Site icon BosstvKannada

3 ಈಡಿಯಟ್ಸ್ ಖ್ಯಾತಿಯ ನಟ ಅಚ್ಯುತ್‌ ಪೋತ್ದಾರ್ ನಿಧನ

3 ಈಡಿಯಟ್ಸ್ ಸೇರಿದಂತೆ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಅಚ್ಯುತ್ ಪೋತ್‌ದಾರ್ ನಿಧನರಾಗಿದ್ದಾರೆ. ಇವರು ಜನಪ್ರಿಯ ಮರಾಠಿ ನಟರಲ್ಲಿ ಕೂಡ ಒಬ್ರು. ಅನಾರೋಗ್ಯದಿಂದ ಬಳಲ್ತಾ ಇದ್ದ ಅಚ್ಯುತ್ ಅವರಿಗೆ 91 ವರ್ಷ ವಯಸ್ಸಾಗಿತ್ತು. ಅನಾರೋಗ್ಯದ ಸಮಸ್ಯೆಯಿಂದ ಥಾಣೆಯ ಜೂಪಿಟರ್ ಆಸ್ಪತ್ರೆಗೆ ದಾಖಲಾಗಿದ್ರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ತಮ್ಮ ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ 125ಕ್ಕೂ ಹೆಚ್ಚು ಮರಾಠಿ ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಅಚ್ಯುತ್ ಪೋತ್‌ದಾರ್ ಅಭಿನಯಿಸಿದ್ದಾರೆ. ಆಕ್ರೋಶ್, ಆಲ್ಬರ್ಟ್ ಪಿಂಟೊ ಕೊ ಗುಸ್ಸಾ ಕ್ಯೂಂ ಆತಾ ಹೈ, ಅರ್ಧ್ ಸತ್ಯ, ತೇಝಾಬ್, ಪರಿಂದಾ, ರಾಜು ಬನ್ ಗಯಾ ಜೆಂಟಲ್ ಮನ್, ದಿಲ್ವಾಲೆ, ರಂಗೀಲಾ, ವಾಸ್ತವ್, ಹಮ್ ಸಾಥ್ ಸಾಥ್ ಹೈಂ, ಪರಿಣೀತ, ಲಗೆ ರಹೊ ಮುನ್ನಾ ಭಾಯಿ, ದಬಾಂಗ್ 2 ಹಾಗೂ ವೆಂಟಿಲೇಟರ್ ನಂತಹ ಚಿತ್ರಗಳಲ್ಲಿನ ತಮ್ಮ ಅಭಿನಯದಿಂದ ಅವರು ಮನೆ ಮಾತಾಗಿದ್ದರು. ಆಮಿರ್ ಖಾನ್ ನಾಯಕತ್ವದ ‘3 ಈಡಿಯಟ್ಸ್’ ಚಿತ್ರದಲ್ಲಿ ಪ್ರೊಫೆಸರ್ ಪಾತ್ರ ನಿರ್ವಹಿಸಿದ್ದ ಅಚ್ಯುತ್ ಪೋತ್‌ದಾರ್, ‘ಕೆಹ್ನ ಕ್ಯಾ ಚಾಹ್ತೆ ಹೋʼ ಸಂಭಾಷಣೆಯಿಂದ ಭಾರಿ ಜನಪ್ರಿಯರಾಗಿದ್ದರು.

Exit mobile version