Site icon BosstvKannada

ಸರ್ಕಾರಿ ಪ್ರಾಯೋಜಿತ ಕೊಲೆ, ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ

ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಉಂಟಾಗಿ 10ಕ್ಕೂ ಹೆಚ್ಚು ಅಭಿಮಾನಿಗಳು ಮೃತಪಟ್ಟಿದ್ದಾರೆ.. ಚಿನ್ನಸ್ವಾಮಿ ಸ್ಟೇಡಿಯಂ ಮುಂಭಾಗದಲ್ಲಿ ಕಾಲ್ತುಳಿತದಿಂದ ದುರಂತ ಸಂಭವಿಸಿದೆ.. ಕಾಲ್ತುಳಿತಕ್ಕೆ ಸಿಲುಕಿ ಜನರು ಕಂಡಲ್ಲೇ ವಿಲ ವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ..

ಘಟನೆಯಲ್ಲಿ ಇನ್ನೂ ಹಲವರು ಅಸ್ವಸ್ಥಗೊಂಡಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ… ಇಷ್ಟೆಲ್ಲಾ ಆದಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವ್ಯವಸ್ಥೆಗೆ ಕ್ಷಮೆ ಕೇಳಿದ್ದಾರೆ. ಇದೇ ವಿಚಾರ ಇಟ್ಕೊಂಡು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ…

ಸರ್ಕಾರದ ವಿರುದ್ಧ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿರುವ ರಾಜ್ಯ ಬಿಜೆಪಿ, ಈ ದುರಂತಕ್ಕೆಲ್ಲಾ ಸರ್ಕಾರವೇ ಹೊಣೆ ಅಂತಾ ಆರೋಪಿಸಿದೆ.. ಹಲವರ ಜೀವ ಹೋಗಿದೆ.. ಇನ್ನೂ ಹಲವರು ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದಾರೆ.. ಇಂಥಾ ಸಂದರ್ಭದಲ್ಲೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಕ್ರಿಕೆಟಿಗರ ಜೊತೆಗೆ ಫೋಟೋ, ವಿಡಿಯೋ, ರೀಲ್ಸ್‌ ಮಾಡೋದ್ರಲ್ಲಿ ಬ್ಯುಸಿ ಆಗಿದ್ದಾರೆ ಅಂತಾ ಟೀಕಿಸಿದೆ..

ಮತ್ತೊಂದೆಡೆ, ಬಿಜೆಪಿ ನಾಯಕ ಸಿ.ಟಿ.ರವಿ ಕೂಡ ಟ್ವೀಟ್‌ ಮಾಡಿದ್ದು, ಪೂರ್ವಸಿದ್ಧತೆಯಿಲ್ಲದ ಸಂಭ್ರಮ ಅಂತಾ ಕಿಡಿಕಾರಿದ್ದಾರೆ.. ಅಲ್ಲದೇ ಇದೊಂದು ಸರ್ಕಾರಿ ಪ್ರಾಯೋಜಿತ ಕೊಲೆ.. ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ ಅಂತಾ ಆರೋಪಿಸಿದ್ದಾರೆ..

Exit mobile version