Site icon BosstvKannada

ಸಿದ್ದು ಸಂಪುಟ ಸೇರುವ ಹೊಸಬರು ಯಾರು ಗೊತ್ತಾ? ಸಂಪುಟ ವಿಸ್ತರಣೆಯಾದ್ರೆ ಯಾರಿಗೆ ಕೊಕ್..?‌

ಚಿನ್ನಸ್ವಾಮಿ ಸ್ಟೇಡಿಯಂ ಮುಂದೆ ನಡೆದ ಕಾಲ್ತುಳಿತ ಕೆಂಡ ಇಡೀ ಸರ್ಕಾರವನ್ನೇ ಸುಡುತ್ತಿದೆ.. ಆರ್‌ಸಿಬಿ ಅಭಿಮಾನಿಗಳ ದುರಂತ ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಕುರ್ಚಿಯ ಬುಡವನ್ನೇ ಅಲುಗಾಡಿಸುತ್ತಿದೆ.. ಈ ಪ್ರಕರಣದ ಪರಿಣಾಮ ಸರ್ಕಾರದ ಮೇಲೆ ಎಷ್ಟು ಪರಿಣಾಮ ಬೀರಿದೆ ಅಂದ್ರೆ ಸಿಎಂ, ಡಿಸಿಎಂ ಮೀಡಿಯಾ ಮುಂದೆ ಸಾಕು ಏನು ಉತ್ತರ ಕೊಡಬೇಕು ಅಂತಲೇ ಗೊತ್ತಾಗ್ತಿಲ್ಲ.. ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.. ಈ ಎಲ್ಲಾ ಪರಿಸ್ಥಿತಿ ನಡುವೆ ಈಗ ಕ್ಯಾಬಿನೆಟ್‌ನಲ್ಲಿ ಭಾರಿ ಬದಲಾವಣೆಗೆ ಹೈಕಮಾಂಡ್‌ ಮುಂದಾಗಿದೆ.. ಕೆಲವು ಸಚಿವರಿಗೆ ಕೊಕ್‌ ಕೊಟ್ಟು, ಇನ್ನೊಂದಷ್ಟು ಪ್ರಭಾವಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಭರ್ಜರಿ ಪ್ಲ್ಯಾನ್‌ ನಡೆದಿದೆ.

ಈಗಾಗ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ದೆಹಲಿಗೆ ತೆರಳಿ ಹೈಕಮಾಂಡ್‌ ಭೇಟಿಯಾಗಿದ್ದಾರೆ.. ಸರ್ಕಾರದ ಡ್ಯಾಮೇಜ್ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಸಂಪುಟ ಪುನಾರಚನೆಗೆ ಹೈಕಮಾಂಡ್‌ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಹುಲ್​ ಗಾಂಧಿ ಕೂಡ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗ್ತಿದೆ. ಸೋಮಾರಿ ಸಚಿವರು ಹಾಗೂ ವಿವಾದಾತ್ಮಕ ಕಮೆಂಟ್ ಮಾಡುವವರಿಗೆ ಸಂಪುಟದಿಂದ ಗೇಟ್‌ ಪಾಸ್‌ ಕೊಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.. ಸುಮಾರು 8 ರಿಂದ 10 ಸಚಿವರಿಗೆ ಸಂಪುಟದಿಂದ ಕೈಬಿಡಲು ತೀರ್ಮಾನಿಸಲಾಗಿದೆ ಅನ್ನೋ ಮಾಹಿತಿ ಇದೆ.

ಯಾರಿಗೆ ಕೊಕ್..?

ಹಿರಿಯ ಸಚಿವರಾದ ಕೆ.ಎನ್.ರಾಜಣ್ಣ, ಕೆ.ಎಚ್.ಮುನಿಯಪ್ಪರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.. ಎಚ್. ಕೆ.ಪಾಟೀಲ್, ಶರಣಬಸಪ್ಪ ದರ್ಶನಾಪುರ ಅವರಿಗೂ ಮಂತ್ರಿಸ್ಥಾನದಿಂದ ಗೇಟ್‌ ಪಾಸ್‌ ನೀಡಲಾಗುತ್ತೆ ಎನ್ನಲಾಗ್ತಿದೆ. ಅಲ್ಲದೇ, ರಹೀಂ ಖಾನ್, ಈಶ್ವರ್ ಖಂಡ್ರೆ ಅವರಿಗೂ ಸಂಪುಟದ ಬಾಗಿಲು ಮುಚ್ಚಲಿದೆಯಂತೆ.. ಇದರ ಜೊತೆಗೆ ಶರಣ್ ಪ್ರಕಾಶ್ ಪಾಟೀಲ್, ಬೋಸರಾಜ್‌ ಅವರಿಗೆ ಮಂತ್ರಿಸ್ಥಾನದಿಂದ ಕೊಕ್‌ ನೀಡಲಾಗುತ್ತಂತೆ.. ಕೊನೇದಾಗಿ ಹಿರಿಯ ಸಚಿವರಾದ ಡಾ.ಜಿ.ಪರಮೇಶ್ವರ್ ಹಾಗೂ ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್‌ರನ್ನ ಸಚಿವ ಸ್ಥಾನದಿಂದ ಬಿಡುಗಡೆ ಮಾಡಲಾಗುತ್ತೆ ಅಂತಾ ಹೇಳಲಾಗ್ತಿದೆ.))) ಈ ಎಲ್ಲರನ್ನು ಮಂತ್ರಿಸ್ಥಾನದಿಂದ ಬಿಡುಗಡೆ ಮಾಡಿ ಹೊಸಬರಿಗೆ ಅವಕಾಶ ನೀಡಲು ರಾಜ್ಯ ನಾಯಕರಿಗೆ ಹೈಕಮಾಂಡ್‌ ಸಂದೇಶ ರವಾನಿಸಿದೆ ಎನ್ನಲಾಗ್ತಿದೆ..

ಸಿದ್ದು ಸಂಪುಟ ಸೇರೋ ಹೊಸಬರು ಯಾರು..?

ಕೆಲಸ ಮಾಡದ ಸಚಿವರನ್ನು ಸಂಪುಟದಿಂದ ತೆಗೆದು ಹೊಸಬರಿಗೆ ಚಾನ್ಸ್‌ ನೀಡುವಂತೆ‌ ದೆಹಲಿ ಭೇಟಿ ವೇಳೆ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಹೈಕಮಾಂಡ್‌ ಸೂಚಿಸಿದೆ ಅಂತಾ ಹೇಳಲಾಗ್ತಿದೆ.. ಹಾಗಾದ್ರೆ, ಸಿದ್ದು ಸಂಪುಟ ಸೇರುವ ಶಾಸಕರು ಯಾರು ಅನ್ನೋದನ್ನು ಹೇಳ್ತೀವಿ ನೋಡಿ..

ಯಾರಿಗೆ ಸಚಿವ ಸ್ಥಾನ?

ವಿಧಾನಸಭೆ ಸ್ಪೀಕರ್ ಆಗಿರುವ ಯು.ಟಿ.ಖಾದರ್‌ಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ. ಯುನಿಯನ್‌ ಬ್ಯಾಂಕ್‌ ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಂತ್ರಿಸ್ಥಾನ ಕಳೆದುಕೊಂಡಿರುವ ಬಿ.ನಾಗೇಂದ್ರಗೆ ಮತ್ತೆ ಸಂಪುಟದಲ್ಲಿ ಅವಕಾಶ ಕೊಡಬಹುದು ಎನ್ನಲಾಗ್ತಿದೆ. ಅಲ್ಲದೇ, ಹಿರಿಯ ಶಾಸಕರಾದ ಟಿ.ಬಿ.ಜಯಚಂದ್ರ ಅಥವಾ ಎಚ್.ಕೆ ಪಾಟೀಲ್‌ಗೆ ಸ್ಪೀಕರ್‌ ಸ್ಥಾನ ಕೊಡಬಹುದು ಅಂತಾ ಹೇಳಲಾಗ್ತಿದೆ.. ಮತ್ತೊಂದೆಡೆ, ಬಿ.ಕೆ.ಹರಿಪ್ರಸಾದ್‌ಗೆ ಸಚಿವ ಸ್ಥಾನ ಅಥವಾ ಸಭಾಪತಿ ಸ್ಥಾನ ಸಿಗುವ ನಿರೀಕ್ಷೆ ಇದೆ..

ಸಚಿವರ ಖಾತೆಗಳು ಬದಲಾಗೋದು ಕನ್ಫರ್ಮ್

ಈಗಾಗ್ಲೇ ಸಚಿವರಾಗಿರುವ ಬೋಸರಾಜ್ ಕೈಬಿಟ್ಟು ಬಿ.ಕೆ.ಹರಿಪ್ರಸಾದ್‌ಗೆ ಅವಕಾಶ ನೀಡಬಹುದು ಎನ್ನಲಾಗ್ತಿದೆ.. ಇನ್ನೊಂದು ವಿಶೇಷ ಅಂದ್ರೆ ಕೆಲವು ಸಚಿವರ ಖಾತೆಗಳು ಬದಲಾಗೋದು ಕನ್ಫರ್ಮ್ ಅನ್ನೋ ಮಾಹಿತಿ ಹೊರಬಿದ್ದಿದೆ.. ಮಂತ್ರಿಸ್ಥಾನದಿಂದ ಗೇಟ್‌ ಪಾಸ್‌ ನೀಡದೇ ಇದ್ದರೆ ಸಚಿವರಾದ ಪರಮೇಶ್ವರ್, ರಾಮಲಿಂಗಾರೆಡ್ಡಿ, ದಿನೇಶ್ ಗುಂಡುರಾವ್, ಎಂ.ಬಿ.ಪಾಟೀಲ್ ಸೇರಿದಂತೆ ಇಲಾಖೆಗಳಲ್ಲಿ ಮಹತ್ವದ ಸಾಧನೆ ಮಾಡದ ಸಚಿವರಿಗೆ ಖಾತೆ ಬದಲಾವಣೆ ಮಾಡಲು ಹೈಕಮಾಂಡ್‌ ಸೂಚಿಸಿದೆ ಅಂತಾ ವಿಶ್ಲೇಷಣೆ ಮಾಡಲಾಗುತ್ತಿದೆ..

ಇನ್ನು, ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗ್ತಿದೆ. ಸತೀಶ್ ಜಾರಕಿಹೊಳಿ ಪರವಾಗಿ ಸಿಎಂ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗ್ತಿದೆ. ಹೈಕಮಾಂಡ್​ಗೆ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ ಇಬ್ಬರ ಹೆಸರು ಹೇಳಿದ್ದಾರಂತೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಯಾರಿಗೆ ಸಚಿವ ಸ್ಥಾನ ದೊರಕುತ್ತೆ? ಯಾರಿಗೆ ಕೆಪಿಸಿಸಿ ಪಟ್ಟ ಒಲಿಯುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

Exit mobile version