ಗುಜರಾತ್ನಲ್ಲಿ ನಡೆದ ವಿಮಾನ ದುರಂತ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.. ಗುಜರಾತ್ನ ಮಾಜಿ ಸಿಎಂ ವಿಜಯ್ ರೂಪಾನಿ ಇದೇ ಫ್ಲೈಟ್ನಲ್ಲಿ ಲಂಡನ್ಗೆ ಹೊರಟಿದ್ರು.. ಅಹಮದಾಬಾದ್ ಟು ಲಂಡನ್ ಏರ್ ಇಂಡಿಯಾದ AI-171 ಫ್ಲೈಟ್ನಲ್ಲಿ ಪ್ರಯಾಣ ಬೆಳೆಸಿದ್ರು. ತಾನೊಂದು ಬಗೆದರೆ ದೈವವೊಂದು ಬಗೆದಂತೆ ಅನ್ನೋ ಮಾತಿನಂತೆ, ಮಗಳನ್ನು ಭೇಟಿ ಮಾಡಲು ಪ್ರಯಾಣ ಬೆಳೆಸಿದ್ರು. ಆದ್ರೆ ಜನನಿಬಿಡ ಮೇಘನಿ ಪ್ರದೇಶದಲ್ಲಿಏರ್ ಇಂಡಿಯಾ ವಿಮಾನ ಪತನಗೊಂಡಿದೆ.
ಮಾಜಿ ಸಿಎಂ ವಿಜಯ್ ರೂಪಾನಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ಅಧಿಕಾರಿಗಳು ಧೃಡಪಡಿಸಿದ್ದಾರೆ. ಮಗಳ ನೋಡಲು ಹೊರಟಿದ್ದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಈಗ ಸಾವನ್ನಪ್ಪಿದ್ದು, ಅವರ ಮೃತದೇಹ ನೋಡಲು ಈಗ ಮಗಳೇ ಲಂಡನ್ನಿಂದ ಬರಬೇಕಾದ ಸ್ಥಿತಿ ಬಂದೊದಗಿದೆ.

ವಿಮಾನದ ಸೀಟ್ ನಂಬರ್ 12ರಲ್ಲಿ ಕುಳಿತಿದ್ರು.. ಆದ್ರೆ, ಇಷ್ಟರಲ್ಲೇ ವಿಮಾನ ಪತನಗೊಂಡಿದೆ. ಇನ್ನು, ದುರಂತರದಲ್ಲಿ 169ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಅಂತಾ ಹೇಳಲಾಗ್ತಿದೆ… ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ..
ಈ ದುರಂತಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ..