Site icon BosstvKannada

ಇನ್ಮುಂದೆ AC ಟೆಂಪರೇಚರ್‌ಗೂ ಇರಲಿದೆ ಲಿಮಿಟ್!

ಇತ್ತೀಚೆಗೆ AC ಎಲ್ಲಾ ಕಡೆ ಇದೆ. ಮನೆ, ಆಫೀಸ್‌, ಕಚೇರಿ ಅಷ್ಟೇ ಯಾಕೆ ಸ್ಕೂಲು ಕಾಲೇಜುಗಳಲ್ಲೂ ಎಸಿ ಇದ್ದೇ ಇರುತ್ತೆ. ಮಧ್ಯಾಹ್ನದ ಟೈಮಲ್ಲಂತೂ ಫಟ್ ಅಂತ ಎಸಿ ಆನ್ ಮಾಡಿ, ತಣ್ಣಗೆ 16 ಡಿಗ್ರಿಗೆ ಟೆಂಪರೇಚರ್‌ ಇಟ್ಟುಬಿಡೋದೆ ನಮಗೆ ಅಭ್ಯಾಸ. ಆದ್ರೆ, ಇನ್ಮುಂದೆ ಈ ಅಭ್ಯಾಸಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಇದೆ.

ಯಾಕಂದ್ರೆ ಶೀಘ್ರದಲ್ಲಿಯೇ ಕೇಂದ್ರ ಸರ್ಕಾರ ಬೇಕಾಬಿಟ್ಟಿ ಎಸಿ ತಾಪಮಾನ ಇಡೋದಕ್ಕೆ ಲಿಮಿಟ್‌ ಹಾಕಲಿದೆ. ಹವಾಮಾನ ಬದಲಾವಣೆ ಮತ್ತು ಕೂಲಿಂಗ್ ವ್ಯವಸ್ಥೆಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ಕಾರುಗಳು ಸೇರಿದಂತೆ ಎಲ್ಲಾ ವಲಯಗಳಲ್ಲಿ ಎಸಿಗಳ ಕನಿಷ್ಠ ತಾಪಮಾನವನ್ನು 20°C ಮತ್ತು ಗರಿಷ್ಠ 28°C ಗೆ ನಿಗದಿಪಡಿಸಲು ನಾವು ನಿರ್ಧರಿಸಿದ್ದೇವೆ ಎಂದು ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ.

ಹೊಸ ನಿಯಮಗಳು ಹವಾನಿಯಂತ್ರಣ ಬಳಕೆಯಲ್ಲಿ ಏಕರೂಪತೆಯನ್ನು ತರುವ ಗುರಿಯನ್ನು ಹೊಂದಿವೆ ಮತ್ತು ಅತ್ಯಂತ ಕಡಿಮೆ ತಂಪಾಗಿಸುವ ಸೆಟ್ಟಿಂಗ್‌ಗಳಿಂದಾಗಿ ಅತಿಯಾದ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಸಚಿವರು ಹೇಳಿದ್ದಾರೆ. ಪ್ರಸ್ತುತ ಎಸಿ ಟೆಂಪರೇಚರ್‌ ಕನಿಷ್ಠ 16 ಅಥವಾ 18 ಡಿಗ್ರೀ ಸೆಲ್ಷಿಯಸ್‌ ಹಾಗೂ ಗರಿಷ್ಠ 30 ಡಿಗ್ರೀ ಸೆಲ್ಷಿಯಸ್‌ ಆಗಿದೆ.

ಈಗಿರುವ ಎಸಿಗಳು ಆನ್‌ ಅಗ್ತಿದ್ದಂತೆ ಟೆಂಪರೇಚರ್‌ 16 ಅಥವಾ 18 ಡಿಗ್ರೀ ಸೆಲ್ಷಿಯಸ್‌ಗೆ ಇಳಿಕೆಯಾಗ್ತಿತ್ತು. ಈ ಟೆಂಪರೇಚರ್‌ಅನ್ನ 22 ಡಿಗ್ರಿಗೆ ಅಥವಾ ಅದಕ್ಕಿಂತ ಜಾಸ್ತಿ ಸೆಲ್ಷಿಯಸ್‌ಗೆ ಹೆಚ್ಚಳ ಮಾಡಿದ್ರೆ ವಿದ್ಯುತ್‌ ಬಳಕೆ ಹೆಚ್ಚಾಗ್ತಾ ಇತ್ತು. ಇದನ್ನ ತಪ್ಪಿಸೋದಕ್ಕಾಗಿ ಈ ಕ್ರಮವನ್ನ ಕೈಗೊಳ್ಳಲಾಗಿದೆ.

Exit mobile version