Site icon BosstvKannada

15 ವರ್ಷಗಳಿಂದ ಸೇವೆಯಲ್ಲಿದ್ದ Boeing 787.. ಪತನವಾಗಿದ್ಯಾಕೆ..?

265 ಜನರ ಸಜೀವ ದಹನ.. ಲಂಡನ್‌ಗೆ ಪ್ರಯಾಣ ಬೆಳೆಸಿದ್ದವರು ತಮ್ಮ ಜೀವನಯಾತ್ರೆಯನ್ನೇ ಮುಗಿಸಿದ್ದಾರೆ.. ಭೋಜನಕ್ಕೆ ಕುಳಿತ ವಿದ್ಯಾರ್ಥಿಗಳ ಬದುಕೇ ಅಂತ್ಯಗೊಂಡಿದೆ.. ಇದು ಇತ್ತೀಚೆಗೆ ನಮ್ಮ ದೇಶದಲ್ಲಿ ಆವರಿಸಿದ ಘನಘೋರ ದುರಂತ.. ಈ ಹಿಂದೆಯೂ ಹಲವಾರು ವಿಮಾನಗಳು ಪತನವಾಗಿದ್ವು.. ಇಂತಹ ದುರಂತಗಳೂ ನಡೆದಿದೆ.. ಆದ್ರೆ ದಿ ಮೋಸ್ಟ್‌ ಸೇಫೆಸ್ಟ್‌ ವಿಮಾನವೆನಿಸಿಕೊಂಡಿದ್ದ Boeing 787 ದುರಂತಕ್ಕೊಳಗಾಗಿದ್ದೇಗೆ..? ಅದರ ವಿಷೇಶತೆ ಏನು..? ಅದರ ಇತಿಹಾಸದ ವಿವರ ಒಂದೊಂದಾಗೇ ವಿವರಿಸಲಾಗಿದೆ..


ಭದ್ರತೆಗೆ ಹೇಳಿ ಮಾಡಿಸಿದಂತಿದ್ದ ವಿಮಾನ..!

ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್​ ಇಂಡಿಯಾದ ಬೋಯಿಂಗ್-787 ಡ್ರೀಮ್‌ಲೈನರ್ ವಿಮಾನ ಮೆಘಾನಿ ನಗರದಲ್ಲಿ ದುರಂತ ಅಂತ್ಯ ಕಂಡಿದೆ.. ತನ್ನಲ್ಲಿದ್ದವರ ಜೊತೆಗೆ ಕೆಳಗಿದ್ದವರನ್ನ ದಹಿಸಿದೆ.. ಆದ್ರೆ ಈ ವಿಮಾನ ಪ್ರಯಾಣಿಕರ ಸುರಕ್ಷತೆಗೆ ಹೇಳಿ ಮಾಡಿಸಿರುವಂತದ್ದು ಅನ್ನೋದು ಎಲ್ಲರೂ ಗಮನಿಸಬೇಕು..

ಯಾಕಂದ್ರೆ ಏರ್‌ ಇಂಡಿಯಾದ ವಿಮಾನಗಳಿಗೆ ಒಂದು standard ಇದೆ.. ಅದ್ರಲ್ಲೂ Boeing 787 15 ವರ್ಷಗಳಿಂದ ಸೇವೆಯಲ್ಲಿದ್ದು, ಅಭಿವೃದ್ಧಿ ಮತ್ತು ಕಾರ್ಬನ್-ಫೈಬರ್ ವಿಮಾನಗಳ ವಿಚಾರದಲ್ಲಿ ಇದು ಬೋಯಿಂಗ್‌ ಸಂಸ್ಥೆಯ ಲೇಟೆಸ್ಟ್‌ ವಿಮಾನ.. ಜೊತೆಗೆ ದೀರ್ಘ ಪ್ರಯಾಣಕ್ಕೆಂದೇ ತಯಾರು ಮಾಡಲಾಗಿರುವ ವಿಮಾನ.. ಇನ್ನೂ ಇದರ ವಿಶೇಷತೆಯನ್ನ ನೋಡೋದಾದ್ರೆ..

Boeing 787 ವಿಶೇಷತೆ
Boeing 787 ವಿಮಾನ 56 ಮೀಟರ್ ಉದ್ದವಿದ್ದು, 17 ಮೀಟರ್‌ ಎತ್ತರವಿದೆ.. ಅದರ ರೆಕ್ಕೆಯ ಅಗಲ 60 ಮೀಟರ್‌ನಷ್ಟು ಇದೆ.. ಜೊತೆಗೆ ಈ ವಿಮಾನ 2 ಇಂಜಿನ್‌ಗಳನ್ನ ಹೊಂದಿದ್ದು ಅದರ ಇಂಧನ 1,26,000 ಲೀಟರ್ ಸಾಮರ್ಥ್ಯ ಹೊಂದಿದೆ.. ಈ ವಿಮಾನದ ವ್ಯಾಪ್ತಿ 13,620 ಕಿ.ಮೀ. ಇದ್ದು ಗಂಟೆಗೆ 954 ಕಿಮೀ ವೇಗದಲ್ಲಿ ಚಲಿಸುತ್ತದೆ.. ಈ ವಿಮಾನ 250ಕ್ಕೂ ಹೆಚ್ಚು ಸೀಟ್‌ಗಳನ್ನ ಹೊಂದಿದ್ದು, ಬೋಯಿಂಗ್‌ ಸಂಸ್ಥೆ ಇದನ್ನ ತಯಾರಿಸಿದೆ.. ಈ ವಿಮಾನವನ್ನು ಬರೋಬ್ಬರಿ 2.18 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ..

ಒಟ್ನಲ್ಲಿ ಪ್ರಯಾಣಿಕರ ಸುರಕ್ಷತೆಯನ್ನ ಕಾಪಾಡುವಲ್ಲಿ ಅತ್ಯನ್ನತ ಗುಣಮಟ್ಟವನ್ನು ಹೊಂದಿದೆ ಎಂದು ಹೇಳಲಾಗ್ತಿದ್ದ ವಿಮಾನವೇ ಘನಘೋರ ದುರಂತ ಕಂಡಿದೆ.. ಸೇಫ್ಟಿ ವಿಚಾರದಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿದ್ದ Boeing 787.. 265 ಜನರ ಜೀವ ತೆಗೆದಿರೋದು ಎಲ್ಲರನ್ನು ಭಾರೀ ಆತಂಕಕ್ಕೊಳಗಾಗಿಸಿದೆ.. ಈ ದುರಂತದಿಂದ ಇಡೀ ದೇಶವೇ ಶೋಖಸಾಗರದಲ್ಲಿ ಮುಳುಗಿದೆ..

Exit mobile version