ಉಪ್ಪಿಗಿಂತ ರುಚಿ ಬೇರೆ ಇಲ್ಲ ಅನ್ನೋ ಗಾದೆ ಮಾತೇ ಇದೆ. ಉಪ್ಪಿಲ್ಲದೇ ಯಾವ ಅಡುಗೆಯೂ ರುಚಿಕರ ಅನ್ಸೋದಿಲ್ಲ. ಸಾಮಾನ್ಯವಾಗಿ ನಾವು ಅಡುಗೆ ಮಾಡೋವಾಗ ಕಲ್ಲುಪ್ಪು ಅಥವಾ ಉಪ್ಪಿನ ಪುಡಿಯನ್ನ ಬಳಸ್ತೀವಿ. ಅಡುಗೆಗೆ ನಾವು ಬಳಸುವ ಉಪ್ಪನ್ನ ಸಮುದ್ರದ ನೀರಿನಿಂದ ಪಡೆಯಲಾಗುತ್ತೆ.
ಇದೇ ಥರ ಹಿಮಾಲಯದ ಬಂಡೆಗಳ ಲವಣದಿಂದ ಪಿಂಕ್ ಸಾಲ್ಟ್ಅನ್ನ ತಯಾರಿಸಲಾಗುತ್ತೆ. ಈ ಪಿಂಕ್ ಸಾಲ್ಟ್ ತೂಕ ಇಳಿಕೆಗೆ ಸಹಕಾರಿಯಾಗಿದೆ. ಇದ್ರಲ್ಲಿರುವಂತಹ ಕ್ಯಾಲ್ಸಿಯಂ, ಕಬ್ಬಿಣದಂಶ, ಪೊಟಾಷ್ಯಿಯಂ ಈ ಪೋಷಕಾಂಶಗಳು ಹಸಿವು ನಿಯಂತ್ರಿಸಲು ಸಹಕಾರಿಯಾಗಿದೆ. ಅಲ್ಲದೇ ಮೆಟಬಾಲಿಸಂ ಇಂಪ್ರೂವ್ ಮಾಡುತ್ತೆ.
ನೀವಿದನ್ನ ಹಲವು ವಿಧಾನಗಳಲ್ಲಿ ಬಳಸಬಹುದು. ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ 1/2 ಚಮಚ ಪಿಂಕ್ ಸಾಲ್ಟ್ 1 ಚಮಚ ನಿಂಬೆರಸ ಹಾಕಿ ಕುಡಿಬಹುದು ಅಥವಾ ಬ್ಲ್ಯಾಕ್ ಟೀ, ಬ್ಲ್ಯಾಕ್ ಕಾಫಿಗೆ ಚಿಟಿಕೆಯಷ್ಟು ಪಿಂಕ್ ಸಾಲ್ಟ್ ಮಿಕ್ಸ್ ಮಾಡಿ ಕುಡಿಬಹುದು. ಆದ್ರೆ, ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲ್ತಿರುವವರು ಪಿಂಕ್ ಸಾಲ್ಟ್ಅನ್ನ ಅವಾಯ್ಡ್ ಮಾಡ್ಬೇಕು.
ಯಾಕಂದ್ರೆ ನಾರ್ಮಲ್ ಸಾಲ್ಟ್ನಂತೆ ಪಿಂಕ್ ಸಾಲ್ಟ್ ಕೂಡ ರಕ್ತದೊತ್ತಡವನ್ನು ಹೆಚ್ಚು ಮಾಡುತ್ತೆ. ಹಾಗಾಗಿ ಹೈಪರ್ ಟೆನ್ಷನ್ ಸಮಸ್ಯೆ ಇರುವವರು ಇದನ್ನು ಬಳಸಲೇಬೇಡಿ. ಕಿಡ್ನಿ ಸಮಸ್ಯೆ ಇರುವವರಿಗೂ ಪಿಂಕ್ ಸಾಲ್ಟ್ ಸೇವನೆ ಒಳ್ಳೆಯದಲ್ಲ. ಹೀಗಾಗಿ ಈ ಸಮಸ್ಯೆಗಳಿರುವವರು ಗಮನ ಹರಿಸಿ..

