Site icon BosstvKannada

ಸ್ನಾನಕ್ಕೆ ಸೋಪ್‌ ಯೂಸ್‌ ಮಾಡ್ತಿರಾ.. ಅದನ್ನ ಬಿಡಿ ಇದರಲ್ಲಿ ಸ್ನಾನ ಮಾಡಿ..!

ಕಡಲೆ ಹಿಟ್ಟನ್ನ ಕೇವಲ ಅಡುಗೆಗಳಲ್ಲಿ, ಫೇಸ್‌ಪ್ಯಾಕ್‌ಗಳಲ್ಲಿ ಮಾತ್ರವಲ್ಲ ಸಾಬೂನಿನ ರಿಪ್ಲೇಸ್‌ಮೆಂಟ್‌ ಆಗಿಯೂ ಕೂಡ ಬಳಸ್ಬಹುದು. ಚಿಕ್ಕ ಮಕ್ಳಿಗೆ ಸಾಮಾನ್ಯವಾಗಿ ಕಡಲೆ ಹಿಟ್ಟು, ಹೆಸರು ಕಾಳು ಇವೆಲ್ಲದರ ಮಿಶ್ರಣವನ್ನ ಪುಡಿ ಮಾಡಿ ಆ ಪುಡಿಯಿಂದ ಸ್ನಾನ ಮಾಡಿಸಲಾಗುತ್ತೆ. ಇದು ದಶಕಗಳಿಂದ್ಲೂ ಬಂದಿರುವಂತಹ ಪದ್ಧತಿಯಾಗಿದೆ.

ಇದನ್ನ ಮಕ್ಕಳು ಮಾತ್ರವಲ್ಲದೇ ದೊಡ್ಡವರು ಕೂಡ ಬಳಸ್ಬಹದು. ಸೋಪಿನ ರೀತಿ ನೊರೆ ಬರೋದಿಲ್ಲ ಅನ್ನೋದು ಬಿಟ್ರೆ ಸೋಪಿಗಿಂತ ದುಪ್ಪಟ್ಟು ಪ್ರಯೋಜನಕಾರಿ ಈ ಕಡ್ಲೆಹಿಟ್ಟು. ಡ್ರೈ ಸ್ಕಿನ್‌, ಆಯ್ಲಿ ಸ್ಕಿನ್‌, ಕಾಂಬಿನೇಷನ್‌ ಸ್ಕಿನ್‌ ಈ ರೀತಿ ಯಾವ ಸ್ಕಿನ್‌ ನಿಮ್ದಾಗಿದ್ರೂ ಕೂಡ ಕಡ್ಲೆಹಿಟ್ಟನ್ನ ಸೋಪಿನ ಬದಲಾಗಿ ಬಳಸ್ಬಹುದು.

ಅದ್ರಲ್ಲೂ ಆಯ್ಲಿ ಸ್ಕಿನ್‌ ಇರೋರಿಗೆ ಕಡ್ಲೆಹಿಟ್ಟು ವರದಾನವಾಗಿದೆ. ಯಾಕಂದ್ರೆ ಕಡಲೆಹಿಟ್ಟು ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನ ಹೀರಿಕೊಳ್ಳುತ್ತೆ. ಅಲ್ಲದೆ ಸ್ಕಿನ್‌ ಅಲರ್ಜಿ ಏನಾದ್ರೂ ಇದ್ರೆ ಅದಕ್ಕೂ ಕೂಡ ಬಹಳ ಒಳ್ಳೇದು. ಇನ್ನು ಇದಿಕ್ಕೆ ಚಿಟಿಕೆ ಅರಿಶಿನ ಮಿಕ್ಸ್‌ ಮಾಡಿ ಕೂಡ ನೀವು ಬಳಸಬಹುದು.

ಇದ್ರಿಂದ ಸ್ಕಿನ್‌ ರ್ಯಾಶಸ್‌ ಚರ್ಮ ಕೆಂಪಾಗೋದು, ಗುಳ್ಳೆಗಳಾಗೋದು ಈ ಥರದ ಸಮಸ್ಯೆಗಳಿದ್ರೆ ಕಡಿಮೆ ಆಗುತ್ತೆ. ಪ್ರತಿನಿತ್ಯ ಈ ರೀತಿ ಕಡ್ಲೆಹಿಟ್ಟಿಗೆ ಸ್ವಲ್ಪ ನೀರು ಮಿಕ್ಸ್‌ ಮಾಡಿ ಸೋಪ್‌ ರೀತಿಯೇ ಬಳಸಿ ಸ್ನಾನ ಮಾಡೋದ್ರಿಂದ ಚರ್ಮದ ಮೇಲಿನ ಡೆಡ್‌ಸ್ಕಿನ್‌ ಹೋಗಿ ಸ್ಕಿನ್‌ ಬಹಳ ಸಾಫ್ಟ್‌ ಆಗುತ್ತೆ.

Exit mobile version