Site icon BosstvKannada

ಅಯ್ಯಯ್ಯೋ ಮತ್ತಷ್ಟಾ..? ಮೃತರ ಸಂಖ್ಯೆಯಲ್ಲಿ ಭಾರಿ ಏರಿಕೆ!

ಅಹಮದಾಬಾದ್‌ನಲ್ಲಿ ನಡೆದಿರುವ ಘನಘೋರ ವಿಮಾನ ದುರಂತದ ತೀವ್ರತೆ ಮತ್ತಷ್ಟು ಹೆಚ್ಚಿದೆ.. ಮೃತಪಟ್ಟವರ ಒಬ್ಬಬ್ಬರ ಕಥೆಯೂ ಹೇಳತೀರದ್ದಾಗಿದೆ.. ಇಲ್ಲೀವರೆಗೆ ಸಾವನ್ನಪ್ಪಿದ್ದರ ಸಂಖ್ಯೆ 265 ಅಂತ ಹೇಳಲಾಗ್ತಿತ್ತು.. ಆದ್ರೆ ನಿರಂತರ ಪರಿಶೀಲನೆ ಹಾಗೂ ಶೋಧ ಕಾರ್ಯಾಚರಣೆಯಿಂದ ಮತ್ತಷ್ಟು ಮೃತದೇಹಗಳನ್ನ ಹೊರತೆರೆಯಲಾಗಿದ್ದು, ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ..

ಅದ್ರಲ್ಲಿ 241 ಪ್ರಯಾಣಿಕರಾಗಿದ್ರೆ, 33 ಜನ ಸ್ಥಳೀಯರು ಅಸುನೀಗಿದ್ದಾರೆ.. ಇಲ್ಲೀವರೆಗೆ ವೈದ್ಯಕೀಯ ಹಾಸ್ಟೆಲ್‌ ವಿದ್ಯಾರ್ಥಿಗಳ ಸಾವಿನ ಬಗ್ಗೆ ಮಾತ್ರ ಮಾಹಿತಿ ಹೊರಬಿದ್ದಿತ್ತು.. ಆದ್ರೆ ಆ ಲಿಸ್ಟ್‌ಗೆ ಸ್ಥಳೀಯ ನಿವಾಸಿಗಳು ಕೂಡ ಸೇರಿಕೊಂಡಿದ್ದಾರೆ.. ವಿಮಾನ ಪತನವಾದ ಸಮಯದಲ್ಲಿ ಆ ಸ್ಥಳದಲ್ಲಿದ್ದ ನಿವಾಸಿಗಳು ಕೂಡ ಮರಣ ಹೊಂದಿದ್ದಾರೆ.. ಬಿಜೆ ಮೆಡಿಕಲ್‌ ಕಾಲೇಜಿನ 10 ವೈದ್ಯರು ಕೂಡ ದುರಂತ ಅಂತ್ಯ ಕಂಡಿದ್ದಾರೆ.. ನಿನ್ನೆ ಅವಶೇಷಗಳಡಿ ಸಿಲುಕಿದ್ದ 29 ಮೃತದೇಹಗಳನ್ನು ಹೊರತೆರೆಯಲಾಗಿದೆ..

Exit mobile version