Site icon BosstvKannada

ಜಾಮೀನು ಸಿಕ್ಕ ಬಳಿಕ ನಟ ಮಡೆನೂರು ಮನು ಹೇಳಿದ್ದೇನು..?

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ಮಡೆನೂರು ಮನು ಅವರಿಗೆ ಇಂದು ಬಿಡುಗಡೆಯ ಭಾಗ್ಯ ಸಿಕ್ಕಿದೆ. ನಟಿಗೆ ಕಿರುಕುಳ, ಲೈಂಗಿಕ ದೌರ್ಜನ್ಯ, ವಂಚನೆ ಸೇರಿದಂತೆ ಗಂಭೀರ ಆರೋಪಗಳು ಮಡೆನೂರು ಮನು ಅವರ ಮೇಲೆ ಕೇಳಿ ಬಂದಿತ್ತು.

ಜಾಮೀನು ಸಿಕ್ಕ ಬಳಿಕ ನಟ ಮಡೆನೂರು ಮನು ಅವರು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಹೊರ ಬರುತ್ತಿದ್ದಂತೆ ಮಡೆನೂರು ಮನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಅವರ ಬಗ್ಗೆ ಮಾತನಾಡಿರೋ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ. ನಾನು ಮೊದಲು ಶಿವಣ್ಣ ಅವರ ಭೇಟಿ ಮಾಡಿ ಸತ್ಯವನ್ನು ಅವರಿಗೆ ವಿವರಿಸಿ ಕ್ಷಮೆ ಕೇಳುತ್ತೇನೆ.

ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದ್ದಾರೆ. 5-6 ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು. ನನ್ನ ವಿರುದ್ಧ ಪ್ರತಿ ಹಂತದಲ್ಲಿಯೂ ಷಡ್ಯಂತ್ರ ನಡೆದಿದೆ.

ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್‌ಗೂ ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದ್ರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದ್ರು. ಅದಕ್ಕೂ ಮೊದಲು ರೇಪ್ ಕೇಸ್‌ನಲ್ಲಿ ತಪ್ಪಿಸಿಕೊಂಡರು. 50 ಸಾವಿರ ರೂಪಾಯಿ ಖರ್ಚು ಮಾಡಿ ಆಡಿಯೋ ರೆಡಿ ಮಾಡಿದ್ದೇವೆ.

ನಿನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದ್ರು. ಸಾಮಾನ್ಯ ಹಳ್ಳಿ ಹೈದ 3 ವರ್ಷ ಹಗಲಿರುಳು ಕಷ್ಟಪಟ್ಟು ಸಿನಿಮಾ ಮುಗಿಸಿದ್ದೇವೆ. ಈಗ ಎಲ್ಲವನ್ನೂ ಮುಗಿಸಿದ್ರು. ಆದರೆ ಕಲೆ, ತಾಯಿ ಶಾರದೆ ಕೈ ಬಿಡುವುದಿಲ್ಲ. ನಾನು ಬಡವ ಆಡಿಯೋ ನನ್ನದಲ್ಲ ಎಂದು ಚಾಲೆಂಜ್‌ ಮಾಡಲು ಆಗಲ್ಲ. ಉಳಿದಂತೆ ಅತ್ಯಾ*ಚಾರ ಕೇಸ್‌ನಲ್ಲಿ ಕಾನೂನು ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮೇಲೆ ನನಗೆ ನಂಬಿಕೆ ಇದೆ ಎಂದು ಮಡೆನೂರು ಮನು ತಿಳಿಸಿದ್ದಾರೆ.

Exit mobile version