Site icon BosstvKannada

ಏರ್‌ ಇಂಡಿಯಾ ವಿಮಾನ ದುರಂತ : ಪವಾಡ ಸದೃಶದಂತೆ ಏಕೈಕ ವ್ಯಕ್ತಿ ಪಾರು!

ಏರ್‌ ಇಂಡಿಯಾ ವಿಮಾನ ದುರಂತದಲ್ಲಿ 40 ವರ್ಷದ ವಿಶ್ವಾಸ್‌ ಕುಮಾರ್‌ ರಮೇಶ್‌ ಅವರು ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.

ಗುಜರಾತ್ನ ಅಹ್ಮದಾಬಾದ್ ನಲ್ಲಿ ಇಂದು ಸಂಭವಿಸಿರುವ ಏರ್ ಇಂಡಿಯಾ ವಿಮಾನ ಪತನ ದುರ್ಘಟನೆಯಲ್ಲಿ ಗುಜರಾತ್ ನ ಮಾಜಿ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು ಸಾವನ್ನಪ್ಪಿರುವ ವದಂತಿಗಳು ಹರಿದಾಡುತ್ತಿವೆ. ಈ ವಿಮಾನ ಲಂಡನ್ ಗೆ ಪ್ರಯಾಣ ಬೆಳೆಸಿತ್ತು. ಟೇಕಾಫ್ ಆಗೆ ಕೆಲವೇ ನಿಮಿಷಗಳಲ್ಲಿ ಅದು ಪತನವಾಗಿದೆ. ಇದರಲ್ಲಿ ಪವಾಡವೆಂಬಂತೆ ಓರ್ವ ಪ್ರಯಾಣಿಕ ಬದುಕುಳಿದಿದ್ದಾನೆ.

ಅಹ್ಮದಾಬಾದ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.17ಕ್ಕೆ ಟೇಕಾಫ್ ಆದ ನಂತರ ಹತ್ತಿರದ ಮೇಘಾನಿ ನಗರದಲ್ಲಿ ಅದು ಪತನವಾಗಿದೆ. ಪತನವಾಗುವಾಗ ಮರವೊಂದಕ್ಕೆ ಹಾಗೂ ಅದರ ಪಕ್ಕದಲ್ಲಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದು, ಎಲ್ಲರೂ ಸಾವನ್ನಪ್ಪಿರುವ ಅನುಮಾನವಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ, ವಿಮಾನದಲ್ಲಿ 230 ಪ್ರಯಾಣಿಕರು, ಪೈಲಟ್ – ಕೋ ಪೈಲಟ್ ಹಾಗು ವಿಮಾನ ಸಿಬ್ಬಂದಿ ಸೇರಿ ಒಟ್ಟು 242 ಜನರಿದ್ದರು. ಇವರಲ್ಲಿ 52 ಮಂದಿ ಬ್ರಿಟನ್ ನಾಗರಿಕರು, 7 ಮಂದಿ ಪೋರ್ಚಗಲ್ ನಾಗರಿಕರು, ಒಬ್ಬ ಕೆನಡಾದವರು ಇದ್ದರು. 169 ಮಂದಿ ಭಾರತೀಯರಿದ್ದರು. ಇದರಲ್ಲಿ ಪವಾಡವೆಂಬಂತೆ ಓರ್ವ ಪ್ರಯಾಣಿಕ ಬದುಕುಳಿದಿದ್ದಾನೆ. ರಮೇಶ್‌ ವಿಶ್ವಾಸ್‌ ಕುಮಾರ್‌ ಎಂಬ ಪ್ರಯಾಣಿಕ ೨೦ ವರ್ಷದಿಂದ ಲಂಡನ್ನಲ್ಲಿ ವಾಸವಿದ್ದ. ಸೀಟ್‌ ನಂಬರ್‌೧೧ ಎ ಎಕನಾಮಿಕಲ್‌ ಕ್ಲಾಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ. ಸಧ್ಯ ಎದೆ, ಕಣ್ಣು ಇತರೆ ಭಾಗಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದುರಂತ ನಡೆದ ನಂತರ ನನ್ನ ಸುತ್ತಲೂ ಸತ್ತ ಹೆಣಗಳೇ ಇದ್ದವೂ, ಕ್ಷಣಮಾತ್ರದಲ್ಲೇ ದುರಂತ ನಡೆಯಿತು. ನಾನು ಎದ್ದು ಓಡಿ ಹೋದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಿಮಾನ ಪತನದ ನಂತರ ತಕ್ಷಣವೇ ಅಗ್ನಿಶಾಮಕ, ಪೊಲೀಸ್ ಮತ್ತು ವೈದ್ಯಕೀಯ ತುರ್ತು ಸೇವೆಗಳ ತಂಡಗಳು ಸ್ಥಳಕ್ಕೆ ತಲುಪಿದವು. ಹೊಗೆ ಮತ್ತು ಬೆಂಕಿ ನಿಯಂತ್ರಣಕ್ಕೆ ಅಗ್ನಿಶಾಮಕ ಸಿಬ್ಬಂದಿ ತೀವ್ರ ಪ್ರಯತ್ನಿಸಿದರು. ರಕ್ಷಣಾ ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ಸಹ ಸಹಕಾರ ನೀಡಿ, ವಿಮಾನ ಅವಶೇಷಗಳಿಂದ ಸಂತ್ರಸ್ತರನ್ನು ಸುರಕ್ಷಿತವಾಗಿ ಹೊರತೆಗೆಯಲು ಶ್ರಮಿಸಿದರು.

Exit mobile version