Site icon BosstvKannada

ಅಯ್ಯಯ್ಯೋ.. ಸಲ್ಲುಗೆ ಮೈ ತುಂಬಾ ಕಾಯಿಲೆಗಳು!

ಬಾಲಿವುಡ್‌ ಭಾಯಿಜಾನ್‌ ಸಲ್ಮಾನ್‌ ಖಾನ್‌ ಇನ್ನೂ ಯಾಕೆ ಮದ್ವೆ ಆಗಿಲ್ಲ ಅನ್ನೋದು ಫ್ಯಾನ್ಸ್‌ಇಂದ ಹಿಡಿದು ಬಿಟೌನ್‌ ಮಂದಿಯನ್ನೂ ಕಾಡ್ತಿರೋವಂತಹ ಮಿಲಿಯನ್‌ ಡಾಲರ್‌ ಪ್ರಶ್ನೆ. ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಾಲಿವುಡ್‌ನ ಪಾಪ್ಯುಲರ್‌ ಶೋಗಳಲ್ಲಿ ದಿ ಕಪಿಲ್ ಶರ್ಮಾ ಶೋ ಕೂಡ ಒಂದಾಗಿದೆ.

ಸಾಕಷ್ಟು ಸೆಲೆಬ್ರಿಟಿಗಳು ತಮ್ಮ ಸಿನಿಮಾ ಪ್ರಚಾರದ ಸಲುವಾಗಿ ಈ ಶೋಗೆ ಆಗಾಗ ಆಗಮಿಸ್ತಾ ಇರ್ತಾರೆ. ಇದೇ ರೀತಿ ಇತೀಚೆಗೆ ಶೋನಲ್ಲಿ ಭಾಗವಹಿಸಿದ್ದ ಸಲ್ಲುಮಿಯಾ ತಾವು ಯಾಕಿನ್ನೂ ಮದ್ವೆ ಆಗಿಲ್ಲ ಅನ್ನೋ ಯಕ್ಷಪ್ರಶ್ನೆಗೆ ಉತ್ತರಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದ್ರೂ ಕೂಡ ಸಲ್ಮಾನ್‌ ಖಾನ್‌ ಆರೋಗ್ಯ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಸಲ್ಮಾನ್ ಖಾನ್ ಅವರಿಗೆ ಮೆದುಳು ಸಂಬಂಧಿ ಕಾಯಿಲೆ ಇದ್ದು, ಇದರಿಂದ ಪಾರ್ಶವಾಯು ಉಂಟಾಗುವ ಭಯವಿದೆ.

ಈ ಬಗ್ಗೆ ಮುಕ್ತವಾಗಿ ಮಾತನಾಡಿದ ಅವರು, ನನಗೆ ವಿವಿಧ ರೋಗಗಳು ಇವೆ. ನರಶೂಲೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತ, ಎವಿಎಂ ಸಮಸ್ಯೆ ಇದ್ದರೂ ನಾನು ಈಗಲೂ ಕೆಲಸ ಮಾಡುತ್ತಿದ್ದೇನೆ. ಇದರ ಜೊತೆಗೆ ನಾನು ನಟನೆ ಮಾಡುವಾಗ ಆಗಾಗ ಫ್ರ್ಯಾಕ್ಚರ್ ಆಗೋದು, ಪೆಟ್ಟಾಗೋದು ಸಾಮಾನ್ಯ. ಇವೆಲ್ಲಾ ಸಮಸ್ಯೆಗಳಿಟ್ಕೊಂಡು ಮದುವೆ ಆಗೋದು ಕಷ್ಟ. ಒಂದ್ವೇಳೆ ಮದುವೆ ಆಗಿ ಆಮೇಲೆ ಪತ್ನಿ ಏನಾದ್ರೂ ಡಿವೋರ್ಸ್‌ ಕೊಟ್ಳು ಅಂದ್ರೆ ಅರ್ಧ ಆಸ್ತಿಯನ್ನ ತಗೊಂಡ್‌ ಹೋಗಿಬಿಡ್ಬಹುದು.

ನಾನು ಯಂಗ್‌ ಆಗಿದ್ದಿದ್ರೆ ಹೇಗೋ ಮತ್ತೆ ಎಲ್ಲವನ್ನೂ ಗಳಿಸ್ತಾ ಇದ್ದೆ. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ ಎಂದು ಅವರು ಹೇಳಿದ್ದಾರೆ. ಇದಲ್ಲದೇ ಸಲ್ಲುಗೆ ಅಧಮನಿಯ ರಕ್ತನಾಳದ ವಿರೂಪ ಕೂಡ ಇದೆ ಎಂದಿದ್ದಾರೆ. ಇದು ಅಪರೂಪದ ಕಾಯಿಲೆ ಆಗಿದೆ. ಈ ಸಮಸ್ಯೆ ರಕ್ತದ ಹರಿವಿಗೆ ಅಡ್ಡಿಯಾಗುತ್ತದೆ. ಇದನ್ನು ಸರಿಯಾಗಿ ನಿರ್ವಹಿಸದಿದ್ದರೆ ಗಂಭೀರ ನರದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

Exit mobile version