BosstvKannada

ಸಿಎಂ, ಡಿಸಿಎಂ ದೆಹಲಿಗೆ ಹೋಗಿರೋ ಉದ್ದೇಶ ನನಗೆ ತಿಳಿದಿಲ್ಲ : ಗೃಹ ಸಚಿವ ಪರಮೇಶ್ವರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಗೆ ಭೇಟಿ ಉದ್ದೇಶ ನನಗೆ ತಿಳಿದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ದೆಹಲಿಗೆ ಭೇಟಿ ನೀಡಿದ್ದು, ಈ ಭೇಟಿ ಉದ್ದೇಶ ನನಗೆ ತಿಳಿದಿಲ್ಲ. ಬೆಂಗಳೂರು ಕಾಲ್ತುಳಿತ ಘಟನೆ ಬಗ್ಗೆ ಹೈಕಮಾಂಡ್’ಗೆ ಮಾಹಿತಿ ನೀಡಲು ಹೋಗಿರಬಹುದು. ಪಕ್ಷದ ಹೈಕಮಾಂಡ್ ನನಗೆ ಕರೆ ಮಾಡಿಲ್ಲ. ಅವರಿಂದ ಕರೆ ಬಂದಿದ್ದರೆ ನಾನೂ ಕೂಡ ಹೋಗುತ್ತಿದ್ದ ಎಂದು ಹೇಳಿದರು.

ಕಾಲ್ತುಳಿತ ದುರಂತ

ಬೆಂಗಳೂರು ಕಾಲ್ತುಳಿತ ದುರಂತ ಕುರಿತು ನಿನ್ನೆ ಸಭೆ ನಡೆಸಲಾಗಿತ್ತು. ನ್ಯಾಯಾಲಯಕ್ಕೆ ಸರ್ಕಾರ ವರದಿ ಸಲ್ಲಿಸಬೇಕಿದ್ದು, ಸರ್ಕಾರದ ಪರವಾಗಿ ಯಾವೆಲ್ಲಾ ಮಾಹಿತಿ ನೀಡಬೇಕೆಂಬುದನ್ನು ಚರ್ಚಿಸಲಾಗಿದೆ ಎಂದು ತಿಳಿಸಿದರು. ವಾಸ್ತವ ಏನಿದೆ ಅಂತ ಕೋರ್ಟ್ಗೆ ವರದಿ ಕೊಡ್ತೇವೆ ಎಂದರು.

ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ ವಿಚಾರ

ಎನ್ಐಎಗೆ ದತ್ತವಾದ ಅಧಿಕಾರ ಇದೆ. ಆ ಆಧಾರದಲ್ಲಿ ಅವರು ಪ್ರಕರಣದ ತನಿಖೆಗೆ ಕೇಳಿದ್ದಾರೆ. ನಾವು ತನಿಖೆಗೆ ಪ್ರಕರಣವನ್ನು ಕೊಡಲೇ ಬೇಕಾಗುತ್ತದೆ ಎಂದು ಹೇಳಿದರು.

Exit mobile version