Site icon BosstvKannada

Kargil Vijay Diwas : 26ನೇ ಕಾರ್ಗಿಲ್​ ವಿಜಯೋತ್ಸವದ ದಿನ.. ಭಾರತೀಯ ಸೇನೆಯ ಶೌರ್ಯ, ತ್ಯಾಗದ ಸ್ಮರಣೆ

ಇಂದು ಭಾರತ ದೇಶವು ಅಪಾರ ಸಂಖ್ಯೆಯ ಯೋಧರನ್ನ ಕಳೆದುಕೊಂಡ ದಿವಸ. 1999ರಲ್ಲಿ ಭಾರತ ಪಾಕಿಸ್ತಾನದ ಭಯೋತ್ಪಾದರನ್ನು ಬಗ್ಗುಬಡಿದ ದಿನ. ಈ ಕಾರ್ಗಿಲ್‌ ಯುದ್ಧಕ್ಕೆ ಇವತ್ತಿಗೆ 26 ವರ್ಷ. ಭಾರತವು ಕಾರ್ಗಿಲ್‌ ವಿಜಯ್‌ ದಿವಸ್‌ನ 26ನೇ ವಾರ್ಷಿಕೋತ್ಸವನ್ನ ಆಚರಿಸಲಾಗ್ತಿದೆ. ದೇಶದ ಯೋಧರು ಪಾಕಿಸ್ತಾನದ ಸೇನೆಯ ವಿರುದ್ಧ ಅಪ್ರತಿಮ ಶೌರ್ಯ, ಧೈರ್ಯ ಹಾಗೂ ಸಾಹಸ ಮೆರೆದು ವಿಜಯ ಪತಾಕೆ ಹಾರಿಸಿದ ದಿನವಾಗಿದೆ.

ಹುತಾತ್ಮ ಯೋಧರಿಗೆ ಗೌರವ

ಮೂರು ತಿಂಗಳ ಕಾಲ ನಡೆದ ಈ ಯುದ್ಧದಲ್ಲಿ ಪಾಕ್‌ಗೆ ಪಾಠ ಕಲಿಸಿದ ಭಾರತ ಗೆದ್ದು ಬೀಗಿತ್ತು. ದೇಶದ ಹೆಮ್ಮಯ ಯೋಧರ ಸಾಹಸ, ತ್ಯಾಗವನ್ನ ಸ್ಮರಿಸುವ ಈ ದಿನದ ಸ್ಮರಣಾರ್ಥವಾಗಿ ಇಂದು ದೇಶಾದ್ಯಂತ ಕಾರ್ಗಿಲ್‌ ವಿಜಯ ದಿವಸವನ್ನ ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಮಾಲಾರ್ಪಣೆ ಸಮಾರಂಭವನ್ನು ಆಯೋಜಿಸಲಾಗಿದೆ. ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಹುತಾತ್ಮ ಯೋಧರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ.

ಕಾರ್ಗಿಲ್‌ ಯುದ್ಧ

1999ರ ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಧೈರ್ಯ, ತ್ಯಾಗ, ಮತ್ತು ದೇಶಭಕ್ತಿ ವಿಶ್ವಕ್ಕೆ ತೋರಿದ ದಿನ. ಈ ಯುದ್ಧವು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಎತ್ತರದ ಶಿಖರಗಳಲ್ಲಿ, ಪಾಕಿಸ್ತಾನದ ಒಳನುಗ್ಗುವಿಕೆಯ ವಿರುದ್ಧ ಭಾರತೀಯ ಸೈನಿಕರ ಹೋರಾಡಿದರು.

ಪಾಕಿಸ್ತಾನದ ಈ ದುಷ್ಟ ಯೋಜನೆಯನ್ನು ಅರಿತ ಭಾರತೀಯ ಸೇನೆಯು ತಕ್ಷಣ ಕಾರ್ಯಾಚರಣೆಗೆ ಸಿದ್ಧವಾಯಿತು. ಮೇ 26, 1999ರಂದು, ಭಾರತೀಯ ವಾಯುಪಡೆಯು ‘ಆಪರೇಷನ್ ಸಫೇದ್ ಸಾಗರ್’ ಆರಂಭಿಸಿ, ಶತ್ರು ಸ್ಥಾನಗಳ ಮೇಲೆ ವಾಯುದಾಳಿಗಳನ್ನು ನಡೆಸಿತು. ಏಕಕಾಲದಲ್ಲಿ, ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಆರಂಭಿಸಿ, ಒಳನುಗ್ಗುವವರನ್ನು ಓಡಿಸಲು ಯೋಜನೆ ರೂಪಿಸಿತು. ಈ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಪ್ರಮುಖ ಪಾತ್ರ ವಹಿಸಿದವು. ಬಟಾಲಿಕ್, ಕಕ್ಸರ್, ಡ್ರಾಸ್, ಮತ್ತು ಮುಷ್ಕೋ ಕಣಿವೆಯಂತಹ ಕಾರ್ಯತಂತ್ರದ ಪ್ರದೇಶಗಳಲ್ಲಿ ತೀವ್ರ ಹೋರಾಟ ನಡೆಯಿತು.

ಜುಲೈ 26, 1999ರ ವೇಳೆಗೆ, ಭಾರತೀಯ ಸೇನೆಯು ಕಾರ್ಗಿಲ್‌ನ ಎಲ್ಲಾ ಶಿಖರಗಳನ್ನು ಶತ್ರುವಿನಿಂದ ಮುಕ್ತಗೊಳಿಸಿತು. ಕ್ಯಾಪ್ಟನ್ ವಿಕ್ರಮ್ ಬತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ ಹಾಗೂ ಅನೇಕ ಸೈನಿಕರ ತ್ಯಾಗ ಈ ಯಶಸ್ಸಿನ ಉಸ್ತುವಾರಿ. ಒಟ್ಟು 527 ಸೈನಿಕರು ಹುತಾತ್ಮರಾದರೂ, ಭಾರತದ ಧ್ವಜವು ಕಾರ್ಗಿಲ್‌ನ ಶಿಖರಗಳಲ್ಲಿ ಹಾರಿತು.. ಕಾರ್ಗಿಲ್ ವಿಜಯ ದಿವಸವನ್ನು ಪ್ರತಿ ವರ್ಷ ಜುಲೈ 26ರಂದು ಆಚರಿಸಲಾಗುತ್ತದೆ, ಇದು ಭಾರತೀಯ ಸೇನೆಯ ಧೈರ್ಯ ಮತ್ತು ದೇಶಭಕ್ತಿಯ ಸಂಕೇತವಾಗಿದೆ.

Exit mobile version