Site icon BosstvKannada

ಹೆಲ್ದಿ ಫುಡ್‌ ತಿಂದ್ರೂ ಆರೋಗ್ಯ ಸಮಸ್ಯೆಗಳು ನಿಮಗೆ ಕಾಡ್ತಿದ್ಯಾ.. ಆ ಕಾರಣ ಯಾವ್ದು? ಪರಿಹಾರ ಏನು ಇಲ್ಲಿ ತಿಳಿದುಕೊಳ್ಳಿ!

ಕೆಲವ್ರಿಗೆ ಬೇಳೆ ಕಾಳುಗಳನ್ನ ತಿಂತಿದ್‌ ಹಾಗೆ ಗ್ಯಾಸ್ಟ್ರಿಕ್‌ ಆಗ್ಬಿಡುತ್ತೆ. ಡ್ರೈ ಫ್ರೂಟ್ಸ್‌ ತಿಂದ್ರೆ ಡೈಜೆಸ್ಟೇ ಆಗೋದಿಲ್ಲ. ಇದೇನಿದು ಹೆಲ್ದಿ ಫುಡ್‌ ತಿಂದ್ರೂ ಹೀಗಾಗುತ್ತಲ್ಲ? ಮತ್ತೇನ್‌ ತಿನ್ನೋದು ಅಂತಾ ನಿಮಿಗ್‌ ಅನ್ನಿಸ್ತಿರ್ಬೋದು. ಈ ಆಹಾರಗಳು ಹೆಲ್ದಿಯಾಗಿದ್ರೂ ಕೂಡ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದಿಕ್ಕೆ ಪ್ರಮುಖ ಕಾರಣ ಒಂದಿದೆ. ಆ ಕಾರಣ ಯಾವ್ದು? ಪರಿಹಾರ ಏನು ಅಂತಾ ಒಂದೊಂದಾಗಿ ತಿಳಿದುಕೊಳ್ಳೋಣ.

ಆಹಾರ ಎಷ್ಟೇ ಹೆಲ್ದಿಯಾಗಿದ್ರೂ ಅದನ್ನ ಸೇವಸುವ ರೀತಿ ಬಹಳ ಮುಖ್ಯ. ಅಕ್ಕಿ, ಗೋಧಿ, ಬೇಳೆ ಕಾಳು, ಡ್ರೈ ಫ್ರೂಟ್ಸ್‌ ಇವೆಲ್ಲವೂ ಆರೋಗ್ಯಕ್ಕೆ ಒಳ್ಳೇದೇ ಆದ್ರೆ ಇವೆಲ್ಲದ್ರಲ್ಲೂ ಆಂಟಿ ನ್ಯೂಟ್ರಿಯೆಂಟ್ಸ್‌ ಇರುತ್ತೆ. ಈ ಆಂಟಿ ನ್ಯೂಟ್ರಿಯೆಂಟ್ಸ್‌ ಆಹಾರದಲ್ಲಿರುವಂತಹ ಪೋಷಕಾಂಶಗಳು ನಮ್ಮ ದೇಹವನ್ನ ಹೀರಿಕೊಳ್ಳದಂತೆ ಮಾಡುತ್ತೆ. ಯಾವುದೇ ರೀತಿಯ ಬೇಳೆ ಕಾಳುಗಳು, ದವಸ ಧಾನ್ಯಗಳು ಅಥವಾ ಡ್ರೈ ಫ್ರೂಟ್ಸ್‌ಗಳಲ್ಲಿ ಫೈಟಿಕ್‌ ಆಸಿಡ್‌ ಎಂಬ ಆಂಟಿ ನ್ಯೂಟ್ರಿಯೆಂಟ್‌ ಇರುತ್ತೆ. ಹೀಗಾಗಿ ಇವುಗಳನ್ನ ಸೇವಿಸೋದಕ್ಕೂ ಮುಂಚೆ ನೀವು ನೀರಿನಲ್ಲಿ ನೆನೆಸಿಟ್ರೆ ಅವುಗಳಲ್ಲಿರುವ ಫೈಟಿಕ್‌ ಆಸಿಡ್‌ ನೀರಿನಲ್ಲಿ ಲೀಚ್‌ ಆಗುತ್ತೆ. ಮಿನಿಮಮ್‌ ಫೋರ್‌ ಅವರ್ಸ್‌ ಆದ್ರೂ ನೀರಿನಲ್ಲಿ ನೆನೆಸಿಡ್ಬೇಕಾಗುತ್ತೆ. ಬಳಿಕ ಆ ನೀರನ್ನ ಡಿಸ್‌ಕಾರ್ಡ್‌ ಮಾಡಿ ಫ್ರೆಶ್‌ ವಾಟರ್‌ ಬಳಸಿ.

ಈ ರೀತಿ ಮಾಡೋದ್ರಿಂದ ಡೈಜೆಷನ್‌ಗೆ ಕೂಡ ಹೆಲ್ಪ್‌ ಆಗುತ್ತೆ. ನೆನೆ ಹಾಕೋದ್ರಿಂದ ಈ ಪದಾರ್ಥಗಳು ಸಾಫ್ಟ್‌ ಆಗಿ ಬೇಯುವ ಟೈಮ್‌ ಕೂಡ ಕಡಿಮೆ ಆಗುತ್ತೆ ಹಾಗೆ ಡೈಜೆಷನ್‌ ಸಮಸ್ಯೆಗಳು ಬರೋದಿಲ್ಲ. ಸಪೋಸ್‌ ನಿಮಿಗೆ ಎಲ್ಲಾ ಪದಾರ್ಥಗಳನ್ನ ನೀರಿನಲ್ಲಿ ನೆನೆಸಿಡೋದಿಕ್ಕೆ ಆಗೋದಿಲ್ಲ ಅಂತಾದ್ರೆ ಅಟ್‌ಲೀಸ್ಟ್‌ ತೊಗರಿಬೇಳೆ, ಹೆಸರು ಬೇಳೆ, ಹೆಸರುಕಳು ಈ ರೀತಿಯ ಬೇಳೆಕಾಳುಗಳನ್ನ ನೆನೆಸಿಡಿ. ಯಾಕಂದ್ರೆ ಇವುಗಳಲ್ಲಿ ಒಲಿಗೊಸ್ಯಾಕರೈಡ್‌ ಎಂಬ ಸಕ್ಕರೆ ಅಂಶವಿದೆ. ಇದು ಹೊಟ್ಟೆಯಲ್ಲಿ ಗ್ಯಾಸ್‌ ಉತ್ಪತ್ತಿ ಮಾಡುತ್ತೆ. ಬಟ್‌ ನೀರಿನಲ್ಲಿ ನೆನೆಸೋದ್ರಿಂದ ಆ ಸಕ್ಕರೆ ಅಂಶ ಕೂಡ ನೀರಿನಲ್ಲಿ ಬಿಟ್ಟುಕೊಳ್ಳುತ್ತೆ. ಇದ್ರಿಂದ ಗ್ಯಾಸ್‌, ಹೊಟ್ಟೆಯುಬ್ಬರ ಆಗೋದಿಲ್ಲ.

ಇನ್ನು ಕೆಲ ಸೊಪ್ಪು ತರಕಾರಿಗಳಲ್ಲಿ ಕೂಡ ಆಂಟಿ ನ್ಯೂಟ್ರಿಯೆಂಟ್ಸ್‌ ಇರುತ್ತೆ. ಉದಾಹರಣೆಗೆ ಪಾಲಕ್‌ ಹಾಗೂ ಕೆಲ ಸೊಪ್ಪುಗಳಲ್ಲಿ ಓಕ್ಸಲೇಟ್‌ ಎಂಬ ಅಂಶವಿದೆ. ಇದು ಕಿಡ್ನಿಯ ಮೇಲೂ ಎಫೆಕ್ಟ್‌ ಮಾಡುತ್ತೆ. ಹೀಗಾಗಿ ಪಾಲಕ್‌ಅನ್ನ ಯಾವತ್ತೂ ಹಸಿಯಾಗಿ ಸೇವಿಸ್ಬೇಡಿ. ಅದನ್ನ ಬಿಸಿನೀರಿನಲ್ಲಿ ಒಂದೈದು ನಿಮಿಷ ಬ್ಲಾಂಚ್‌ ಮಾಡಿ ಆಮೇಲೆ ಬಳಸಿ. ಇನ್ನು ತುಂಬಾ ಜನಕ್ಕೆ ಕ್ಯಾರೆಟ್‌, ಬೀಟ್‌ರೂಟ್‌ ರೀತಿಯ ತರಕಾರಿಗಳನ್ನ ಹಸಿಯಾಗಿ ಸೇವಿಸೋ ಅಭ್ಯಾಸವಿದೆ.

ಇವುಗಳಲ್ಲಿ ಕೂಡ ಫೈಟಿಕ್‌ ಆಸಿಡ್‌ ಇರೋದ್ರಿಂದ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್‌ ಆಗೋ ಸಾಧ್ಯತೆ ಜಾಸ್ತಿ. ಹೀಗಾಗಿ ಇವುಗಳನ್ನ ಸ್ವಲ್ಪ ಸ್ಟೀಮ್‌ ಮಾಡಿ ಸೇವಿಸಿ. ಹಾಗೆ ಚಹಾದಲ್ಲಿ ಟ್ಯಾನಿನ್‌ ಎಂಬ ಅಂಶ, ಕಾಫಿಯಲ್ಲಿ ಕೆಫೀನ್‌ ಅಂಶವಿದೆ. ಈ ಅಂಶಗಳು ಬಿಸಿಯಾದ್ರೂ ಕೂಡ ಕಡಿಮ ಆಗೋದಿಲ್ಲ. ಸೋ ನೀವು ಎಷ್ಟೆ ಹೆಲ್ದಿ ಫುಡ್‌ಅನ್ನ ತಿನ್ನಿ ಅದ್ರ ಜೊತೆ ಟೀ ಕಾಫಿ ಕುಡ್‌ದ್ರೆ ವೇಸ್ಟ್‌ ಯಾಕಂದ್ರೆ. ಕಾಫಿ ಟೀಯಲ್ಲಿರುವ ಆಂಟಿನ್ಯೂಟ್ರಿಯೆಂಟ್ಸ್‌ ಬೇರೆ ಆಹಾರದಲ್ಲಿರುವಂತಹ ಪೋಷಕಾಂಶಗಳನ್ನ ಹೀರಿಕೊಳ್ಳೋಕೆ ಬಿಡೋದಿಲ್ಲ. ಇನ್ನು ಕೊನೇದಾಗಿ, ಆಹಾರವನ್ನ ಹುದುಗು ಬರಿಸೋದು ಅಥವಾ ಮೊಳಕೆ ಬರಿಸೋದ್ರಿಂದ ಕೂಡ ಆಂಟಿನ್ಯೂಟ್ರಿಯೆಂಟ್ಸ್‌ ಕಡಿಮೆಯಾಗುತ್ತೆ.

Exit mobile version