ 13 ನೇ ಆವೃತ್ತಿಯ ಮಹಿಳಾ ಏಕದಿನ ವಿಶ್ವಕಪ್‌ನ ಮೊದಲ ಪಂದ್ಯವೂ ಗುವಾಹಟಿಯಲ್ಲಿ ನಡೆಯಲಿದ್ದು, ಅತಿಥೇಯ ಭಾರತವನ್ನು ಶ್ರೀಲಂಕಾವೂ ಎದುರಿಸಲಿದೆ. ಭಾರತ ತಂಡದ ನಾಯಕತ್ವವನ್ನು ಹರ್ಮನ್ ಪ್ರೀತ್ ವಹಿಸಲಿದ್ದು, ಚಾಮರಿ ಅಟ್ಟ ಪಟ್ಟು ಶ್ರೀಲಂಕಾ ತಂಡವನ್ನು ಮುನ್ನೆಡೆಸಲಿದ್ದಾರೆ. ಒಟ್ಟು 50 ಓವರ್‌ನ ಈ ಪಂದ್ಯದಲ್ಲಿ ಭಾರತ ಹಾಗೂ ಶ್ರೀಲಂಕಾದಾದಂತ್ಯ ಒಟ್ಟು 31 ಪಂದ್ಯಗಳು ನಡೆಯಲಿದೆ. ಎಂಟು ಅಗ್ರ ತಂಡಗಳು ಪ್ರತಿಷ್ಠಿತ ಟ್ರೋಫಿಗಾಗಿ ಸ್ಪರ್ಧಿಸುತ್ತಿವೆ.

Read Also : ಆನ್​ಲೈನ್ ಪ್ರಸಾದ ಪಡೆಯುವ ಭಕ್ತರೇ ಎಚ್ಚರ..! : ನಕಲಿ ವೆಬ್​ಸೈಟ್ ತೆರೆದು ಪಂಗನಾಮ ಹಾಕ್ತಾರೆ ಹುಷಾರ್‌..!

Exit mobile version