Site icon BosstvKannada

ಸ್ಯಾಂಡಲ್‌ವುಡ್‌ನಲ್ಲಿ ಸುನಾಮಿ ಎಬ್ಬಿಸಿದ ʻಸು ಫ್ರಮ್‌ಸೋʼ.. ಬಾಕ್ಸಾಫೀಸ್‌ ಧೂಳೀಪಟ!

ಕನ್ನಡದಲ್ಲಿ ಕಂಟೆಂಟ್‌ಸಿನಿಮಾಗಳನ್ನ ಮಾಡೋದೇ ಇಲ್ಲ.. ಮಲಯಾಳಂ ಸಿನಿಮಾದವರನ್ನು ನೋಡಿ ಕಲೀಬೇಕು ಅಂತಿದ್ದವರು ಗಪ್‌ಚುಪ್‌ಆಗೋ ಕಾಲ ಬಂದಿದೆ.. ಕನ್ನಡದಲ್ಲಿ ಸಿನಿಮಾ ಭರ್ಜರಿ ಹಿಟ್‌ಆಗೋಕೆ ಸ್ಟಾರ್‌ಗಳೇ ಮುಖ್ಯವಲ್ಲ ಅನ್ನೋದು ಸಾಬೀತಾಗಿದೆ.. ಯಾಕಂದ್ರೆ ಇತ್ತೀಚೆಗೆ ತೆರೆಕಂಡಿರುವ ಸು ಫ್ರಮ್‌ಸೋ ಪ್ರೇಕ್ಷಕರಲ್ಲಿ ಹೊಸ ಸೆನ್ಸೇಷನ್‌ಕ್ರಿಯೇಟ್‌ಮಾಡಿದೆ.. ದಿನಗಳೆದಂತೆ ಕಲೆಕ್ಷನ್‌ನಲ್ಲಿ ಭರ್ಜರಿ ಏರಿಕೆ ಕಾಣ್ತಿದೆ.. ಎಲ್ಲಿ ನೋಡಿದ್ರೂ ಪ್ರೇಕ್ಷಕರು ಸು ಫ್ರಮ್‌ಸೋ ನೋಡೋಕೆ ಮುಗಿಬೀಳ್ತಿದ್ದಾರೆ.. ಅಷ್ಟಕ್ಕೂ ಈ ಸಿನಿಮಾ ಇಷ್ಟೊಂದು ಹಿಟ್‌ಆಗಲು ಕಾರಣವೇನು..? ಇದರ ಯಶಸ್ಸು ಯಾವ ಹಂತಕ್ಕೆ ತಲುಪಿದೆ. ಅಂದ್ರೆ ಇಡೀ ಜನ ಕನ್ನಡ ಚಿತ್ರರಂಗದತ್ತ ಹಿಂತಿರುಗಿ ನೋಡುತ್ತಿದೆ.

ಸು ಫ್ರಮ್‌ಸೋ ಅಂದ್ರೆ ಸುಲೋಚನಾ ಫ್ರಮ್‌ಸೋಮೇಶ್ವರ.. ಸದ್ಯ ಕರ್ನಾಟಕದಲ್ಲಿ ಇದರದ್ದೇ ಹವಾ.. ಸುಮಾರು ಎರಡು ಗಂಟೆಗಳ ಕಾಲ ಪ್ರೇಕ್ಷಕರನ್ನ ನಕ್ಕು ನಲಿಸುವ ಈ ಸಿನಿಮಾದ ಕೀರ್ತಿ ದಿನಗಳೆದಂತೆ ಹೆಚ್ಚುತ್ತಲೇ ಇದೆ.. ಕರ್ನಾಟಕದಲ್ಲಿ ಈ ರೀತಿಯ ಕ್ರೇಜ್‌ಕಂಡು ವರ್ಷಗಳೇ ಆಗಿತ್ತು.. ಈ ಹಿಂದೆ ಕಾಂತಾರ ಸಿನಿಮಾ ರಿಲೀಸ್‌ಆದಾಗ ಇದೇ ರೀತಿ ಸಂಚಲನ ಹುಟ್ಟು ಹಾಕಿತ್ತು.. ಅದಾದ ಬಳಿಕ ಸು ಫ್ರಮ್‌ಸೋ ಅದರದ್ದೇ ಹಾದಿ ಹಿಡಿದಿದೆ.. ಸ್ಟಾರ್‌ಗಳ ಪವರ್‌ಇಲ್ಲದ ಈ ಸಿನಿಮಾ ತೆಲುಗಿನ ಪವರ್‌ಸ್ಟಾರ್‌ಪವನ್‌ಕಲ್ಯಾಣ್‌ರ ಹರಿ ಹರ ವೀರಮಲ್ಲು ಸಿನಿಮಾಗೆ ಸೆಡ್ಡು ಹೊಡೆದು ನಿಂತಿದೆ.. ಎಕ್ಕ, ಜೂನಿಯರ್‌ಸಿನಿಮಾಗಳ ಮುಂದೆ ಆರ್ಭಟಿಸಿದೆ.. ಮೊದಲ ದಿನ ತಳದಲ್ಲಿದ್ದ ರೆಸ್ಪಾನ್ಸ್‌ಮೂರನೇ ದಿನಕ್ಕೆ ಮುಗಿಲುಮುಟ್ಟಿದೆ..

ಮೊದಲ ದಿನ 78 ಲಕ್ಷ ಬಾಚಿದ್ದ ಈ ಸಿನಿಮಾಗೆ ಎರಡನೇ ದಿನಕ್ಕೆ 2.17 ಕೋಟಿ ರುಪಾಯಿ ಕಲೆಕ್ಷನ್‌ಆಗಿದೆ. ಅದೇ ಮೂರನೇ ದಿನಕ್ಕೆ ಬರೋಬ್ಬರಿ 3.86 ಕೋಟಿ ರುಪಾಯಿ ಬಾಚಿ ಚಿಂದಿ ಉಡಾಯಿಸಿದೆ.. ಅಲ್ಲಿಗೆ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ 6.81 ಕೋಟಿ ರುಪಾಯಿ ಹಣ ಬಾಚಿ ಚಿಂದಿ ಉಡಾಯಿಸಿದೆ.. ಅಲ್ಪ ಶೋಗಳಿಗೆ ಸೀಮಿತವಾಗಿದ್ದ ಈ ಸಿನಿಮಾ ಭರ್ಜರಿ ಯಶಸ್ಸು ಕಂಡ ಕಾರಣ ಪ್ರೇಕ್ಷಕರು ಶೋಗಳನ್ನು ಹೆಚ್ಚಿಸಲು ಬೇಡಿಕೆ ಇಟ್ಟಿದ್ರು. ಹೀಗಾಗಿ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಶೋಗಳನ್ನು ಪ್ರದರ್ಶನ ಮಾಡಲಾಗ್ತಿದೆ.. ಹಾಸ್ಯಭರಿತ ಸಂಭಾಷಣೆ, ಭಾವನಾತ್ಮಕ ಸ್ಪರ್ಶ ಉಳ್ಳ ಕ್ಲೈಮ್ಯಾಕ್ಸ್‌, ಪಾತ್ರಗಳ ಹಾವಭಾವ, ಉತ್ತಮವಾದ ಕಥಾಹಂದರ ಹೊಂದಿರುವುದೇ ಈ ಸಿನಿಮಾ ಬಿಗ್‌ಸಕ್ಸಸ್‌ ಕಾಣಲು ಕಾರಣ ಅಂತ ಹೇಳಲಾಗ್ತಿದೆ.. ಅಷ್ಟೇ ಅಲ್ದೇ ಹಿಂದಿ, ಮಲಯಾಳಂಗೂ ಈ ಸಿನಿಮಾ ಡಬ್‌ಆಗ್ತಿದೆ..

ನಟ ರಾಜ್‌.ಬಿ ಶೆಟ್ಟಿ ನಿರ್ಮಾಣದ ಈ ಸಿನಿಮಾವನ್ನು ಜೆ.ಪಿ.ತುಮಿನಾಡು ನಿರ್ದೇಶಿಸಿ ನಟಿಸಿದ್ದಾರೆ.. ಸದ್ಯ ಟಿಕೆಟ್‌ಸಿಗದೇ ಪ್ರೇಕ್ಷಕರು ಒದ್ದಾಡುವಷ್ಟು ಡಿಮ್ಯಾಂಡ್‌ಈ ಸಿನಿಮಾ ಕ್ರಿಯೇಟ್‌ಮಾಡಿಕೊಂಡಿದೆ.. ಹೀಗಾಗಿ ಈ ಸಿನಿಮಾ ಇನ್ನೆಷ್ಟು ದಾಖಲೆಗಳನ್ನು ಪುಡಿ ಮಾಡುತ್ತೆ.. ಇದರ ಹವಾ ಯಾವ ಹಂತಕ್ಕೆ ತಲುಪುತ್ತೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ

Exit mobile version